Home Breaking Entertainment News Kannada Urfi javed: ನಾ ಎಷ್ಟೇ ಅಂದ ಚಂದ ತೋರ್ಸಿದ್ರೂ ಯಾವ ಹುಡುಗ್ರೂ ‘ಆ’ ಮ್ಯಾಟರಿಗೆ ಧೈರ್ಯ...

Urfi javed: ನಾ ಎಷ್ಟೇ ಅಂದ ಚಂದ ತೋರ್ಸಿದ್ರೂ ಯಾವ ಹುಡುಗ್ರೂ ‘ಆ’ ಮ್ಯಾಟರಿಗೆ ಧೈರ್ಯ ಮಾಡ್ಲೆ ಇಲ್ಲ… ಒಬ್ರಿಗೂ ತಾಕತ್ತಿಲ್ಲ!! ಮಾತಲ್ಲೇ ಹುಡುಗರನ್ನು ಕೆಣಕಿ, ಕೆರಳಿಸಿದ ಉರ್ಫಿ ಜಾವೇದ್!!

Urfi Javed
Image source- Latestly

Hindu neighbor gifts plot of land

Hindu neighbour gifts land to Muslim journalist

Urfi Javed: ಅರೆಬರೆ ಉಡುಪು ಧರಿಸುವ ಮೂಲಕವೇ ಫೇಮಸ್ ಆಗಿರೋ ಉರ್ಫಿ ಜಾವೇದ್ (Urfi Javed) ತನ್ನ ಬಟ್ಟೆಗಳಿಂದ ಎಷ್ಟೇ ಟ್ರೋಲ್ ಆದರೂ ಕೂಡ ಒಂದು ರೀತಿಯಲ್ಲಿ ಸುಂದರವಾದ, ಬೆಳ್ಳ-ಬೆಳ್ಳನೆಯ ಮೈಮಾಟದಿಂದ ಅನೇಕ ಪಡ್ಡೆ ಹುಡುಗರ ಮನಗೆದ್ದಿದ್ದಾಳೆ. ಆದರೀಗ ಈ ಅರೆಬರೆ ಬಟ್ಟೆಯ ಚೆಲುವೆ ಇಡೀ ಯುವಕರನ್ನೇ ಕೆರಳಿಸುವಂತ ಹೇಳಿಕೆ ನೀಡಿ ಸೆನ್ಸೇಷನ್(Sensation) ಉಂಟುಮಾಡಿದ್ದಾಳೆ!!

ಹೌದು, ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ(Interview) ಉರ್ಫಿ, ಹುಡುಗರ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾವಾಗಲೂ ತುಂಡುಡುಗೆ ಧರಿಸಿ, ಭಾರೀ ವೈರಲ್ ಆಗ್ತಿದ್ದ ಉರ್ಫಿ ಇತ್ತೀಚೆಗಷ್ಟೆ ಮೈ ತುಂಬಾ ಬಟ್ಟೆ ಹಾಕಿ ನೆಟ್ಟಿಗರಿಗೆ ಶಾಕ್ ನೀಡಿದ್ದರು. ಆದರೀಗ ಈ ಬೆನ್ನಲ್ಲೇ ಸ್ಟೇಟ್ಮೆಂಟ್(Statement) ಒಂದನ್ನು ಕೊಡುವ ಮೂಲಕ ಮತ್ತೆ ಹುಡುಗುರನ್ನು ಕೆರಳಿಸಿದ್ದು, ನಾನು ಇಷ್ಟೆಲ್ಲಾ ನನ್ನ ಅಂದ ಚಂದವನ್ನೆಲ್ಲಾ ತೋರಿಸಿದ್ರೂ ಯಾರೂ ನನ್ನ ಜೊತೆ ಡೇಟ್ ಅಥವಾ ಫ್ಲರ್ಟ್‌(Flurt) ಮಾಡಲು ಇಷ್ಟ ಪಡುವುದಿಲ್ಲ. ಹುಡುಗರು ಯಾಕೆ ಹುಡುಗಿಯರೂ ಕೂಡ ಧೈರ್ಯ ಮಾಡುವುದಿಲ್ಲ ಎಂದು ಹೇಳಿ ಇನ್ಡೈರೆಕ್ಟ್ ಆಗಿ ಫ್ಲರ್ಟ್ ಇಲ್ಲ ಡೇಟ್ ಮಾಡಲು ಆಹ್ವಾನ ನೀಡಿದ್ದಾಳೆ.

ಅಂದಹಾಗೆ ಸಂದರ್ಶನದಲ್ಲಿ ರಣವೀರ್ ಅಲ್ಲಾಬಾಡಿಯಾ(Ranveer allabadiya) ಅವರು ಉರ್ಫಿಗೆ “ಈಗಿನ ಜನರೇಷನ್ ಹುಡುಗರು ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದಾರೆ ಅನಿಸುತ್ತಾ? ಅಥವಾ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುವವರು ಇದ್ದಾರೆ ಅನಿಸುತ್ತಾ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿರೋ ನಟಿ ಕೊಂಚ ಮಟ್ಟಿಗೆ ಹುಡುಗುರನ್ನು ಕೆರಳಿಸಿದ್ದಾರೆ.

ಯಸ್, ಇದಕ್ಕೆ ಉತ್ತರಿಸಿದ ಉರ್ಫಿ “ನಾನು ನೋಡಿದಂತೆ ಬಾಂಬೆ(Bombay)ಯಲ್ಲಿರುವ ಹುಡುಗರು ಸ್ವಲ್ಪ ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಲ್ಲದೆ ಬೇರೆ ಬೇರೆ ಕಡೆಯ ಹುಡುಗರನ್ನು ನಾನು ಭೇಟಿ ಮಾಡಿರುವೆ. ಆ ಹುಡುಗರೂ ಕೂಡ ಖಂಡಿತಾ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಹುಟ್ಟಿ ಬೆಳೆದ ಜಾಗಕ್ಕೂ ಈಗ ಬಂದಿರುವ ಜಾಗಕ್ಕೂ ತುಂಬಾ ವ್ಯತ್ಯಾಸವಿದೆ. ಬಾಂಬೆಯಲ್ಲಿ ತುಂಬಾ ಓಪನ್ ಮೈಂಡ್ ಇರುವ ಹುಡುಗರು ಇದ್ದಾರೆ. ಹುಡುಗರು ಸಖತ್ ಬೋಲ್ಡ್‌ ಆಗಿ ಸಪೋರ್ಟ್ ಮಾಡುತ್ತಾರೆ ತುಂಬಾ ವಿಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ಕೆಲವೊಮ್ಮೆ ಓಪನ್ ಮೈಂಡ್ ವ್ಯಕ್ತಿಗಳ ರೀತಿ ತೋರಿಸಿಕೊಳ್ಳುತ್ತಾರೆ” ಎಂದಿದ್ದಾರೆ.

ಅಲ್ಲದೆ “ಹುಡುಗರ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ. ಏಕೆಂದರೆ ನಾನು ಡೇಟ್ ಮಾಡಿಲ್ಲ ಸದಾ ಸ್ನೇಹಿತೆಯಾಗಿರುತ್ತಿದ್ದೆ. ಸ್ನೇಹಿತರ ಜೊತೆ ಒಂದು ರೀತಿ ವರ್ತಿಸಿ ಗರ್ಲ್‌ ಫ್ರೆಂಡ್‌ ಜೊತೆ ಒಂದು ರೀತಿ ವರ್ತಿಸಿದರೆ ನನಗೆ ಗೊತ್ತಾಗುವುದಿಲ್ಲ. ಯಾರಿಗೆಲ್ಲಾ ಸ್ನೇಹಿತೆಯಾಗಿರುವೆ ಅವರೆಲ್ಲಾ ಓಪನ್ ಮೈಂಡ್‌ ಹೊಂದಿದ್ದಾರೆ. ಹುಡುಗರು ನನ್ನ ಜೊತೆ ಫ್ಲರ್ಟ್(flurt) ಮಾಡಬೇಕು ಅನಿಸಿದರೆ ಮಾಡಲಿ ನಾನು ಏನೂ ಅಂದುಕೊಳ್ಳುವುದಿಲ್ಲ ಎಂಜಾಯ್ ಮಾಡುತ್ತೀನಿ. ಆದ್ರೆ ಹುಡುಗರೇ ಫ್ಲರ್ಟ್‌ ಮಾಡಲ್ಲ ಇನ್ನು ಹುಡುಗಿಯರು ಮಾಡುತ್ತಾರಾ?’ ಎಂದಿದ್ದಾರೆ ಉರ್ಫಿ.

ಬಳಿಕ ಮಾತನಾಡಿದ ಅವರು “ರಿಲೇಷನ್‌ಶಿಪ್‌(Relationship) ಒಂದು ಮಾಡಲು ಇಷ್ಟ ಪಡುವುದಿಲ್ಲ. ನೀನು ನನ್ನ ಒಳ್ಳೆಯ ಸ್ನೇಹಿತನಾಗಿದ್ದರೆ ಖಂಡಿತಾ ನಾನು ಒಳ್ಳೆ ಸ್ನೇಹಿತೆಯಾಗಿ ಉಳಿಯುವೆ. ಈ ಲವ್ ಡೇಟಿಂಗ್ ಬಗ್ಗೆ ನನಗೆ ಇಂಟ್ರೆಸ್ಟ್‌ ಇಲ್ಲ ಅಂದ್ಮೇಲೆ ಹುಡುಗರು ಹೇಗೆ ಎಂದು ಅರ್ಥ ಮಾಡಿಕೊಳ್ಳಲು ನನಗೆ ಇಷ್ಟನೇ ಇಲ್ಲ. ನನ್ನನ್ನು ಸಖತ್ ಟ್ರೋಲ್ ಮಾಡುತ್ತಾರೆ. ಸೆಕ್ಯೂಯಲ್ ರೀತಿಯಲ್ಲಿ ನೋಡುತ್ತಾರೆ. ಆದರೆ ನೇರವಾಗಿ ಭೇಟಿ ಮಾಡಿ ಮಾತನಾಡಿರುವ ವ್ಯಕ್ತಿಗಳು ಉರ್ಫಿ ನೀನು ಸಖತ್ ಡಿಫರೆಂಟ್ ಆಗಿರುವೆ ನಿನ್ನ ಉಡುಪು ಮತ್ತು ಟ್ರೋಲ್‌ಗಳನ್ನು ನೋಡಿ ಜಡ್ಜ್‌ ಮಾಡಿ ತಪ್ಪು ಮಾಡಿದ್ದೀವಿ ಎನ್ನುತ್ತಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Uttar pradesh: ಮೋದಿ, ಯೋಗಿಯನ್ನು ಹೊಗಳಿದಕ್ಕೆ ಕಾರು ಹರಿಸಿ ಪ್ರಯಾಣಿಕನನ್ನೇ ಕೊಂದ ಕ್ಯಾಬ್ ಡ್ರೈವರ್!!