Home Breaking Entertainment News Kannada Cannes 2023: ಐಶ್ವರ್ಯ ರೈ ವಿಚಿತ್ರ ಡ್ರೆಸ್ ಗೆ ಎಲ್ಲೆಡೆ ಸಖತ್ ಟ್ರೋಲ್! ಏಲಿಯನ್ ಇನ್ಸ್ಪೈರ್...

Cannes 2023: ಐಶ್ವರ್ಯ ರೈ ವಿಚಿತ್ರ ಡ್ರೆಸ್ ಗೆ ಎಲ್ಲೆಡೆ ಸಖತ್ ಟ್ರೋಲ್! ಏಲಿಯನ್ ಇನ್ಸ್ಪೈರ್ ಎಂದು ಟೀಕೆ ಮಾಡಿದ ನೆಟ್ಟಿಗರು!!!

Cannes 2023
Source:Hindustan times

Hindu neighbor gifts plot of land

Hindu neighbour gifts land to Muslim journalist

Cannes 2023: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಅವರ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ 2’ ನಲ್ಲಿ (ponniyin selvan-2) ಅಭಿನಯಿಸಿದ್ದು,‌ ಐಶ್ ನಟನೆ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಹಾಗೇ ಸಿನಿಮಾವು ಉತ್ತಮ‌ ಗಳಿಕೆ ಕಂಡಿದೆ. ಇದೀಗ ಸಿನಿಮಾದ ಮೆಚ್ಚುಗೆಯ ಬೆನ್ನಲ್ಲೆ ನಟಿ ಐಶ್ವರ್ಯ ಸಖತ್ ಟ್ರೋಲ್ ಆಗ್ತಿದ್ದಾರೆ.

ಹೌದು, 76ನೇ ಕಾನ್ ಫಿಲ್ಮ್ ಫೆಸ್ಟಿವಲ್ (Cannes 2023) ರೆಡ್ ಕಾರ್ಪೆಟ್ ಮೇಲೆ ಐಶ್ ಎಂಟ್ರಿಕೊಟ್ಟಿದ್ದು, ಮಾಜಿ ವಿಶ್ವಸುಂದರಿಯು ಸೋಫಿ ಕೌಚರ್ ಕಲೆಕ್ಷನ್‌ನ ಸಿಲ್ವರ್ ಕಲರ್ ಗೌನ್‌ಲ್ಲಿ ರಾಣಿಯಂತೆ ಕಂಗೊಳಿಸಿದ್ದಾರೆ. ಅರ್ಧ ದೇಹ ಸುತ್ತಿಕೊಂಡಂತ ದೊಡ್ಡ ಕುಲಾಯಿ, ಹಿಂದೆ ಉದ್ದ ಟ್ರೇಲ್ ಇರುವಂತಹ ಗೌನ್ ಗಮನ ಸೆಳೆಯುತ್ತಿದೆ. ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಹರಡಿದ ಕೂದಲಿನಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದಾರೆ. ಆದರೆ, ನಟಿಯ ವಿಚಿತ್ರ ವಸ್ತ್ರಕ್ಕೆ ಟ್ರೋಲ್ ಆಗ್ತಾ ಇದೆ. ಕೆಲವರು ಹೊಗಳಿದರೆ, ಇನ್ನು ಕೆಲವರು ನೆಟ್ಟಿಗರು ಏಲಿಯನ್ ಇನ್ಸ್ಪೈರ್ ಎಂದು ಟೀಕೆ ಮಾಡುತ್ತಿದ್ದಾರೆ.

ಪ್ರತಿ ವರ್ಷ ಐಶ್ವರ್ಯ ರೈ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿ ಆಗುತ್ತಾರೆ. ತಮ್ಮ ವಿಭಿನ್ನ ಲುಕ್‌ನಿಂದ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. 2002ರಲ್ಲಿ ಮೊದಲ ಬಾರಿಗೆ ‘ದೇವದಾಸ್’ ಚಿತ್ರದ ಸಹನಟ ಶಾರುಕ್ ಖಾನ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಐಶ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ನಂತರ ಪ್ರತಿ ವರ್ಷವೂ ನಟಿ ಕಾನ್‌ ಉತ್ಸವಕ್ಕೆ ಎಂಟ್ರಿ ಕೊಡುತ್ತಾರೆ. ಇದು 21ನೇ ಬಾರಿ ನಟಿ ಭಾಗಿಯಾಗುತ್ತಿರುವುದು.

ಆದರೆ, ಈ ಬಾರಿಯ ನಟಿಯ ಡ್ರೆಸ್ ಗೆ ಸಖತ್ ಟ್ರೋಲ್ ಆಗಿದ್ದಾರೆ.
ಆಕೆಯ ವಿಚಿತ್ರ ಗೌನ್ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ನಟಿಯ ಅಭಿಮಾನಿಗಳು ಹೊಗಳಿ, ಲುಕ್‌ ನೋಡಿ ಫಿದಾ ಆಗಿದ್ದಾರೆ. ಕೆಲವರು ಐಶ್ ಅವತಾರ ಚಿಕನ್ ಶವರ್ಮಾ, ಗಿಫ್ಟ್ ವ್ರಾಪರ್‌ ನೆನಪಿಸುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೀಮ್ಸ್‌ಗೋಸ್ಕರ ಆಕೆ ಈ ವೇಷದಲ್ಲಿ ಕಾಣಿಸಿಕೊಂಡಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

 

ಇದನ್ನು ಓದಿ: Puttur: ಪುತ್ತೂರು : ಬ್ಯಾನರ್ ವಿವಾದ,ದೌರ್ಜನ್ಯ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ