Home Breaking Entertainment News Kannada Cameron Diaz: ಖ್ಯಾತ ಹಾಲಿವುಡ್ ನಟಿ ಕ್ಯಾಮೆರಾನ್ ಡಿಯಾಜ್’ಗೆ 51 ರ ವಯಸ್ಸಿನಲ್ಲಿ ಗಂಡು ಮಗು...

Cameron Diaz: ಖ್ಯಾತ ಹಾಲಿವುಡ್ ನಟಿ ಕ್ಯಾಮೆರಾನ್ ಡಿಯಾಜ್’ಗೆ 51 ರ ವಯಸ್ಸಿನಲ್ಲಿ ಗಂಡು ಮಗು !

Cameron Diaz
Photo courtesy: tmz.com

Hindu neighbor gifts plot of land

Hindu neighbour gifts land to Muslim journalist

Cameron Diaz: ಹಾಲಿವುಡ್‌ (Hollywood) ಖ್ಯಾತ ನಟಿ ಕ್ಯಾಮೆರಾನ್ ಡಿಯಾಜ್ (Cameron Diaz) ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ತಾನು ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ಕೊಟ್ಟಿದ್ದಾರೆ. ಕ್ಯಾಮೆರಾನ್ ಡಿಯಾಜ್ ತನ್ನ51ನೇ ವಯಸ್ಸಿನಲ್ಲಿ ಮಗು ಮಾಡಿಕೊಂಡಿದ್ದು, ಈ ಬಗ್ಗೆ ಆಕೆಯ ಪತಿ ಬೆಂಜಿ ಮ್ಯಾಡೆನ್ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಆಕೆಯ ಪತಿ ಬೆಂಜಿ ಮ್ಯಾಡೆನ್, ಪತ್ನಿ ಕ್ಯಾಮೆರಾನ್ ಡಿಯಾಜ್ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿಸಿದ್ದಾರೆ. ”ನಮ್ಮ ಕುಟುಂಬಕ್ಕೆ ಮಗನ ಆಗಮನವಾಗಿದೆ. ನಾವು ಆತನಿಗೆ ಕಾರ್ಡಿನಲ್ ಮ್ಯಾಡೆನ್ ಎಂಬುದಾಗಿ ಹೆಸರಿಡಲು ತೀರ್ಮಾನಿಸಿದ್ದೇವೆ. ಆತ ನೋಡಲು ತುಂಬ ಮುದ್ದಾಗಿದ್ದಾನೆ. ಮಗುವಿನ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೋ ಪೋಸ್ಟ್ ಮಾಡಿಲ್ಲ. ಆದ್ರೂ, ಆತ ತುಂಬ ಕ್ಯೂಟಾಗಿದ್ದಾನೆ ಎಂದು ಹೇಳಲು ಬಯಸುತ್ತೇವೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ” ಎಂದು ಸೋಷಿಯಲ್‌ ಮೀಡಿಯಾದಲ್ಲಿ ಆತ ಬರೆದುಕೊಂಡಿದ್ದಾರೆ.

ಕ್ಯಾಮೆರಾನ್ ಡಿಯಾಜ್ ಹಾಗೂ ಬೆಂಜಿ ಮ್ಯಾಡೆನ್ 2015 ರಲ್ಲಿ ಮದುವೆಯಾಗಿದ್ದರು, ಮತ್ತು ಅವರಿಗೆ ಈಗಾಗಲೇ ಓರ್ವ ಮಗಳಿದ್ದಾಳೆ. 2019 ರಲ್ಲಿ ಈ ನಟಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್ ಡಿಯಾಜ್ ತಾಯಿಯಾಗಿದ್ದಾರೆ.

Indian Women: ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ- ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ !

ಆಕರ್ಷಕವಾದ ಮತ್ತು ಎತ್ತರದ ನೀಲಿ ಕಣ್ಣಿನ ನೈಸರ್ಗಿಕ ಮೈಬಣ್ಣದ, ಕ್ಯಾಮೆರಾನ್ ಡಯಾಜ್ 1972 ರಲ್ಲಿ ಸ್ಯಾನ್ ಡಿಯಾಗೋದಲ್ಲಿ ಕ್ಯೂಬನ್-ಅಮೇರಿಕನ್ ತಂದೆ ಮತ್ತು ಜರ್ಮನ್ ತಾಯಿಯ ಮಗಳಾಗಿ ಜನಿಸಿದರು. ಕ್ಯಾಮೆರಾನ್ 16 ನೇ ವಯಸ್ಸಿನಲ್ಲಿ ಮನೆ ತೊರೆದು, ಮುಂದಿನ 5 ವರ್ಷಗಳ ಕಾಲ ಜಪಾನ್, ಆಸ್ಟ್ರೇಲಿಯಾ, ಮೆಕ್ಸಿಕೋ, ಮೊರಾಕೊ ಮತ್ತು ಪ್ಯಾರಿಸ್‌ನಂತಹ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ತನ್ನ 21 ನೇ ವಯಸ್ಸಿನಲ್ಲಿ ಆಕೆ ಮತ್ತೆ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಹಿಂದಿರುಗಿ, ಆಗ ದಿ ಮಾಸ್ಕ್ (1994) ನಲ್ಲಿ ದೊಡ್ಡ ಪಾತ್ರಕ್ಕಾಗಿ ಆಡಿಷನ್ ಮಾಡುವ ಅವಕಾಶ ಸಿಕ್ಕಿತ್ತು. ಆಕೆಗೆ ಹಿಂದಿನ ಯಾವುದೇ ನಟನೆಯ ಅನುಭವವಿಲ್ಲದಿದ್ದರೂ, ಜಿಮ್ ಕ್ಯಾರಿ ಎದುರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದಳು.

ಇದನ್ನೂ ಓದಿ: ರೈಲಿಗೆ ಸಿಲುಕಿ ಸಾವಿಗೀಡಾದವನ ಕಾಲನ್ನು ಎಳೆದು ತಿಂದ ವ್ಯಕ್ತಿ; ಭಯಾನಕ ವಿಡಿಯೋ ವೈರಲ್ !!

ಮುಂದಿನ 3 ವರ್ಷಗಳಲ್ಲಿ, ದಿ ಲಾಸ್ಟ್ ಸಪ್ಪರ್ (1995), ಫೀಲಿಂಗ್ ಮಿನ್ನೇಸೋಟ (1996), ಮತ್ತು ಹೆಡ್ ಅಬೌವ್ ವಾಟರ್ (1996). ಅವರು ಮೈ ಬೆಸ್ಟ್ ಫ್ರೆಂಡ್ಸ್ ವೆಡ್ಡಿಂಗ್ (1997) ನಲ್ಲಿ ಮುಖ್ಯ ಸ್ಟ್ರೀಮ್ ಚಲನಚಿತ್ರಗಳಲ್ಲಿ ನಟಿಸಿದರು. ನಂತರ 1998 ರಲ್ಲಿ ಗಲ್ಲಾಪೆಟ್ಟಿಗೆಯ ಸ್ಮ್ಯಾಶ್ ದೇರ್ಸ್ ಸಮ್ಥಿಂಗ್ ಅಬೌಟ್ ಮೇರಿ (1998) ನಲ್ಲಿನ ಅಭಿನಯಡಾ ಮೂಲಕ ಆಕೆ ಸ್ಟಾರ್ ಸ್ಥಾನಮಾನವನ್ನು ಪಡೆದರು. ಅಲ್ಲದೆ, ಹಾಲಿವುಡ್‌ನ ಅತ್ಯಂತ ಸೆಕ್ಸಿಯೆಸ್ಟ್ ನಟಿಯರ ಪಟ್ಟಿಯಲ್ಲೂ ಆಕೆಯ ಹೆಸರು ಬಂದಿತ್ತು.