Home Breaking Entertainment News Kannada Actress Sai Pallavi Networth: ಸಿಂಪಲ್ ಕ್ವೀನ್ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ?...

Actress Sai Pallavi Networth: ಸಿಂಪಲ್ ಕ್ವೀನ್ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ನಟಿ ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?

Actress Sai Pallavi Networth
Source: Nadunudi

Hindu neighbor gifts plot of land

Hindu neighbour gifts land to Muslim journalist

Actress Sai Pallavi Networth: ನಟಿ ಸಾಯಿ ಪಲ್ಲವಿ (Sai Pallavi) ಸರಳತೆಗೆ ಹೆಸರುವಾಸಿಯಾದ ಸಿಂಪಲ್ ಬ್ಯೂಟಿ ಕ್ವೀನ್. ಆಕೆಯ ನಟನೆಗೆ ಫಿದಾ ಆದವರು ಮಾತ್ರ ಅಲ್ಲ ಆಕೆಯ ಸಹಜ ಸೌಂದರ್ಯಕ್ಕೂ ಮಾರು ಹೋದವರು ತುಂಬಾ ಮಂದಿ ಇದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ಸಾಯಿ‌ಪಲ್ಲವಿಗೆ ಸಖತ್ ಡಿಮ್ಯಾಂಡ್ ಇದೆ. ಇವರು ಗ್ಲ್ಯಾಮರ್ ಗೆ ಜಾಸ್ತಿ ಒತ್ತು ಕೊಡದೇ, ತಮ್ಮ ಸಹಜ ನಟನೆಯ ಮೂಲಕವೇ ಜನಮನ ಗೆದ್ದಿರುವ ನಟಿ ಎಂದರೆ ತಪ್ಪಾಗಲಾರದು.

“ಪ್ರೇಮಂ” ಸಿನಿಮಾದ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ಈ ನಟಿ ತಮ್ಮ ಸಹಜ ಅಭಿನಯದ ‘ಅದಾ’ ಮೂಲಕ ಅಭಿಮಾನಿಗಳನ್ನು ‘ಫಿದಾ’ (Fida) ಆಗುವಂತೆ ಮಾಡಿ ಯಶಸ್ಸು ಪಡೆದು, ಎಲ್ಲರ ಮನಸ್ಸಿನಲ್ಲಿ ಮನೆಮಾತಾಗಿದ್ದಾರೆ. ಸಾಯಿ ಪಲ್ಲವಿ ಅವರು ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹೀಗಾಗಿ, ಅವರ ಆಸ್ತಿ ಗಳಿಕೆಯಲ್ಲಿ ಏರಿಕೆ ಆಗುತ್ತಿದೆ. ಹಾಗಾದರೆ ನಟಿ ಸಾಯಿಪಲ್ಲವಿಯ ಆಸ್ತಿ ಮೌಲ್ಯ (Actress Sai Pallavi Networth) ಎಷ್ಟಿರಬಹುದು?

ಸಾಯಿ ಪಲ್ಲವಿ ಸಿನಿಮಾದ ಕಥೆಯನ್ನು ಕೇಳಿ, ಮಹತ್ವದ ಪಾತ್ರವಿದ್ದರೆ ಆಯ್ದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಇನ್ನು ನಟಿ ತಮ್ಮ ಪ್ರತಿ ಸಿನಿಮಾಗೆ 1-2 ಕೋಟಿ ರೂಪಾಯಿ ಸಂಭಾವನೆ (Sai Pallavi Salary) ಪಡೆಯುತ್ತಾರೆ. ಅವರ ಒಟ್ಟೂ ಆಸ್ತಿ ಅಂದಾಜು 30 ಕೋಟಿ ರೂಪಾಯಿ ಇದೆ ಎಂದು ಹೇಳಲಾಗಿದೆ. ನಟಿ ಕೊಯಿಮತ್ತೂರಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ.

ಸಾಯಿಪಲ್ಲವಿ ನಟಿ ಆಗುವ ಮೊದಲು ವೈದ್ಯೆ (doctor) ಆಗಿದ್ದರಂತೆ. ಇವರು ನಟಿ ಮಾತ್ರವಲ್ಲ ನಾಟ್ಯಮಯಿಯು ಹೌದು. ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಇದರಿಂದ ಅವರಿಗೆ ಬಣ್ಣದ ಲೋಕದ ಜೊತೆ ನಂಟು ಬೆಳೆಯಿತು. 2015ರಲ್ಲಿ ‘ಪ್ರೇಮಂ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟರು. ನಂತರದಲ್ಲಿ ತಮ್ಮ ಸಹಜ ನಟನೆಯಿಂದ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದರು. ‘ಫಿದಾ’, ‘ಶ್ಯಾಮ್ ಸಿಂಘ ರಾಯ್​’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Donald Trump: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ದೋಷಿ!!