Home Breaking Entertainment News Kannada Rashmika Mandanna : ಕಿರಿಕ್ ಬೆಡಗಿಯ ಹೊಸ ಕಿರಿಕ್! ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಅಂದಳು...

Rashmika Mandanna : ಕಿರಿಕ್ ಬೆಡಗಿಯ ಹೊಸ ಕಿರಿಕ್! ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಅಂದಳು ಬೆಡಗಿ!

Actress Rashmika Mandanna

Hindu neighbor gifts plot of land

Hindu neighbour gifts land to Muslim journalist

Actress Rashmika Mandanna: ಕಿರಿಕ್ ಚೆಲುವೆ ರಶ್ಮಿಕಾ ಮಂದಣ್ಣ(Actress Rashmika Mandanna) ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಕಾಂತಾರ ಸಿನೆಮಾದ(Kantara Cinema)ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್ ಕ್ರಷ್ ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಏರು ಪೇರಾಗುವಂತೆ ಮಾಡೋದು ಕಾಮನ್. ಇದೀಗ, ಕಿರಿಕ್ ಬೆಡಗಿ ತಮ್ಮ ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದನ್ನ ತಿಳಿಸಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ (Kirik Party) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ತೆಲುಗು(Telugu) ತಮಿಳು, ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ತನ್ನ ಛಾಪು ಮೂಡಿಸುತ್ತಿರುವುದು ಗೊತ್ತಿರುವ ವಿಚಾರವೇ!! ಅಲ್ಲು ಅರ್ಜುನ್( Allu Arjun) ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ಎಲ್ಲೆಡೆ ಟ್ರೆಂಡ್ ಸೃಷ್ಟಿ ಮಾಡಿದೆ. ಅದರಲ್ಲೂ ಖ್ಯಾತ ಸಂಗೀತ ನಿರ್ದೇಶಕ ದೇವಿ ಪ್ರಸಾದ್ ರವರ ʼಸಾಮಿ ಸಾಮಿʼ, ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ..’ ಕಿರಿಕ್ ಬೆಡಗಿಗೆ ಒಂದು ರೀತಿಯಲ್ಲಿ ಒಂದು ದೊಡ್ಡ ಯಶಸ್ಸು ತಂದು ಕೊಡಲು ಕಾರಣವಾಯಿತು ಎಂದರೆ ತಪ್ಪಾಗದು. ಹೀಗಾಗಿ, ಕಿರಿಕ್ ಬ್ಯೂಟಿ ಎಲ್ಲೇ ಹೋದರೂ ಕೂಡ ಸಾಮಿ ಸಾಮಿ ಸ್ಟೆಪ್ಗೆ ಬಾರಿ ಡಿಮ್ಯಾಂಡ್ ಇದ್ದಿದ್ದು ಮಾತ್ರ ಸುಳ್ಳಲ್ಲ.

ಪುಷ್ಪ (Pushpa )ಸಿನೆಮಾದ ಹಾಡು , ಡೈಲಾಗ್ಸ್ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದರಲ್ಲಿಯೂ ಪುಷ್ಪ ಚಿತ್ರದ(Pushpa Movie) ಹಾಡಿಗೆ ರಶ್ಮಿಕಾ ಮಂದಣ್ಣ ಮಾಡಿದ ಸಾಮಿ ಸಾಮಿ ಹಾಡಿನ ಡ್ಯಾನ್ಸ್‌-( Saami Saami Step) ವೈರಲ್ ಆಗಿ ಸಂಚಲನ ಮೂಡಿಸಿತ್ತು. ಎಲ್ಲೇ ಹೋದರು ಬಂದರೂ ಎಲ್ಲರ ಬಾಯಲ್ಲಿ ಕೇಳಿಬರುತ್ತಿದ್ದ ಹಾಡು ಸೋಷಿಯಲ್ ಮೀಡಿಯಾದಲ್ಲಿಯು ನೆಟ್ಟಿಗರ ಹಾಟ್ ಫೇವರೆಟ್ ಆಗಿ ಈ ಹಾಡಿನ ರೀಲ್ ಮಾಡುವ ಮಂದಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅಷ್ಟೇ ಏಕೆ!! ಕಿರಿಕ್‌ ಬೆಡಗಿ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಭಿಮಾನಿಗಳು ಸಾಮಿ ಸಾಮಿ ಸ್ಟೆಪ್ ಮಾಡುವಂತೆ ಮನವಿ ಮಾಡುತ್ತಿದ್ದುದು ಕಾಮನ್ ಸಂಗತಿ. ಆದರೆ, ನ್ಯಾಷನಲ್ ಕ್ರಷ್ ಇನ್ನು ಮುಂದೆ ಆ ಸ್ಟೆಪ್ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇತ್ತಿಚೇಗೆ ರಶ್ಮಿಕಾ ಅವರ ಅಭಿಮಾನಿಯೊಬ್ಬರು( Rashmika Fan Follower)ರಶ್ಮಿಕಾ ಅವರೊಂದಿಗೆ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಬೇಕು ಎಂದು ಬಯಸಿದ್ದು, ಆದರೆ ಈ ಸಂದರ್ಭ ನ್ಯಾಷನಲ್ ಕ್ರಷ್ ಇನ್ನೂ ಮುಂದೆ ಈ ಸ್ಟೆಪ್ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. “ನಾನು ಸಾಮಿ ಸಾಮಿ ಸ್ಟೆಪ್ ಅನ್ನು ಈಗಾಗಲೇ ಅನೇಕ ಬಾರಿ ಮಾಡಿದ್ದು, ನನಗೆ ವಯಸ್ಸಾದಾಗ ಬೆನ್ನು ನೋವಿನ ಸಮಸ್ಯೆ ಕಾಡುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದ್ದು, ಪ್ರತಿ ಬಾರಿ ಎಲ್ಲೇ ಹೋದರೂ ಇದನ್ನೇ ಕೇಳಿದಾಗ ಬೇಜಾರಾಗುತ್ತದೆ. ಇದರ ಬದಲಿಗೆ ಮುಂದಿನ ದಿನಗಳಲ್ಲಿ ಹೊಸದೇನಾದರೂ ಮಾಡುವ ಪ್ರಯತ್ನ ಮಾಡುವುದಾಗಿ ಅಭಿಮಾನಿಗಳ ನಿರಾಶೆಯಾಗದಂತೆ ಸಮಾಧಾನಕರ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Mrunal Thakur: ‘ನನ್ನ ಬಾಳಲ್ಲೂ ಓದಲಾಗದ ಒಂದಷ್ಟು ಪುಟಗಳಿವೆ’ ; ನಟಿ ಮೃಣಾಲ್ ಠಾಕೂರ್ ಕಣ್ಣೀರು !