Home Breaking Entertainment News Kannada Actor Yash: ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿದ್ರು 350 ಕೋಟಿ ಬಿಗ್ ಬಜೆಟ್’ನ ಆ...

Actor Yash: ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿದ್ರು 350 ಕೋಟಿ ಬಿಗ್ ಬಜೆಟ್’ನ ಆ ಚಿತ್ರ, ಯಾಕಿರಬಹುದು ಗೊತ್ತಾ ?

Actor Yash
Image source: IndiaGlitz

Hindu neighbor gifts plot of land

Hindu neighbour gifts land to Muslim journalist

Actor Yash reject Film: ಕೆ.ಜಿ.ಎಫ್ (KGF) ನಂತರ ರಾಕಿಂಗ್ ಸ್ಟಾರ್ ಯಶ್ (Actor Yash) ಸಿನಿಮಾ ಮಾಡಿಲ್ಲ. ಅಲ್ಲದೆ, ಮುಂದೆ ಮಾಡಲಿರುವ ಯಾವ ಸಿನಿಮಾಗಳ ಸುಳಿವೂ ಸಿಕ್ಕಿಲ್ಲ. ಹಲವು ನಿರ್ದೇಶಕರ ಜೊತೆಗೆ ಯಶ್ ಹೆಸರು ತಳುಕು ಹಾಕಿಕೊಂಡಿದ್ದು, ‘ಈ’ ನಿರ್ದೇಶಕರ ಜೊತೆಗೆ ಸಿನಿಮಾ ಮಾಡಲಿದ್ದಾರೆ, ‘ಆ’ ನಿರ್ದೇಶಕರ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಮಾತ್ರ ಕೇಳಿಬರುತ್ತಿತ್ತು. ಇದರಿಂದ ಬೇಸತ್ತ ಯಶ್ ಅಭಿಮಾನಿಗಳು ಮುಂದಿನ ಸಿನಿಮಾದ ಅಪ್ಡೇಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು. ಆದರೂ ಯಶ್ ಯಾವುದೇ ಹೇಳಿಕೆ ನೀಡಿರಲಿಲ್ಲ. ಇದೀಗ ಮತ್ತೊಂದು ವಿಚಾರ ಹರಿದಾಡುತ್ತಿದ್ದು, ಯಶ್ 350 ಕೋಟಿ ಬಿಗ್ ಬಜೆಟ್’ನ ಆ ಚಿತ್ರ ರಿಜೆಕ್ಟ್ ಮಾಡಿದ್ರು (Actor Yash reject Film) ಎಂದು ಹೇಳಲಾಗುತ್ತಿದೆ. ಯಾಕಾಗಿ ರಿಜೆಕ್ಟ್ ಮಾಡಿದ್ರು? ಯಾವ ಸಿನಿಮಾ? ಬನ್ನಿ ಮಾಹಿತಿ ತಿಳಿಯೋಣ.

ಆದಿತ್ಯ ಧಾರ್ (Adithya dhar) ನಿರ್ದೇಶಿಸಲಿದ್ದ ‘ಇಮ್ಮಾರ್ಟಲ್​ ಅಶ್ವತ್ಥಾಮ್’ (Immortal Ashwatthama) ಸಿನಿಮಾ 350 ಕೋಟಿ ಬಿಗ್ ಬಜೆಟ್’ನ ಆ ಚಿತ್ರ. ಇದು ಸೈನ್ಸ್​ ಫಿಕ್ಷನ್ ಸಿನಿಮಾ ಆಗಿದ್ದು, ಈ ಚಿತ್ರವನ್ನು ಯಶ್ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ, ಅವರು ಸಿನಿಮಾ ಆಫರ್​​ನ ರಿಜೆಕ್ಟ್ ಮಾಡಿದರು ಎನ್ನಲಾಗಿದೆ. ಇದು ಸೂಪರ್ ಹೀರೋ ಕಾನ್ಸೆಪ್ಟ್​ನಲ್ಲಿ ಮೂಡಿ ಬರುತ್ತಿದೆ. ಹಾಗಾಗಿ ಯಶ್ (Rocking star Yash) ಸಿನಿಮಾ ಮಾಡಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಹಂತದಲ್ಲೇ 30 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಮೊದಲಿದ್ದ ನಿರ್ಮಾಪಕರು ಸಿನಿಮಾದಿಂದ ಹಿಂದೆ ಸರಿದಿದ್ದು, ಈ ಕಾರಣದಿಂದ ಜಿಯೋ ಸ್ಟುಡಿಯೋಸ್ (jio studios) ಈ ಚಿತ್ರವನ್ನು ಕೈಗೆತ್ತಿಕೊಂಡಿತ್ತು. ನಂತರ ಹೀರೋಗಾಗಿ ಹುಡುಕಾಟ ಶುರುವಾಗಿದ್ದು, ಇದು ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ ಸಾಮಾನ್ಯ ಹೀರೋನ ಹಾಕಿಕೊಳ್ಳಬಾರದು ಎಂದೀ ಸ್ಟಾರ್ ಹಿರೋ ಗಳಿಗಾಗಿ ಹುಡುಕಾಟ ನಡೆಸಿದರು.‌

https://www.instagram.com/p/CJ5RchFpPKO/?igshid=YmMyMTA2M2Y=

ವಿಕ್ಕಿ ಕೌಶಲ್ (vikky koushal) ಅವರನ್ನು ನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಿದ್ದರು ಆದರೆ, ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ವಿಕ್ಕಿ ಕೌಶಲ್​ಗೆ ದೊಡ್ಡ ಸ್ಟಾರ್​ಡಂ ಇಲ್ಲ. ಹೀಗಾಗಿ, ನಷ್ಟ ಉಂಟಾದರೂ ಆಗಬಹುದು ಎಂದು ನಿರ್ಮಾಣ ಸಂಸ್ಥೆಯ ಅವರನ್ನು ಕೈ ಬಿಡಲಾಯಿತು. ನಂತರ ಆದಿತ್ಯ ಧಾರ್ ಅವರು ಜೂ.ಎನ್​​ಟಿಆರ್ (Jr. NTR)ಅವರನ್ನು ಭೇಟಿ ಮಾಡಿದರು. ಅವರು ಸಿನಿಮಾ ಒಪ್ಪಿಕೊಳ್ಳಲಿಲ್ಲ. ನಂತರವೇ ಯಶ್ ಬಳಿ ತೆರಳಿ, ಆಫರ್ ಮುಂದಿಟ್ಟರು ಅವರ ಕೂಡ ಸಿನಿಮಾ ರಿಜೆಕ್ಟ್ ಮಾಡಿದರು. ರಣವೀರ್ ಸಿಂಗ್ (Ranveer Singh) ಅವರನ್ನು ಅಪ್ರೋಚ್ ಮಾಡಲಾಯಿತು ಆದರೆ, ಅವರು ಇದರಲ್ಲಿ ನಟಿಸಲು ನಿರಾಕರಿಸಿದರು. ಇದೀಗ ಹಿರೋ ಸಿಗದೆ ಜಿಯೋ ಸ್ಟುಡಿಯೋಸ್ ಸಿನಿಮಾನ ಕೈಬಿಡಲು ಆಲೋಚಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: KD Film: ರಶ್ಮಿಕಾ ಮಂದಣ್ಣಗೆ ಸ್ಪರ್ಧೆ ಕೊಡಲು ಇನ್ನೊಬ್ಲು ಕೊಡಗತಿ ರೆಡಿ, ಕೆಡಿ ಚಿತ್ರದ ಈ ನಾಣಯ್ಯ!