Home Breaking Entertainment News Kannada Actor Sudeep: ಕಿಚ್ಚ ಸುದೀಪ್‌ ಬೆದರಿಕೆ ಪತ್ರ ವಿಚಾರಕ್ಕೆ ರೋಚಕ ಟ್ವಿಸ್ಟ್, ಪತ್ರ ಬರೆದಾತ ಅರೆಸ್ಟ್!...

Actor Sudeep: ಕಿಚ್ಚ ಸುದೀಪ್‌ ಬೆದರಿಕೆ ಪತ್ರ ವಿಚಾರಕ್ಕೆ ರೋಚಕ ಟ್ವಿಸ್ಟ್, ಪತ್ರ ಬರೆದಾತ ಅರೆಸ್ಟ್! ಯಾರು ಗೊತ್ತಾ ಈ ಆರೋಪಿ?

Actor Sudeep
Image source- Peakpx, News 18 Kannada

Hindu neighbor gifts plot of land

Hindu neighbour gifts land to Muslim journalist

Actor Sudeep: ಕಳೆದ ಕೆಲ ದಿನಗಳ ಹಿಂದೆ ಸ್ಯಾಂಡಲ್‌ವುಡ್(Sandalwood) ನಟ ಕಿಚ್ಚ ಸುದೀಪ್ (Actor Sudeep) ಅವರಿಗೆ ಎರಡೆರಡು ಬಾರಿ ಬೆದರಿಕೆ ಪತ್ರವೊಂದು ಬಂದಿದ್ದು ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಸಂಬಂಧ ನಟ ಸುದೀಪ್ ಪೊಲೀಸರಿಗೆ ದೂರು ಸಹ ನೀಡಿದ್ರು. ಸದ್ಯ ಈ ಕೇಸ್​ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಹೌದು, ಸುದೀಪ್ ಆಪ್ತನಾಗಿದ್ದ ಡೈರೆಕ್ಟರ್ ರಮೇಶ್ ಕಿಟ್ಟಿ (Director Ramesh Kitty) ಅವರನ್ನು ಪೋಲೀಸರು ಆರೋಪಿ ಎಂದು ಪರಿಗಣಿಸಿದ್ದು, ಇದೀಗ ಬಂದಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಿರ್ದೇಶಕ ರಮೇಶ್ ಕಿಟ್ಟಿ ಈ ಹಿಂದೆ ನಟ ಸುದೀಪ್ ಚಾರಿಟೇಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದ್ದ. ಅಲ್ಲದೆ ಸುದೀಪ್ ಅವರ ಆಪ್ತನಾಗಿದ್ದ ರಮೇಶ್ ಈ ಹಿಂದೆ ಹಲವು ಸಿನಿಮಾಗಳನ್ನ ನಿರ್ದೇಶನಕ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ.

ಅಂದಹಾಗೆ ಸುದೀಪ್ ಮತ್ತು ರಮೇಶ್ ನಡುವೆ ಚಾರಿಟಿ ಹಣದ ವಿಚಾರವಾಗಿ ವೈ ಮನಸ್ಸು ಉಂಟಾಗಿತ್ತು. ಈ ವೇಳೆ ನಟ ಸುದೀಪ್​ ವಿರುದ್ಧ ನಿರ್ದೇಶಕ ರಮೇಶ್ ಕಿಟ್ಟಿ ಆರೋಪಗಳನ್ನು ಮಾಡಿದ್ದ. ಇದೀಗ, ಚಾರಿಟಿಯಲ್ಲಿ ಸುದೀಪ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಹಣ ಇನ್ವೆಸ್ಟ್ ಮಾಡಿದ್ದೆ. ಆದ್ರೆ ಸುದೀಪ್ ಹಣ ಕೊಡದೆ ಮೋಸ ಮಾಡಿದ್ರು. ಈ ಕೋಪಕ್ಕೆ ಈ ರೀತಿಯ ಬೆದರಿಕೆ ಪತ್ರ ಬರೆದಿದ್ದೆ ಎಂದು ಸಿಸಿಬಿ ವಿಚಾರಣೆಯಲ್ಲಿ ರಮೇಶ್ ಬಾಯ್ಬಿಟ್ಟಿದ್ದಾನಂತೆ.

ಅಲ್ಲದೆ ಈ ಪ್ರಕರಣ ಹಿಂದೆ ಇನ್ನೂ ಕೆಲ ವ್ಯಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜೆ.ಪಿ.ನಗರದಲ್ಲಿರುವ ಸುದೀಪ್‌ ಅವರ ಮನೆ ವಿಳಾಸಕ್ಕೆ ಅಂಚೆ ಮೂಲಕ ಎರಡು ಪತ್ರಗಳು ಬಂದಿದ್ದವು. ಬಳಿಕ ಖಾಸಗಿ ವೀಡಿಯೋ ಬೆದರಿಕೆ ಪತ್ರಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಮತ್ತು ಮ್ಯಾನೇಜರ್ ಜಾಕ್ ಮಂಜು ಪ್ರಕರಣ ದಾಖಲಿಸಿದ್ದರು. ನಂತರ ಎರಡೂ ಬೆದರಿಕೆ ಪತ್ರಗಳು ದೊಮ್ಮಲೂರಿನಿಂದ ಪೋಸ್ಟ್ ಆಗಿದೆ ಎಂದು ಆ ಪತ್ರಗಳ ಸಂಬಂಧ ಸಿಸಿಬಿಯಿಂದ (Central Crime Branc) ತನಿಖೆ ಶುರುವಾಗಿ, ಶಂಕಿತ ಜಾಡು ಹಿಡಿದು ಹೊರಟಿದ್ದರು.

ನಂತರ ಸುದೀಪ್‌ಗೆ ಬೆದರಿಕೆ ಪತ್ರ ಹಾಕಲು ಸ್ವಿಫ್ಟ್ ಕಾರು ಬಳಸಲಾಗಿದೆ. ಈ ವೇಳೆ ನಂಬರ್ ಪ್ಲೇಟ್ ಅನ್ನೇ ಬದಲಿಸಿ ದುಷ್ಕರ್ಮಿಗಳು ಕಾರು ಬಳಸಿದ್ದಾರೆ. ಈ ಮೂಲಕ ದೊಮ್ಮಲೂರು ಪೋಸ್ಟ್ ಆಫೀಸ್‌ಗೆ ಸ್ವಿಫ್ಟ್ ಕಾರಿನಲ್ಲಿ ಆರೋಪಿಗಳು ಬಂದು ಲೆಟರ್ ಹಾಕಿದ್ದಾರೆ. ಸಿಸಿಟಿಟಿವಿಯಲ್ಲಿ ಸ್ವಿಫ್ಟ್ ಕಾರ್(Shift Car) ಬಳಸಿರೋದು ತಿಳಿದು ಬಂದಿದೆ. ಈ ಕಾರು ಕೆಂಗೇರಿ ಬಳಿಯ ವ್ಯಕ್ತಿಗೆ ಸೇರಿರೋದು ಪತ್ತೆಯಾಗಿದೆ. ವ್ಯಕ್ತಿಯ ವಿಚಾರಣೆಯ ನಂತರ ಆತನಿಗೂ ಈ ಪತ್ರಕ್ಕೂ ಸಂಬಂಧವಿಲ್ಲ. ನಕಲಿ ನಂಬರ್ ಪ್ಲೇಟ್ ಬಳಸಿ ಸುದೀಪ್ ಮನೆಗೆ ಬೆದರಿಕೆ ಪತ್ರ ಕಳುಹಿಸಿರೋದು ಕೂಡ ಪತ್ತೆಯಾಗಿತ್ತು. ಆದರೀಗ ಈ ವಿಚಾರವಾಗಿ ಮೊದಲ ಆರೋಪಿಯನ್ನು ಬಂದಿಸಿದ್ದು ತನಿಖೆಗೆ ಟ್ವಿಸ್ಟ್ ಸಿಕ್ಕಂತಾಗಿದೆ.

 

ಇದನ್ನು ಓದಿ: kidney symptoms: ಕಿಡ್ನಿ ವೈಫಲ್ಯದ 10 ಲಕ್ಷಣಗಳಿವು, ತಕ್ಷಣ ಚಿಕಿತ್ಸೆ ನೀಡದಿದ್ದರೆ ಅಪಾಯವಿದೆ!