Home Business ನಿಮ್ಮ‌ ಗಾಡಿ ರಸ್ತೆ ನಡುವೆಯೇ ಪಂಕ್ಚರ್ ಆಗಿದೆಯಾ ? ಪಂಕ್ಚರ್ ಶಾಪ್ ಹುಡುಕೋದು ಎಲ್ಲಿ ಅನ್ನೋರಿಗೆ...

ನಿಮ್ಮ‌ ಗಾಡಿ ರಸ್ತೆ ನಡುವೆಯೇ ಪಂಕ್ಚರ್ ಆಗಿದೆಯಾ ? ಪಂಕ್ಚರ್ ಶಾಪ್ ಹುಡುಕೋದು ಎಲ್ಲಿ ಅನ್ನೋರಿಗೆ ಇಲ್ಲಿದೆ‌ ಸಿಹಿ ಸುದ್ದಿ!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರಿನ ‘ ಬ್ಲ್ಯಾಕ್ ಪೆನ್ ಕಮ್ಯುನಿಕೇಷನ್ಸ್’ ಕಂಪನಿಯ ಸಹಯೋಗದೊಂದಿಗೆ ‘ ಲೈವ್ ಪಂಚರ್’ ಎಂಬ ಹೆಸರಿನ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಅಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಆ್ಯಪ್ ಲಭ್ಯವಿದೆ.

ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು ( ದ್ವಿಚಕ್ರ , ತ್ರಿಚಕ್ರ, ನಾಲ್ಕು ಚಕ್ರ ಇತ್ಯಾದಿ) ಎಂದು ನಮೂದಿಸಲಾಗಿದೆ.

ಹೀಗೆ ಮಾಡಿದಾಗ ಪಂಕ್ಚರ್ ಆದ ಸಮಯದಲ್ಲಿ ನೀವಿರುವ ಸ್ಥಳದ ಸಮೀಪ ಯಾವ ಪಂಚರ್ ಅಂಗಡಿ ಇದೆ ಎಂದು ತೋರಿಸುತ್ತದೆ. ನಂತರ ನಿಮ್ಮ ಮೊಬೈಲ್ ಗೆ ಕರೆ ಮಾಡಿ ನಿಮ್ಮ ವಾಹನದ ಬಳಿ ಬರುತ್ತಾರೆ. ಇಷ್ಟು ಮಾತ್ರವಲ್ಲದೇ ಅಂಗಡಿಯವರು ಎಷ್ಟೊತ್ತಿಗೆ, ಎಲ್ಲಿ ಬರುತ್ತಿದ್ದಾರೆ ಎಂಬುದನ್ನು ಕೂಡಾ ಲೈವ್ ಆಗಿ ನೋಡಬಹುದು.

LIVE PUNCHER ಆ್ಯಪ್ ಎಂದು ಪ್ಲೇಸ್ಟೋರ್ ನಲ್ಲಿದೆ. ವಾಹನ ಸವಾರರು ಮಾತ್ರವಲ್ಲದೇ ಯಾವುದೇ ಪಂಕ್ಚರ್ ಶಾಪ್ ನವರು ಕೂಡಾ ಇದರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.