Home Business Toyota Innova Hycross : ಕೈಗೆಟಕುವ ದರದಲ್ಲೇ ನಿಮಗೆ ದೊರೆಯಲಿದೆ ಈ ಇನೋವಾ ಹೈಕ್ರಾಸ್‌ ಬೆಸ್‌...

Toyota Innova Hycross : ಕೈಗೆಟಕುವ ದರದಲ್ಲೇ ನಿಮಗೆ ದೊರೆಯಲಿದೆ ಈ ಇನೋವಾ ಹೈಕ್ರಾಸ್‌ ಬೆಸ್‌ ವೆರಿಯೆಂಟ್‌ !

Hindu neighbor gifts plot of land

Hindu neighbour gifts land to Muslim journalist

Toyota Innova Hycross: ಭಾರತದಲ್ಲಿ 2005ರಿಂದ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿರುವ ಟೊಯೊಟಾ (Toyota) ಇನೋವಾ ಕಾರು ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಇದೀಗ ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಆವೃತ್ತಿಯು ಸಾಕಷ್ಟು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಹೌದು ಟೊಯೊಟಾ ಇಂಡಿಯಾ ಕಂಪನಿಯು ಹೊಸ ಇನೋವಾ ಹೈಕ್ರಾಸ್ ಮಾದರಿಯಲ್ಲಿ ಹೊಸದಾಗಿ ಮತ್ತೊಂದು ಬೆಸ್ ವೆರಿಯೆಂಟ್ ಬಿಡುಗಡೆ ಮಾಡಲು ಮುಂದಾಗಿದೆ. ಹೊಸ ಬೆಸ್ ವೆರಿಯೆಂಟ್ ವಿಶೇಷವಾಗಿ ವಾಣಿಜ್ಯ ಬಳಕೆದಾರರ ಬೇಡಿಕೆ ಆಧರಿಸಿ ಬಿಡುಗಡೆ ಮಾಡಲಾಗುತ್ತಿದೆ. ಟೊಯೊಟಾ(Toyota) ಕಂಪನಿಯು ಇನೋವಾ ಹೈಕ್ರಾಸ್ (Innova Hycross) ಎಂಪಿವಿ ಬಿಡುಗಡೆಯ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಕಾರು ಇನೋವಾ ಕ್ರಿಸ್ಟಾ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಆವೃತ್ತಿಯಿಂದ ಕೂಡಿದೆ.

ಬಜೆಟ್ ಬೆಲೆಯಲ್ಲಿ ಇನೋವಾ ಹೈಕ್ರಾಸ್ ಹೊಸ ವೆರಿಯೆಂಟ್:
ಸದ್ಯ ಮಾರುಕಟ್ಟೆಯಲ್ಲಿ ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಟೊಯೊಟಾ ಕಂಪನಿ ಸದ್ಯ G,GX,VX ಮತ್ತು ZX ವೆರಿಯೆಂಟ್ ಗಳನ್ನ ಮಾರಾಟ ಮಾಡುತ್ತಿದೆ. ಆದರೆ ಬಿಡುಗಡೆಯಾಗಲಿರುವ ಹೊಸ ವೆರಿಯೆಂಟ್ ಜಿ ವೆರಿಯೆಂಟ್ ಗಿಂತಲೂ ಕೆಲವು ಕಡಿಮೆ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಸದ್ಯ ಹೊಸ ವೆರಿಯೆಂಟ್ ಪೆಟ್ರೋಲ್ ಜೊತೆಗೆ ಸಿಎನ್ ಜಿ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಾಗುತ್ತಿದ್ದು ಉತ್ತಮ ಇಂಧನ ದಕ್ಷತೆ ಹೊಂದಿರಲಿವೆ. ಫ್ಲಿಟ್ ಆಪರೇಟರ್ಸ್ ಗಳಿಗೆ ಹೊಸ ಕಾರು ಮಾದರಿಗಳಿಂದ ಹೆಚ್ಚನ ಲಾಭಾಂಶ ದೊರೆಯಲಿದ್ದು, ಹೊಸ ಆವೃತ್ತಿಗಳು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಮುಖ್ಯವಾಗಿ ಹೊಸ ವೆರಿಯೆಂಟ್ ಗಳ ಬೆಲೆ ಸಾಮಾನ್ಯ ಮಾದರಿಗಳಿಂತ ರೂ. 1 ಲಕ್ಷದಷ್ಟು ಕಡಿಮೆ ಬೆಲೆಗೆ ದೊರೆಯಲಿದ್ದು, ಇದರಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಗಳನ್ನ ತೆಗೆದುಹಾಕಲಾಗಿದೆ. ಸದ್ಯ ಖರೀದಿಗೆ ಲಭ್ಯವಿರುವ ಇನೋವಾ ಹೈಕ್ರಾಸ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 18.30 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೈ ಎಂಡ್ ಮಾದರಿಯು ಪೆಟ್ರೋಲ್ ಹೈಬ್ರಿಡ್ ಎಂಜಿನ್ ನೊಂದಿಗೆ ರೂ. 28.97 ಲಕ್ಷ ಬೆಲೆ ಹೊಂದಿದೆ. ಹೀಗಾಗಿ ವಾಣಿಜ್ಯ ಬಳಕೆದಾರಿಗಾಗಿ ಬೆಸ್ ವೆರಿಯೆಂಟ್ ಆಧರಿಸಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ವೆರಿಯೆಂಟ್ ಟೊಯೊಟಾ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುವ ಭರವಸೆ ಇದೆ.

ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ಇನೋವಾ ಹೈಕ್ರಾಸ್(Toyota Innova Hycross) ಕಾರು ಮಾದರಿಯು 2.0 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 16.13 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ಮಾದರಿಯು 23 ಕಿ.ಮೀ ಮೈಲೇಜ್ ನೀಡುತ್ತದೆ. ಇದರಲ್ಲಿ ಸದ್ಯಕ್ಕೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಮಾತ್ರ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಬೆಸ್ ವೆರಿಯೆಂಟ್ ನಲ್ಲಿ ಮ್ಯಾನುವಲ್ ಆವೃತ್ತಿಯನ್ನ ಪರಿಚಯಿಸಬಹುದಾಗಿದೆ. ಹೀಗಾಗಿ ಹೊಸ ವೆರಿಯೆಂಟ್ ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಹೊಂದಿಲಿದ್ದು, ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ 23 ರಿಂದ 25 ಕಿ.ಮೀ ಮೈಲೇಜ್ ನೀಡಬಹುದಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಹಲವು ಕಾರ್ ಕನೆಕ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ ವಾಣಿಜ್ಯ ಬಳಕೆದಾರಿಗಾಗಿ ಬೆಸ್ ವೆರಿಯೆಂಟ್ ಆಧರಿಸಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದ್ದು ಹೊಸ ವೆರಿಯೆಂಟ್ ಟೊಯೊಟಾ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡುವ ಭರವಸೆ ಇದೆ.