Home Business ಬೆತ್ತಲೆಯಾಗಿ ಹಿಂದೂ ದೇವರ ದೇವಸ್ಥಾನಕ್ಕೆ ನುಗ್ಗಿ, ಮೂರ್ತಿ ಧ್ವಂಸ ಮಾಡಿದ ವ್ಯಕ್ತಿ | ಹಿಂದೂ ಸಂಘಟನೆಗಳಿಂದ...

ಬೆತ್ತಲೆಯಾಗಿ ಹಿಂದೂ ದೇವರ ದೇವಸ್ಥಾನಕ್ಕೆ ನುಗ್ಗಿ, ಮೂರ್ತಿ ಧ್ವಂಸ ಮಾಡಿದ ವ್ಯಕ್ತಿ | ಹಿಂದೂ ಸಂಘಟನೆಗಳಿಂದ ಆಕ್ರೋಶ!

Hindu neighbor gifts plot of land

Hindu neighbour gifts land to Muslim journalist

ಕೇರಳದ ಕೊಡುಂಗಲ್ಲೂರಿನಲ್ಲಿರುವ ಶ್ರೀ ಕುರುಂಬಾ ಭಗವತಿ ದೇವಸ್ಥಾನಕ್ಕೆ ಬೆತ್ತಲೆಯಾಗಿ ನುಗ್ಗಿದ ವ್ಯಕ್ತಿಯೊಬ್ಬ ಮೂಲಸ್ಥಾನದಲ್ಲಿದ್ದ ಪ್ರಮುಖ ದೇವರ ಮೂರ್ತಿಯನ್ನು ಧ್ವಂಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಇಂದು ಬೆಳಗ್ಗೆ 4.30 ಆಸುಪಾಸಿನಲ್ಲಿ ನಡೆದಿದೆ ಎನ್ನಲಾಗಿದೆ.

ಕೆಲ ಬಲ್ಲ ಮೂಲಗಳ ಪ್ರಕಾರ ಆರೋಪಿಯು ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದ್ದು, ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯನ್ನು ಖಂಡಿಸಿರುವ ಹಿಂದು ಐಕ್ಯ ವೇದಿ ಹೆಸರಿನ ಹಿಂದು ಸಂಘಟನೆ, ತಾಲೂಕಿನ ಮಟ್ಟದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಸದ್ಯ ಪೋಲೀಸರು ಶಂಕಿತನನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.