Home Business 8th Pay Commission: ಸರ್ಕಾರಿ ನೌಕರರ ಸಂಬಳದಲ್ಲಿ 44% ಏರಿಕೆ – ಇಂದು ಸರ್ಕಾರ ಮಾಡಲಿದೆ...

8th Pay Commission: ಸರ್ಕಾರಿ ನೌಕರರ ಸಂಬಳದಲ್ಲಿ 44% ಏರಿಕೆ – ಇಂದು ಸರ್ಕಾರ ಮಾಡಲಿದೆ ನಿರ್ಧಾರ !!

8th Pay Commission

Hindu neighbor gifts plot of land

Hindu neighbour gifts land to Muslim journalist

8th Pay Commission: ಇತ್ತೀಚೆಗೆ 8ನೇ ವೇತನ ಆಯೋಗದ(8th Pay Commission) ಕುರಿತಂತೆ ಚರ್ಚೆ ನಡೆಯುತ್ತಿದೆ. ಇದರ ಅನುಸಾರ, ಶೀಘ್ರದಲ್ಲೇ 8ನೇ ವೇತನ ಆಯೋಗ ಜಾರಿಗೆ ಬರಲಿದೆ. 7ನೇ ವೇತನ ಆಯೋಗದ(7th Pay Commission)ಶಿಫಾರಸುಗಳ ಅನುಸಾರ ಇನ್ನು ಕೆಲವೇ ತಿಂಗಳಲ್ಲಿ ಹೊಸ ವೇತನ ಜಾರಿಯಾಗಬೇಕು. ಹೀಗೆ 8ನೇ ವೇತನ ಆಯೋಗ ಬಂದಲ್ಲಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗಲಿದೆ.

ಮಾಧ್ಯಮ ವರದಿಗಳ ಪ್ರಕಾರ, 8 ನೇ ವೇತನ ಆಯೋಗದಲ್ಲಿ ಪ್ರತಿ ವರ್ಷ ವೇತನವನ್ನು ಪರಿಷ್ಕರಿಸಬಹುದು. ಪ್ರಸ್ತುತ, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಹೆಚ್ಚಿನ ಸಂಬಳದ ಉದ್ಯೋಗಿಗಳಿಗೆ ವೇತನ ಹೆಚ್ಚಳವು 3 ವರ್ಷಗಳ ಮಧ್ಯಂತರದಲ್ಲಿರುತ್ತದೆ. ಕಡಿಮೆ ಸಂಬಳದ ಉದ್ಯೋಗಿಗಳ ಸಂಬಳ ಹೆಚ್ಚಳವನ್ನು ಪ್ರತಿ ವರ್ಷ ಅವರ ಕಾರ್ಯಕ್ಷಮತೆಯ ಆಧಾರದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ಮುಂದಿನ ವರ್ಷದ ಆರಂಭದಲ್ಲಿ 8ನೇ ವೇತನ ಆಯೋಗದ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದೆ. ಜನವರಿ 2023 ರಲ್ಲಿ ಡಿಎ(DA)ಶೇಕಡಾ 4 ರಷ್ಟು ಹೆಚ್ಚಿಸಿದರೆ, ಒಟ್ಟು ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಲಿದ್ದು, ಹೀಗಾದರೆ ವೇತನ ಪರಿಷ್ಕರಣೆ ಮಾಡಬೇಕು. ವೇತನವನ್ನು ಪರಿಷ್ಕರಿಸಲು ಹೊಸ ವೇತನ ಆಯೋಗ ರಚಿಸಬೇಕಾದ ಅನಿವಾರ್ಯತೆಯಿದೆ. 8ನೇ ವೇತನ ಆಯೋಗ ಬಂದರೆ 2024ರ ಅಂತ್ಯದ ವೇಳೆಗೆ ರಚನೆಯಾಗಲಿದ್ದು, 2026ರ ವೇಳೆಗೆ ಜಾರಿಯಾಗಲಿದೆ.

ಮಾಧ್ಯಮ ವರದಿಗಳ ಮಾಹಿತಿ ಅನುಸಾರ, 8ನೇ ವೇತನ ಶ್ರೇಣಿಯಲ್ಲಿ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ಸಂಭವವಿದೆ. ನೌಕರರ ಕನಿಷ್ಠ ವೇತನ ಶೇ.44.44ರಷ್ಟು ಹೆಚ್ಚಾಗಲಿದ್ದು, 7ನೇ ವೇತನ ಶ್ರೇಣಿಯಡಿ ನೌಕರರು 2.57 (ಫಿಟ್ಮೆಂಟ್ ಫ್ಯಾಕ್ಟರ್) ಆಧಾರದ ಮೇಲೆ ಮೂಲ ವೇತನವಾಗಿ ರೂ.18 ಸಾವಿರ ಪಡೆಯಲಿದ್ದಾರೆ. ಈ ಮೂಲ ವೇತನವನ್ನು 26 ಸಾವಿರ ಇಲ್ಲವೇ ಅದಕ್ಕಿಂತ ಹೆಚ್ಚಳವಾಗಬಹುದು.

ಇದನ್ನೂ ಓದಿ : PM KISAN 15th Installment: ‘ಪಿಎಂ ಕಿಸಾನ್’ನ 15 ನೇ ಕಂತಿನ ಹಣದ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್