Home Business Good News For pensioners: ಪಿಂಚಣಿದಾರರಿಗೆ ಮತ್ತೊಂದು ಗುಡ್ ನ್ಯೂಸ್- ಇನ್ನು ಮನೆ ಬಾಗಿಲಿಗೆ ಬರುತ್ತೆ...

Good News For pensioners: ಪಿಂಚಣಿದಾರರಿಗೆ ಮತ್ತೊಂದು ಗುಡ್ ನ್ಯೂಸ್- ಇನ್ನು ಮನೆ ಬಾಗಿಲಿಗೆ ಬರುತ್ತೆ ಈ ಪ್ರಮಾಣ ಪತ್ರ

Good News For pensioners

Hindu neighbor gifts plot of land

Hindu neighbour gifts land to Muslim journalist

Good News For pensioners : ಪಿಂಚಣಿದಾರರಿಗೆ ಇನ್ಮುಂದೆ ಡಿಜಿಟಲ್ ಇ- ಜೀವಂತ ಪ್ರಮಾಣ ಪತ್ರ ಸೇವೆ ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ​. ಪಿಂಚಣಿದಾರರಿಗೆ ಇದೊಂದು ದೊಡ್ಡ ಗುಡ್ ನ್ಯೂಸ್ (Good News For pensioners)ಕೂಡ ಹೌದು. ಬೆರಳಚ್ಚು ಆಧರಿತ ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯದ ಕುರಿತು, ಖಜಾನೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಡುವೆ ದಿನಾಂಕ 29.11.2022ರ ಒಪ್ಪಂದವೊಂದು (MoU) ನಡೆದಿದೆ.

MoU ಒಪ್ಪಂದ ಪ್ರಕಾರ ಪಿಂಚಣಿದಾರರು ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಸಾಧ್ಯವಾಗುವಂತೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನವರು, ಬೆರಳಚ್ಚು ಆಧಾರಿತ ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯವನ್ನು ರೂ 70/- ರ ಶುಲ್ಕದೊಂದಿಗೆ, ಪಿಂಚಣಿದಾರರ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಮನೆ ಬಾಗಿಲಿಗೆ ದೊರಕಿಸುತ್ತಿದ್ದು, ಈ ಕುರಿತು ಖಜಾನೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಡುವೆ ಒಪ್ಪಂದವೊಂದು (MoU) ಆಗಿದೆ.

ಇದನ್ನೂ ಓದಿ: ಬೆಂಗಳೂರು- ಪಬ್‌ನಲ್ಲಿ ಯುವತಿಯನ್ನು ರೇಗಿಸಿ,ಅರೆನಗ್ನ ಸ್ಥಿತಿಯಲ್ಲಿ ಗಲಾಟೆ !