Home Business DL, RC Smart Card With QR Code: ಡಿಎಲ್‌, ಆರ್‌ಸಿ ಕಾರ್ಡ್‌ ಕುರಿತು ಮಹತ್ವದ...

DL, RC Smart Card With QR Code: ಡಿಎಲ್‌, ಆರ್‌ಸಿ ಕಾರ್ಡ್‌ ಕುರಿತು ಮಹತ್ವದ ಮಾಹಿತಿ!!

Image Credit Source: Zee Business

Hindu neighbor gifts plot of land

Hindu neighbour gifts land to Muslim journalist

DL, RC Smart Card With QR Code: ಚಾಲನಾ ಪರವಾನಿಗೆ (ಡಿಎಲ್‌) ಮತ್ತು ವಾಹನಗಳ ನೋಂದಣಿ (ಆರ್‌ಸಿ) ಸ್ಮಾರ್ಟ್‌ ಕಾರ್ಡ್‌ಗಳಿಗೆ ಹೈಟೆಕ್‌ ರೂಪ (DL, RC Smart Card With QR Code) ನೀಡಲು ಕೇಂದ್ರ ಸರಕಾರ ಯೋಜನೆ ಮಾಡಿದೆ. ಈ ಕುರಿತು 2024ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.

ಈ ಕುರಿತು ವರದಿಯನ್ನು ಪರಿಶೀಲಿಸಿ ಏಜೆನ್ಸಿವೊಂದರಕ್ಕೆ ಸಾರಿಗೆ ಇಲಾಖೆ ಜವಾಬ್ದಾರಿ ನೀಡಿದೆ. ಡಿಎಲ್‌ನ ಮುಂಭಾಗದಲ್ಲಿ ಹೆಸರು, ಫೋಟೋ, ವಿಳಾಸ, ಜನ್ಮದಿನಾಂಕ, ರಕ್ತದ ಗುಂಪು ಇರಲಿದೆ. ಹಿಂಭಾಗದಲ್ಲಿ ಮೊಬೈಲ್‌ ನಂಬರ್‌, ವಾಹನ ಚಲಾಯಿಸಲಿರುವ ಅನುಮತಿ ವಿವರ ಇರಲಿದೆ.

ಹಾಗೆನೇ ಹೊಸ ಆರ್‌ಸಿ ಕಾರ್ಡ್‌ನ ಮುಂಭಾಗದಲ್ಲಿ ವಾಹನ ನೋಂದಣಿ ಸಂಖ್ಯೆ, ಅವಧಿ ಮುಕ್ತಾಯ, ಇಂಜಿನ್‌ ನಂಬರ್‌, ಚಾಸ್ಸಿ ನಂಬರ್‌, ನೋಂದಣಿ ದಿನಾಂಕ ಇರಲಿದ್ದು, ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನ ಮಾದರಿ, ಸೀಟುಗಳ ಸಾಮರ್ಥ್ಯ ಸೇರಿ ವಾಹನಕ್ಕೆ ಸಂಬಂಧಿಸಿದ ವಿವರಗಳು ಇರಲಿದೆ. ಹಾಗೆನೇ ಈ ಸ್ಮಾರ್ಟ್‌ಕಾರ್ಡ್‌ನಲ್ಲಿ ಕ್ಯೂಆರ್‌ ಕೋಡ್‌ ಇರಲಿದೆ.