Home Business Senior Citizens FD: ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ! ಈ ನಾಲ್ಕು ಬ್ಯಾಂಕ್‌ನಲ್ಲಿ ನಿಮ್ಮ...

Senior Citizens FD: ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ! ಈ ನಾಲ್ಕು ಬ್ಯಾಂಕ್‌ನಲ್ಲಿ ನಿಮ್ಮ ಖಾತೆಯೇನಾದರೂ ಇದ್ದರೆ, ಹೊಡಿತು ನಿಮಗೆ ಲಾಟ್ರಿ!!!

Senior Citizens FD
Image credit: New arrow

Hindu neighbor gifts plot of land

Hindu neighbour gifts land to Muslim journalist

Senior Citizens FD: ಹಿರಿಯ ನಾಗರಿಕರಿಗೆ ಹಣ ಉಳಿತಾಯ ಮಾಡಲು ಹಲವಾರು ಬ್ಯಾಂಕ್ ಗಳು ಇವೆ. ಅಂದರೆ ಸರ್ಕಾರಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಗಳು ಹತ್ತು ಹಲವಾರು ಇವೆ. ಆದರೆ ಉಳಿತಾಯ ಮತ್ತು ಠೇವಣಿ ಮೊತ್ತಗಳಿಗೆ ನೀಡುವ ಬಡ್ಡಿದರ ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಾಸ ಇರಬಹುದು.

ಹಾಗೆಯೇ ಕೆಲವು ಖಾಸಗಿ ಬ್ಯಾಂಕ್ ಗಳು ಇತ್ತೀಚೆಗಷ್ಟೇ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ್ದು, ತುಸು ಹೆಚ್ಚಳ ಮಾಡಿದ ಮಾಹಿತಿ ದೊರೆತಿದೆ.

ಹೌದು, ಇದೀಗ ಆಗಸ್ಟ್ ತಿಂಗಳಿನಲ್ಲಿ ಅನೇಕ ಬ್ಯಾಂಕ್‌ಗಳು ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಇದರಿಂದ ಹಿರಿಯ ನಾಗರಿಕರು (Senior Citizens FD) 9% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ.

ಯಾವ ಬ್ಯಾಂಕ್ ನಿಮಗೆ ಯಾವ ದರದಲ್ಲಿ ಬಡ್ಡಿಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಫೆಡರಲ್ ಬ್ಯಾಂಕ್ FD ದರಗಳು:
ಫೆಡರಲ್ ಬ್ಯಾಂಕ್ ಪ್ರಕಾರ, 13 ತಿಂಗಳ ಅವಧಿಯ FD ಗಳ ಮೇಲೆ ಹಿರಿಯ ನಾಗರಿಕರು 8.07% ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಇನ್ನು ಸಾಮಾನ್ಯ ನಾಗರಿಕರು 7.30% ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು . ಈ ದರಗಳು 15 ಆಗಸ್ಟ್ 2023 ರಿಂದ ಜಾರಿಗೆ ಬರಲಿವೆ.

ಆಕ್ಸಿಸ್ ಬ್ಯಾಂಕ್ ಎಫ್ಡಿ ಬಡ್ಡಿದರಗಳು:
ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ 3.5% ರಿಂದ 8.05% ದರದಲ್ಲಿ ಹಿರಿಯ ನಾಗರಿಕರಿಗೆ FD ಗಳ ಮೇಲೆ ಬಡ್ಡಿಯನ್ನು ನೀಡುತ್ತಿದೆ. ಈ ದರಗಳು 14 ಆಗಸ್ಟ್ 2023 ರಿಂದ ಜಾರಿಗೆ ಬಂದಿವೆ. ಸಾಮಾನ್ಯ ಗ್ರಾಹಕರಿಗೆ, ಬ್ಯಾಂಕ್ 3.5% ರಿಂದ 7.3% ದರದಲ್ಲಿ FD ಗಳ ಮೇಲೆ ಬಡ್ಡಿಯನ್ನು ನೀಡುತ್ತಿದೆ. ಆದರೆ ಈ ಬಡ್ಡಿ ದರಗಳು ರೂ 2 ಕೋಟಿಗಿಂತ ಕಡಿಮೆ ಇರುವ ಎಫ್‌ಡಿಗಳಿಗೆ ಅನ್ವಯಿಸುತ್ತವೆ.

ಸೂರ್ಯೋದಯ SFB:
ಸೂರ್ಯೋದಯ SFB ಹಿರಿಯ ನಾಗರಿಕರಿಗೆ 4.50% ರಿಂದ 9.10% ವರೆಗಿನ ಬಡ್ಡಿದರದ ಲಾಭವನ್ನು 7 ದಿನಗಳಿಂದ 10 ವರ್ಷಗಳ ಅವಧಿಯ ಮುಕ್ತಾಯದೊಂದಿಗೆ FD ಎಫ್ಡಿಗಳ ಮೇಲೆ ನೀಡುತ್ತಿದೆ. ಇನ್ನು ಸಾಮಾನ್ಯ ಜನರಿಗೆ 4% ರಿಂದ 8.60% ವರೆಗಿನ ಬಡ್ಡಿಯ ಲಾಭವನ್ನು ನೀಡುತ್ತಿದೆ. ಈ ದರಗಳು ಆಗಸ್ಟ್ 7 ರಿಂದ ಜಾರಿಗೆ ಬಂದಿವೆ.

ಕೆನರಾ ಬ್ಯಾಂಕ್ FD ದರಗಳು:
ಕೆನರಾ ಬ್ಯಾಂಕ್ FD ಗಳ ಮೇಲೆ 4% ರಿಂದ 7.75% ಬಡ್ಡಿಯನ್ನು ಹಿರಿಯ ನಾಗರಿಕರಿಗೆ ನೀಡುತ್ತಿದೆ. ಈ ದರಗಳು ಆಗಸ್ಟ್ 12, 2023 ರಿಂದ ಜಾರಿಗೆ ಬಂದಿವೆ . ಇದಲ್ಲದೆ, ಬ್ಯಾಂಕ್ 444 ದಿನಗಳ ಅವಧಿಗೆ 5.35% ರಿಂದ 7.90% ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇನ್ನು ಸಾಮಾನ್ಯ ನಾಗರಿಕರಿಗೆ 4% ರಿಂದ 7.25% ವರೆಗಿನ ಬಡ್ಡಿಯ ಲಾಭವನ್ನು ನೀಡಲಿದೆ.

ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ʼಪುಷ್ಪʼ ಸಿನಿಮಾ ಖ್ಯಾತಿಯ ನಟಿ! ಫ್ಯಾನ್ಸ್‌ ಕಕ್ಕಾಬಿಕ್ಕಿ, ಅಷ್ಟಕ್ಕೂ ಗಳಗಳನೇ ಅಳಲು ಕಾರಣವೇನು ಗೊತ್ತೇ?