Home Karnataka State Politics Updates ‘ನಳಿನ್ ಕುಮಾರ್ ಹಸುವಿನಂತಹ ಮನುಷ್ಯ, ಅವರಿಗೆ ಭ್ರಷ್ಟಾಚಾರದ ಕಲ್ಪನೆ ಇಲ್ಲ’ ಎಂದ ರೇಣುಕಾಚಾರ್ಯ!!

‘ನಳಿನ್ ಕುಮಾರ್ ಹಸುವಿನಂತಹ ಮನುಷ್ಯ, ಅವರಿಗೆ ಭ್ರಷ್ಟಾಚಾರದ ಕಲ್ಪನೆ ಇಲ್ಲ’ ಎಂದ ರೇಣುಕಾಚಾರ್ಯ!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಬಿಟ್ ಕಾಯಿನ್ ಹವ ರಾಜಕೀಯವನ್ನೇ ತಲೆ ಕೆಳಗಾಗಿಸಿದೆ. ಒಬ್ಬೊರಿಂದ ಒಬ್ಬರಿಗೆ ಮಾತಿನ ಚಕ-ಮಕಿ ಹೆಚ್ಚುತ್ತಲೇ ಇದೆ.ಇದೀಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪರ ಎಂ.ಪಿ. ರೇಣುಕಾಚಾರ್ಯ ಮಾತಾಡಿ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಬಲವಾಗಿ ಎಂ.ಪಿ.ರೇಣುಕಾಚಾರ್ಯ ಪ್ರತಿಪಾದಿಸಿದರು.

ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಸುವಿನಂಥ ಮನುಷ್ಯ. ಅವರಿಗೆ ಭ್ರಷ್ಟಾಚಾರದ ಕಲ್ಪನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

‘ಬಿಟ್‌ಕಾಯಿನ್‌ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಏಕೆ ಮಾತನಾಡುತ್ತಿಲ್ಲ’ ಎಂಬ ವಿರೋಧ ಪಕ್ಷದ ಮುಖಂಡರ ಪ್ರಶ್ನೆಗೆ ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ , ‘ನಳಿನ್‌ ಅವರು ಸಂಘಟನೆಯಲ್ಲೇ ತಮ್ಮನ್ನು ತೊಡಗಿಸಿಕೊಂಡವರು. ಅವರದ್ದು ಸೌಮ್ಯ ಸ್ವಭಾವ. ಕಾಂಗ್ರೆಸ್‌ನವರು ಸುದ್ದಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ತಮ್ಮ ಕರ್ಮಕಾಂಡವನ್ನು ನೋಡಿಕೊಳ್ಳಲಿ’ ಎಂದರು.

ಬಿಟ್‌ಕಾಯಿನ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕರ ಮಕ್ಕಳು ಶಾಮೀಲಾಗಿದ್ದು,ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯುತ್ತದೆ ಎಂಬ ಹತಾಶೆಯಿಂದ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.