ಕಡಬ:ಕಳಪೆ ಗುಣಮಟ್ಟದ ಪಟಾಕಿ(ಹೂಕುಂಡ)ಸಿಡಿದು ಆಟೋ ಚಾಲಕನಿಗೆ ಗಾಯ

Share the Article

ಕಳಪೆ ಗುಣಮಟ್ಟದ ಪಟಾಕಿಯೊಂದು ದಿಢೀರ್ ಸಿಡಿದ ಪರಿಣಾಮ ಆಟೋ ಚಾಲಕರೊಬ್ಬರು ಗಾಯಗೊಂಡ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ನಡೆದಿದೆ.

ಪಿಜಕ್ಕಳ ನಿವಾಸಿ ಆಟೋ ಚಾಲಕ ದೀಪಾವಳಿ ಪ್ರಯುಕ್ತ ಕಡಬದ ಪಟಾಕಿ ಮಳಿಗೆಯೊಂದರಿಂದ ಪಟಾಕಿ(ಹೂಕುಂಡ)ಖರೀದಿಸಿದ್ದು, ಮನೆಯಲ್ಲಿ ಹಚ್ಚುವಾಗ ಏಕಾಏಕಿ ಸಿಡಿದಿದ್ದು ಘಟನೆಯಿಂದ ಆಟೋ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸಾಧಾರಣ ಎಲ್ಲಾ ಪಟಾಕಿಗಳಿಗಿಂತ ಭಿನ್ನವಾಗಿರುವ ಹೂಕುಂಡ ಸಿಡಿಯುವುದಿಲ್ಲ ಎಂಬ ಮಾತಿದ್ದು,ಕಡಬದ ಅದೊಂದು ಮಳಿಗೆಯ ಪಟಾಕಿ ಕಳಪೆ ಗುಣಮಟ್ಟದ್ದಾಗಿದ್ದರಿಂದ ಸಿಡಿದಿದೆ ಎನ್ನಲಾಗಿದೆ.

Leave A Reply