ಕಡಬ : ಸಂಭ್ರಮದ ಕನ್ನಡ ರಾಜ್ಯೋತ್ಸವ

Share the Article

ಕಡಬ : ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಕಡಬ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ ಪಿ ವರ್ಗೀಸ್, ಕಡಬ ತಹಶೀಲ್ದಾರ್ ಅನಂತ ಶಂಕರ, ಕಡಬ ಠಾಣಾ ಎಸೈ ರುಕ್ಮ ನಾಯ್ಕ, ಮಂಡಲ ಪಂಚಾಯತ್ ಮಾಜಿ ಸದಸ್ಯ ಮೀರಾ ಸಾಹೇಬ್, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಗಣರಾಜ ಕುಂಬ್ಲೆ ಇದ್ದರು.

ಗಾಂದಿ ವಿಚಾರ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಟಿ ಎಮ್ ಮ್ಯಾಥ್ಯೂ ಪ್ರಧಾನ ಭಾಷಣ ಮಾಡಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕಡಬ ತಾಲೂಕು ಕಛೇರಿಯಲ್ಲಿ ಕಡಬ ತಹಶೀಲ್ದಾರ್ ಅನಂತ ಶಂಕರ ಧ್ವಜರೋಹಣ ನಡೆಸಿದರು.

ಕಡಬ ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತಡಿ ಹಾಜರಿದ್ದರು.

ಸಿ ಅರ್ ಪಿ ಕುಮಾರ್ ಸ್ವಾಗತಿಸಿದರು.

Leave A Reply