ಕ್ರಿಕೆಟ್‌ನಲ್ಲಿ ಭಾರತದ ವಿರುದ್ದ ಪಾಕ್‌ಗೆ ಗೆಲುವು | ಇದು ಇಸ್ಲಾಂ‌ನ ಗೆಲುವು ಎಂದು ವಿವಾದದ ಕಿಡಿ ಹಚ್ಚಿದ ಪಾಕ್ ಸಚಿವ

Share the Article

ಭಾರತದ ವಿರುದ್ಧ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಗೆಲುವು ಇಸ್ಲಾಮಿನ ಗೆಲುವು ಎಂದು ಪಾಕಿಸ್ತಾನದ ಸಚಿವ ವಿವಾದದ ಕಿಡಿ ಹಚ್ಚಿದ್ದಾರೆ.

ಇಮ್ರಾನ್ ಖಾನ್ ಸರ್ಕಾರದ ಸಚಿವ ಶೇಖ್ ರಶೀದ್ ಈ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

ಆದಿತ್ಯವಾರ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 10 ರನ್‌ಗಳ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಶೇಖ್ ರಶೀದ್ ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಶೇಖ್ ರಶೀದ್.. ಮುಸಲ್ಮಾನರು ಜಗತ್ತಿನಾದ್ಯಂತ ಇದ್ದಾರೆ. ಭಾರತದಲ್ಲೂ ಇದ್ದಾರೆ. ಅವರು ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಾರೆ. ಪಾಕಿಸ್ತಾನ ತಂಡದ ಜೊತೆಗೆ ಭಾರತದಲ್ಲಿರುವ ಮುಸ್ಲಿಮರೂ ಇದ್ದಾರೆ. ಪಾಕಿಸ್ತಾನಕ್ಕೆ ಆ ಪಂದ್ಯವೇ ಫೈನಲ್ ಆಗಿತ್ತು ಎಂದಿದ್ದಾರೆ.

Leave A Reply