Home Breaking Entertainment News Kannada ದೀಪಾವಳಿ ಆಚರಣೆಯ ಸಂದರ್ಭ ಬಿಟ್ಟಿ ಸಲಹೆ ನೀಡಲು ಬಂದ ವಿರಾಟ್ ಕೊಹ್ಲಿಗೆ ತಾರಾಮಾರಾ ಬಾರಿಸಿ ಕಳಿಸಿದ...

ದೀಪಾವಳಿ ಆಚರಣೆಯ ಸಂದರ್ಭ ಬಿಟ್ಟಿ ಸಲಹೆ ನೀಡಲು ಬಂದ ವಿರಾಟ್ ಕೊಹ್ಲಿಗೆ ತಾರಾಮಾರಾ ಬಾರಿಸಿ ಕಳಿಸಿದ ನೆಟ್ಟಿಗರು!!

Hindu neighbor gifts plot of land

Hindu neighbour gifts land to Muslim journalist

ನವದೆಹಲಿ:ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ದೀಪಾವಳಿ ಆಚರಣೆ ಬಗ್ಗೆ ಟಿಪ್ಸ್ ಕೊಡಲು ಹೋಗಿ ಕ್ರಿಕೆಟ್ ಪ್ರೇಮಿಗಳಿಂದ ಮಾತಿನ ಪೆಟ್ಟು ತಿನ್ನುವಂತಾಗಿದೆ.ಹೌದು. ಕೊಹ್ಲಿ ‘ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸುವ ಬಗ್ಗೆ ನನ್ನ ವೈಯಕ್ತಿಕ ಟಿಪ್ಸ್ಗಳನ್ನು ನೀಡಲಿದ್ದೇನೆ’ ಎಂದು ಸಾಮಾ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ನೆಟ್ಟಿಗರಿಂದ ಭರ್ಜರಿ ಟೀಕೆಗಳಿಗೆ ಗುರಿಯಾಗಿದ್ದಾರೆ.

ತಮ್ಮ ಆರ್ ಸಿಬಿ ತಂಡವನ್ನು ಗೆಲ್ಲಿಸಲಿಲ್ಲ ಎಂಬ ಅಭಿಮಾನಿಯ ಬೇಸರವೋ ಏನೋ ಒಟ್ಟಾಗಿ ಬಿಟ್ಟಿ ಉಪದೇಶ ನೀಡಲು ಬಂದ ನಾಯಕನಿಗೆ ಅಂತೂ ಮುಖಕ್ಕೆ ಹೊಡೆದಂತಾಗಿದೆ ಆತನ ಮಾತು.ಕಳೆದ ವರ್ಷ ಪಟಾಕಿ ವಿರುದ್ಧ ಮಾತನಾಡಿ ಕೈಸುಟ್ಟುಕೊಂಡಿದ್ದ ಕೊಹ್ಲಿ, ಈ ಸಲವೂ ತಮ್ಮ ಹೇಳಿಕೆಯಿಂದ ಕಟು ಟೀಕೆಗಳನ್ನು ಎದುರಿಸಿದ್ದಾರೆ. ದೀಪಾವಳಿ ಬಗ್ಗೆ ಉಪದೇಶ ನೀಡುವ ಬದಲಾಗಿ ಟಿ20 ವಿಶ್ವಕಪ್‌ನತ್ತ ನಿಮ ಗಮನವಿರಲಿ ಎಂದು ನೆಟ್ಟಿಗರು ಕೊಹ್ಲಿಗೆ ತಿರುಗೇಟು ನೀಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಡುವತ್ತ ಗಮನಹರಿಸದೆ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಅಭಿಯಾನಗಳತ್ತ ಗಮನಹರಿಸಿರುವ ಕೊಹ್ಲಿ
ನಡೆಯೂ ಹಲವು ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

‘ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಬೇಕೆಂಬುದನ್ನು ಜನರ ವಿವೇಚನೆಗೆ ಬಿಟ್ಟುಬಿಡಿ. ನೀವು ಟಿ20 ವಿಶ್ವಕಪ್‌ನತ್ತ ಗಮನಹರಿಸಿದರೆ ಸಾಕು’ ಎಂದು ಕ್ರಿಕೆಟ್ ಪ್ರೇಮಿಯೊಬ್ಬರು ಟೀಕಿಸಿದ್ದಾರೆ. ನೀವು ಮೊದಲು ಐಸಿಸಿ ಟ್ರೋಫಿ ಮತ್ತು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದು ತೋರಿಸಿ, ದೀಪಾವಳಿ ಹಬ್ಬ ಹೇಗೆ ಆಚರಿಸಬೇಕೆಂದು ನಮಗೆ ಗೊತ್ತಿದೆ ಎಂದು ಇನ್ನು ಕೆಲವರು ಕಟು
ಮಾತಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ದೀಪಾವಳಿ ಹಬ್ಬ ಆಚರಿಸುವ ಬಗ್ಗೆ ನಮಗೆ ನಿಮ್ಮ ಟಿಪ್ಸ್
ಬೇಕಾಗಿಲ್ಲ. ನಿಮಗೆ ಬೇಕಿದ್ದರೆ, ನಾಯಕತ್ವವನ್ನು ಹೇಗೆ
ನಿರ್ವಹಿಸುವುದು ಮತ್ತು ಐಪಿಎಲ್ ಪ್ರಶಸ್ತಿಯನ್ನು ಹೇಗೆ
ಗೆಲ್ಲುವುದು ಎಂಬ ಬಗ್ಗೆ ನಾವು ಟಿಪ್ಸ್ ನೀಡಬಲ್ಲೆವು’ ಮತ್ತು ‘ಮೊದಲು ಟ್ರೋಫಿಗಳನ್ನು ಗೆದ್ದು ತೋರಿಸಿ, ನಂತರ ಬೇರೆಯವರಿಗೆ ಉಪದೇಶಗಳನ್ನು ನೀಡಿರಿ’ ಎಂದು ಇನ್ನು ಕೆಲವರು ಹೇಳಿದ್ದಾರೆ.

ಕೊಹ್ಲಿ ಜತೆಗೆ ಇತರ ಕೆಲ ಸೆಲೆಬ್ರಿಟಿಗಳೂ ದೀಪಾವಳಿ ಹಬ್ಬದ ಆಚರಣೆ ಬಗ್ಗೆ ಉಪದೇಶ ನೀಡುತ್ತಿರುವ ಬಗ್ಗೆಯೂ ಕೆಲವರು ಕಾರಿದ್ದು, ‘ಹಿಂದುಗಳು ಸಾವಿರಾರು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತ ಬರುತ್ತಿದ್ದಾರೆ. ಅವರಿಗೆ ಯಾವುದೇ
ದುರಾಸೆಯ ಕ್ರಿಕೆಟಿಗನಿಂದ ಸಲಹೆಗಳು ಬೇಕಿಲ್ಲ’ ಎಂದಿದ್ದಾರೆ.