ಮದುಮಗಳನ್ನು ನೋಡಲು ಅಮಲಿನಲ್ಲಿ ಗಾಡಿ ಓಡಿಸಿದವನ ನಡು ಮಧ್ಯಕ್ಕೆ ಬಿತ್ತು ದೊಡ್ಡ ಏಟು | ಇದೀಗ ಮದುವೆ ಗಂಡಿಗೆ ಅದೇ ಇಲ್ಲ !!

Share the Article

ಗೆಳತಿಯನ್ನು ಭೇಟಿಯಾಗಲು ಆತನಿಗೆ ಆತುರ. ಗೆಳತಿ ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಆತನಲ್ಲಿ ಉದ್ವೇಗ. ಖುಷಿಯನ್ನು ಸಂಭ್ರಮಿಸಲು ಆತ ಗಂಟಲಿಗೆ ಒಂದಷ್ಟು ದ್ರವ ಸುರಿದುಕೊಂಡು ಕಾರನ್ನೇರಿದ್ದ. ಕುಡಿದ ಅಮಲಿಗೋ, ಮೈ ಮರವಿಗೋ ಆಘಾತವಂತೂ ನಡೆದು ಹೋಗಿದೆ. ಆದರಲ್ಲಾಗಲೇ ಆತ ಕೋಮಾಗೆ ಜಾರಿದ್ದನು. ಜೊತೆಗೆ ಆತ ಬದುಕಿನಲ್ಲಿ ಸ್ತ್ರೀ ಪ್ರೀತಿಗೆ ಅತ್ಯಗತ್ಯವಾದ ಪುರುಷ ಅಂಗವನ್ನೇ ಕಳೆದುಕೊಳ್ಳಬೇಕಾಗಿ ಬಂದದ್ದು ದುರಂತ.

ಅಮೆರಿಕದಲ್ಲಿ ನಡೆದ ಘಟನೆ ಇದಾಗಿದೆ, ಪೌಲ್​ ಬೆರ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ. ವರದಿಯ ಪ್ರಕಾರ, ವಾಹನ ಮಿತಿ ವೇಗವಾಗಿ ಸಾಗುತ್ತಿದ್ದಂತೆ ಪೌಲ್​ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಿಂದ ಎಸೆಯಲ್ಪಟ್ಟ ಪೌಲ್​ ರಸ್ತೆಗೆ ಬಿದ್ದಿದ್ದಾನೆ. ಆತನ ಮೇಲೆ ಕಾರು ಬಂದು ಬಿದ್ದಿದೆ.

ಅಪಘಾತದಿಂದ ಆತನ ಕುತ್ತಿಗೆ, ದವಡೆ, ಸೊಂಟ, ಮೂಗು ಮುರಿದಿದೆ. ಖಾಸಗಿ ಭಾಗಕ್ಕೂ ಘಾಸಿಯಾಗಿತ್ತು. ತಕ್ಷಣವೇ ಅಪಘಾತದಿಂದ ಸಾವು ಬದುಕಿನ ಹೋರಾಟದಲ್ಲಿರುವ ಪೌಲ್​ನನ್ನು ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು. ಆದರಲ್ಲಾಗಲೇ ಆತ ಕೋಮಾಗೆ ಜಾರಿದ್ದನು. ಜೀವ ಉಳಿಸಲು ಶತ ಪ್ರಯತ್ನ ಮಾಡಿದ ವೈದ್ಯರು ಬದುಕಿಸುವ ಮೂಲಕ ಸಫಲರಾದರು. ಆದರೆ ಪೌಲ್​ ಖಾಸಗಿ ಭಾಗಕ್ಕೆ ಬಲವಾದ ಏಟು ಬಿದ್ದ ಕಾರಣ, ಅದನ್ನು ಕತ್ತರಿಸಿ ತೆಗೆಯಬೇಕಾದ ಅನಿವಾರ್ಯತೆಗೆ ಬಿದ್ದಿದ್ದರು. ಕೊನೆಗೆ ಆತನ ಜೀವ ಉಳಿಸಲು ಜೀವ ಸೃಷ್ಟಿ ಮಾಡುವ ಆತನ ಖಾಸಗಿ ಅಂಗವನ್ನು ಕತ್ತರಿಸಿ ತೆಗೆಯಬೇಕಾಗಿ ಬಂತು.

ಕೋಮಾದಲ್ಲಿದ್ದ ಪೌಲ್​ 5 ವಾರಗಳ ನಂತರ ಕಣ್ಣು ತೆರೆದನು. ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದಿರುವ ಪೌಲ್​ಗೆ ಬದುಕಿರುವುದೇ ಸಂತೋಷ ಒಂದೆಡೆಯಾದರೆ ಖಾಸಗಿ ಭಾಗವೇ ಹೋಯ್ತು ಎಂಬ ಅನಂತ ದುಃಖ ಇನ್ನೊಂದೆಡೆ. ಅದೇ ಇಲ್ಲದ ಮೇಲೆ ಬದುಕಿ ಏನು ಪ್ರಯೋಜನವೆಂದುಕೊಂಡ ಪ್ರಿಯಕರನಿಗೆ ಮತ್ತೆ ಬದುಕುವ ಆಸೆ ಮೂಡಿಸಿದ್ದು ಅದೇ ಆಕೆಯ ಪ್ರೇಯಸಿ. ‘ನಿನಗೆ ಅದಿಲ್ಲದೆ ಇದ್ದರೂ ನನಗೇನೂ ಪರ್ವಾಗಿಲ್ಲ’ ಎಂದು ಹುಡುಗಿ ಹೇಳಿದ್ದಳು. ಅದು ಆತನಲ್ಲಿ ಹೊಸ ಜೀವನೋತ್ಸಾಹ ಮೂಡಿಸಿತ್ತು. ಪ್ರೇಯಸಿದ ಮಾತುಗಳು ಬದುಕಬೇಕು ಎಂಬ ಛಲ ಹುಟ್ಟಿಸಿತು.

ಅಪಘಾತದಿಂದ ಚೇತರಿಸಿಕೊಂಡ ಪೌಲ್​ ಆರೋಗ್ಯವಾಗಿದ್ದರು. ಮನಸಲ್ಲೊಂದು ಬೇಸರವಿದೆ. ಹೀಗಿರುವಾಗ ಶಿಶ್ನ ಕಸಿ ಮಾಡುವ ವಿಚಾರ ಆತನಿಗೆ ತಿಳಿಯುತ್ತದೆ. ಆದರೆ ಅಮೆರಿಕದಲ್ಲಿ ವಾಸಿಸುವ ಪೌಲ್​ಗೆ ದಕ್ಷಿಣ ಆಫ್ರಿಕಾದಲ್ಲಿ ಶಿಶ್ನ ಕಸಿ ಮಾಡುವುದು ಗೊತ್ತಾಗಿ ಕೊನೆಗೆ ವಿಚಾರಿಸುತ್ತಾನೆ. ಆದರೆ ದುಬಾರಿ ವೆಚ್ಚವಾಗುತ್ತದೆ ಎಂದು ಗೊತ್ತಾಗಿ ಸುಮ್ಮನಾಗುತ್ತಾನೆ. ಶಿಶ್ನ ಇಲ್ಲದೆ ಹೋದರೇನು, ಶಿಸ್ತಾಗಿ ಸಂಸಾರ ನಡೆಸಲು ಅದೇ ಮುಖ್ಯವಲ್ಲ ಎಂದು ಆ ದಂಪತಿ ಪ್ರೂವ್ ಮಾಡಿದ್ದಾರೆ.

Leave A Reply