ಹಲವು ವರ್ಷಗಳ ಹಿಂದೆ ತನ್ನ ಪತಿ ಕಟ್ಟಿಸಿದ ಹಿಂದೂ ದೇವಾಲಯದ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡ ಮುಸ್ಲಿಂ ಮಹಿಳೆ!!

Share the Article

ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿ ಎಲ್ಲಾ ಧರ್ಮದವರನ್ನೂ ತನ್ನೊಡಲಲ್ಲಿಟ್ಟು ವಿವಿಧತೆಯಲ್ಲಿ ಏಕತೆಯನ್ನು ವಿಶ್ವಕ್ಕೇ ಸಾರಿದೆ. ಇದಕ್ಕೆಲ್ಲಾ ಉದಾಹರಣೆಯೆಂಬಂತೆ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಅದೊಂದು ಘಟನೆ ನಡೆದಿದೆ. ಸುಮಾರು 50 ವರ್ಷಗಳ ಹಿಂದೆ ತನ್ನ ಪತಿ ಕಟ್ಟಿಸಿದ ಹಿಂದೂ ದೇವಾಲಯದ ಪೂಜೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಪಾಲ್ಗೊಂಡಿದ್ದು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ ತಕ್ಕ ಮಟ್ಟಿನ ಉತ್ತರ ನೀಡಿದೆ.

ಹೌದು, ಸುಮಾರು 50 ವರ್ಷಗಳ ಹಿಂದೆ ಮಹಿಳೆಯ ಪತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭಗವತಿ ಅಮ್ಮನವರ ದೇವಾಲಯವೊಂದನ್ನು ಕಟ್ಟಿಸಿದ್ದು, ಆ ಬಳಿಕ ಹಿಂದೂ ಬಾಂಧವರಿಗೆ ಬಿಟ್ಟುಕೊಟ್ಟಿದ್ದರು.

ತನ್ನ ಪತಿ ಕಟ್ಟಿಸಿದ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿರುವ ಸಂದರ್ಭ ಮಹಿಳೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.ರಾಜಕೀಯ ಪಕ್ಷಗಳು, ಕೆಲ ಸಂಘಟನೆಗಳು ಅದೆಷ್ಟೋ ಆರೋಪ ಪ್ರತ್ಯಾರೋಪ ಮಾಡಿದರೂ ಜನರಲ್ಲಿನ ಭಾವನೆ, ಸಹೋದರತೆಯ ಬಾಂಧವ್ಯ ಇನ್ನೂ ಹಾಗೇ ಉಳಿದಿದೆ ಎನ್ನುವುದಕ್ಕೆ ಇದೊಂದು ಪ್ರತ್ಯಕ್ಷ ಸಾಕ್ಷಿ.

Leave A Reply