ಡಕಾಯಿತರು ಹಾರಿಸಿದ ಗುಂಡನ್ನು ತಡೆದು ಒಡೆಯನನ್ನು ರಕ್ಷಿಸಿದ ಜೇಬಿನಲ್ಲಿದ್ದ ಸ್ಮಾರ್ಟ್ ಫೋನ್ !

ಸ್ಮಾರ್ಟ್ ಫೋನ್ ಗಳ ಅವಲಂಬನೆಯಿಲ್ಲದೆ ಬದುಕುವುದು ಅಸಾಧ್ಯ ಎನ್ನುವಷ್ಟರಮಟ್ಟಿಗೆ ಫೋನ್ ಗಳ ಮೇಲೆ ಮನುಷ್ಯ ಡಿಪೆಂಡ್ ಆಗಿದ್ದಾನೆ. ನಮ್ಮನ್ನು ನಿದ್ದೆಯಿಂದ ಎಬ್ಬಿಸುವುದರಿಂದ ಹಿಡಿದು, ಇತರ ದೈನಂದಿನ ಕಾರ್ಯಕ್ರಮಗಳಲ್ಲಿ ಸದ್ದು ಮಾಡುತ್ತಲೆ ನಮಗೆ ಸಹಾಯ ಮಾಡುತ್ತಿದೆ ಈ ಸ್ಮಾರ್ಟ್ ಫೋನ್ ಗಳು. ಅದಿಲ್ಲದೆ ಬದುಕುವುದು ಕಷ್ಟ ಎನ್ನುವ ಮಟ್ಟಕ್ಕೆ ಬಂದಿರುವ ಸಂದರ್ಭದಲ್ಲಿ ಅಲ್ಲಿ ಒಂದು ವಿಶೇಷ ಘಟನೆ ನಡೆದಿದೆ. ಸ್ಮಾರ್ಟ್ ಫೋನ್ ಒಂದು ವ್ಯಕ್ತಿಯೊಬ್ಬನನ್ನು ಗುಂಡೇಟಿನಿಂದ ಬಚಾವ್ ಮಾಡಿದೆ.

 

ಅಂದು ಬ್ರೆಜಿಲ್ ನಲ್ಲಿ ಡಕಾಯಿತಿ ಯೊಂದು ನಡೆದಿತ್ತು. ಆ ದಿನ ದರೋಡೆಕೋರರು ಹಾರಿಸಿದ ಗುಂಡು ನೇರವಾಗಿ ವ್ಯಕ್ತಿಯೊಬ್ಬರತ್ತ ಗುಂಡು ಹಾರಿಸಿದ್ದ. ಗುಂಡು ನೇರವಾಗಿ ಆತನ ತೊಡೆಗೆ ಬಡಿದಿತ್ತು. ಆ ವೇಗಕ್ಕೆ ವ್ಯಕ್ತಿ ಅಲ್ಲೇ ಕುಸಿದಿದ್ದ. ಆದರೆ ಆಶ್ಚರ್ಯವೆಂಬಂತೆ ಆತನ ದೇಹದೊಳಗೆ ಗುಂಡು ನುಗ್ಗಿರಲಿಲ್ಲ. ಕಾರಣ ಜೇಬಿನಲ್ಲಿದ್ದ ಮೋಟೋರೊಳ g5 ಸ್ಮಾರ್ಟ್ ಫೋನ್.
ಆ ವ್ಯಕ್ತಿಯ ಜೇಬಿನಲ್ಲಿ ಮೋಟೋರೊಳ g5 ಎಂಬ ಐದು ವರ್ಷ ಹಳೆಯ ಫೋನು ಇತ್ತು. ನುಗ್ಗಿ ಬಂದ ಬುಲೆಟ್ ನೇರ ಮೋಟರೋಲಾ ಫೋನಿಗೆ ಬಡಿದಿದೆ ನಂತರ ಡೈವರ್ಟ್ ಆಗಿ ವ್ಯಕ್ತಿಯ ತೊಡೆ ಸವರಿಕೊಂಡು ಹೋಗಿದೆ. ವ್ಯಕ್ತಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

ಘಟನೆಯಲ್ಲಿ ಫೋನ್ ಚಿತ್ರ ಚಿತ್ರವಾಗಿದ್ದರೂ ತನ್ನೊಡೆಯನನ್ನು ಆ ಫೋನ್ ರಕ್ಷಿಸಿದೆ. ಆ ಫೋನ್ ನ ಹಿಂಬದಿಯಲ್ಲಿ ಇನ್ಕ್ರೆಡಿಬಲ್ ಹಲ್ಕ್ ಎಂಬ ಚಿತ್ರ ಅಂಟಿಸಲಾಗಿತ್ತು. ಖುದ್ದು ತನ್ನ ಫೋನ್ ಹಲ್ಕ್ ಥರ ಬಂದು ತನ್ನನ್ನು ರಕ್ಷಿಸಿದ್ದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಇತರ ಫೋನ್ಗಳಿಗೆ ಹೋಲಿಸಿದರೆ ಮೋಟರೋಲಾ g5 ಫೋನ್ ದಪ್ಪವಾಗಿದ್ದು ವ್ಯಕ್ತಿಗೆ ಗುಂಡಿನಿಂದ ರಕ್ಷಣೆ ನೀಡಿದೆ.

Leave A Reply

Your email address will not be published.