ಸುಳ್ಯ : ಮತ್ತೆ ಧರಣಿ ಕುಳಿತ ಆಸಿಯಾ ,ಹಿಂದೂ ಧರ್ಮ ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಶಾಂತಿ | ಕೈ ಕೊಟ್ಟು ಬಿಟ್ಟೋಡಿದ ಇಬ್ರಾಹಿಂ ಖಲೀಲ್

ಕಳೆದ ಹಲವು ತಿಂಗಳುಗಳಿಂದ ಸಂಚಲನ ಮೂಡಿ ಸಿದ್ದ ಆಸಿಯಾ-ಇಬ್ರಾಹಿಂ ಖಲೀಲ್ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು ಅಂತಿಮ ನಿರ್ಣಯ ಸಿಗದ ಕಾರಣ ಆಸಿಯಾ ಅವರು ಗಾಂಧಿನಗರದಲ್ಲಿರುವ ಯುವಕನ ಅಂಗಡಿ ಮುಂಭಾಗದಲ್ಲಿ ಸೋಮವಾರ ದಿಂದ ಮತ್ತೆ ಧರಣಿ ಕುಳಿತಿದ್ದಾರೆ.

 

ಸುಳ್ಯದ ಇಬ್ರಾಹಿಂ ಖಲೀಲ್‌ಗೆ ಕೇರಳದ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಪರಿಚಯವಾಗಿ ಬಳಿಕ ಮತಾಂತರವಾಗಿ ಅವರಿಬ್ಬರು ಮದುವೆಯಾಗಿದ್ದಾರೆ ಎಂದು ಆಸಿಯಾ ಹೇಳಿದ್ದು, ಈಗ ಖಲೀಲ್ ಆಕೆಯನ್ನು ದೂರ ಮಾಡಿದ್ದಾನೆ ಎಂದು ಆಪಾದಿಸಿ ವರ್ಷದ ಹಿಂದೆ ಶಾಂತಿ ಜೂಬಿ ಸುಳ್ಯಕ್ಕೆ ಬಂದು ಪ್ರತಿಭಟನೆ ಪ್ರಾರಂಭಿಸಿದ್ದರು. ಬಳಿಕ ಮಾತುಕತೆಗಳು ನಡೆದಿದ್ದರೂ ಫಲಪ್ರದವಾಗಿರಲಿಲ್ಲ.

ಈಗ ಮತ್ತೆ ಆಕೆ ಇಬ್ರಾಹಿಂ ಖಲೀಲ್ ಅವರಿಗೆ ಸೇರಿದ ಅಂಗಡಿಯ ಮುಂದೆ ಸೋಮವಾರದಿಂದ ಮತ್ತೆ ಧರಣಿ ಆರಂಭಿಸಿದ್ದಾಳೆ.

Leave A Reply

Your email address will not be published.