ಮನೆ ಮಾಲೀಕನ ಎಡವಟ್ಟಿನಿಂದ ಬೀದಿಗೆ ಬಿದ್ದ 32 ಬಾಡಿಗೆ ಮನೆ ಕುಟುಂಬ!!ಸುರಿಯುತ್ತಿದ್ದ ಮಳೆಗೆ ವೃದ್ಧರು-ಮಕ್ಕಳೆನ್ನದೇ ಎಲ್ಲರೂ ರಸ್ತೆ ಬದಿಯಲ್ಲಿ ನಿಂತು ವಸತಿಗಾಗಿ ಪರದಾಟ

Share the Article

ತುಮಕೂರು:ಯಾರದ್ದೋ ಎಡವಟ್ಟಿನಿಂದ ಇನ್ಯಾರೋ ವ್ಯಥೆ ಪಡುವಂತಾಗಿದೆ.ಹೌದು.ಮನೆ ಮಾಲೀಕ ಸಾಲ ಕಟ್ಟದ ಪರಿಣಾಮ ಬಾಡಿಗೆ ಮನೆಯಲ್ಲಿದ್ದವರು ಬೀದಿಗೆ ಇಳಿಯುವಂತಾಗಿದೆ.

ಬನಶಂಕರಿಯಲ್ಲಿ ಮಂಜುನಾಥ್ ಎಂಬುವವರು ಬ್ಯಾಂಕ್ ನಲ್ಲಿ ಸಾಲ ಪಡೆದು 3 ಕಟ್ಟಡಗಳನ್ನು ಕಟ್ಟಿ 32 ಕುಟುಂಬಗಳಿಗೆ ಬಾಡಿಗೆ ನೀಡಿದ್ದಾರೆ. ಆದರೆ, ಮಂಗಳವಾರ ರಾತ್ರಿ ಸಾಲ ಕಟ್ಟದೇ ಇದ್ದ ಮಾಲೀಕನ ಎಡವಟ್ಟಿನಿಂದ ಬ್ಯಾಂಕ್ ಅಧಿಕಾರಿಗಳು ರಾತ್ರೋರಾತ್ರಿ ಜನರನ್ನು ಬೀದಿಗೆ ದಬ್ಬಿರುವ ಘಟನೆ ನಗರದಲ್ಲಿ ನಡೆದಿದೆ.

ಮನೆ ಬಾಡಿಗೆಗೆ ಇದ್ದ ಕುಟುಂಬಗಳು ಮನೆ ಹೊರಗಡೆ ಕಾಲ ಕಳೆಯುವಂತಾಗಿದೆ.ಸುರಿವ ಮಳೆಯಲ್ಲಿ ಮಕ್ಕಳು-ವೃದ್ಧರು ರಸ್ತೆಬದಿಯಲ್ಲೇ ನಿಂತು ಮನೆಗಾಗಿ ಪರದಾಡಿದ್ದಾರೆ.

ಬುಧವಾರ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲು ಅವಕಾಶವಾಗದಂತೆ ಬ್ಯಾಂಕ್ ಅಧಿಕಾರಿಗಳು
ಮಂಗಳವಾರ ರಾತ್ರಿ ಬಾಡಿಗೆದಾರರನ್ನು ಖಾಲಿ ಮಾಡಿಸಿ
ಮನೆಗೆ ಬೀಗ ಜಡಿದಿದ್ದಾರೆ.ಕೆನರಾ ಬ್ಯಾಂಕ್ ಹಾಗೂ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಮನೆಗಳನ್ನು ಜಪ್ತಿ ಮಾಡಿದ್ದಾರೆ.

Leave A Reply