ಉಚಿತವಾಗಿ ಮನಸೋ ಇಚ್ಛೆ ಪಿಜ್ಜಾ ತಿನ್ನುವ ಅವಕಾಶ | ಪಿಜ್ಜಾ ಉಚಿತವಾಗಿ ತಿಂದವರಿಗೆ 5 ಲಕ್ಷ ರೂಪಾಯಿಗಳ ಕ್ಯಾಶ್ ಕೊಡುಗೆ ಬೇರೆ !

Share the Article

ಪಿಜ್ಜಾ ಅಂದ್ರೆ ಬಹುತೇಕ ಮಂದಿಗೆ ತುಂಬಾ ಪ್ರೀತಿ. ಅದರಲ್ಲಿಯೂ ಈಗಿನ ಮಕ್ಕಳಿಗಂತೂ ಪಿಜ್ಜಾ, ಬರ್ಗರ್ ಮೇಲೆ ಅತಿ ಹೆಚ್ಚು ಪ್ರೀತಿ. ಇದನ್ನು ಸಿಕ್ಕಾಪಟ್ಟೆ ತಿನ್ನುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಹೇಳಿದರೂ ಅದರ ಹೆಸರು ಕೇಳಿದರೆ ಬಾಯಲ್ಲಿ ನೀರು ಜಾರಿಸುವವರೆ ಜಾಸ್ತಿ.
ಅದೇ ಕಾರಣಕ್ಕೆ ಇರಬೇಕು, ಪಿಜ್ಜಾ ಗೆ ರೇಟ್ ಕೂಡ ತುಂಬಾ ಜಾಸ್ತಿ.

ಇಂತಹಾ ಪಿಜ್ಜಾ ಉಚಿತವಾಗಿ ಸಿಗುವಂತಿದ್ದರೆ ಎಂದು ನೀವೆಲ್ಲಾ ಏಷ್ಟೋ ಬಾರಿ ನೀವು ಅಂದುಕೊಂಡಿರಬಹುದು. ಇದೀಗ ನಿಮ್ಮ ಆಸೆ ನೆರವೇರುವ ಸಂದರ್ಭ ಬಂದಿದೆ. ಪಿಜ್ಜಾ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ
ಪಿಜ್ಜಾ ಹಟ್. ಪಿಜ್ಜಾ ಉಚಿತವಾಗಿ ನೀಡುವುದಲ್ಲದೆ, ಪಿಜ್ಜಾ ಪಿಜ್ಜಾ ತಿಂದವರಿಗೆ ಐದು ಲಕ್ಷ ರೂಪಾಯಿಗಳನ್ನೂ ಕಂಪನಿ ನೀಡಲಿದೆಯಂತೆ. ಇದೇನು ಕಾಮಿಡಿನಾ ಅಂತ ನೀವು ಪ್ರಶ್ನಿಸಬೇಡಿ. ನಿಜಕ್ಕೂ ಇದು ಸತ್ಯವಾದ ಮಾತು.

ಅಷ್ಟಕ್ಕೂ ಯಾಕೆ ಇಂಥ ಆಫರ್ ಕೊಡ್ತಾ ಇದೆ ಅಂದುಕೊಂಡ್ರಾ
ಪಿಜ್ಜಾ ಹಟ್ ? ಪಿಜ್ಜಾಗಳ ಟೇಸ್ಟ್ ಮಾಡುವವರನ್ನು ಹುಡುಕುತ್ತಿದೆ ಈ ಪಿಜ್ಜಾ ಹಟ್. ಪಿಜ್ಜಾ ತಿಂದು, ಟೇಸ್ಟ್ ಮಾಡಿ,  ಸರಿಯಾದ ಉತ್ತರ ಹೇಳಿದರೆ ಅಂಥವರನ್ನು ರಾಷ್ಟ್ರದ ಅತ್ಯುತ್ತಮ ಸೂಪರ್-ಟೇಸ್ಟರ್ ಎಂಬ ಬಿರುದು
ನೀಡಲಾಗುತ್ತದೆ. ಅದಕ್ಕಾಗಿ ಸ್ಟಫ್ ಕ್ರಸ್ಟ್ ಪಿಜ್ಜಾಗಳನ್ನು
ತಿನ್ನುವವರಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಟಫ್ ಕ್ರಸ್ಟ್ ಪಿಜ್ಜಾಗಳಲ್ಲಿ ಹೊಸ ಮಾದರಿ ಪರಿಚಯಿಸಿರುವ
ಕಾರಣ ಅದನ್ನು ಟೇಸ್ಟ್ ಮಾಡಿ ಸರಿಯಾದ ಮಾಹಿತಿ ನೀಡಬೇಕಿದೆ. ಅದರಲ್ಲಿ ಏನಾದರೂ ಬದಲಾವಣೆ ಬೇಕೇ ಎಂಬುದನ್ನು ನೋಡಬೇಕಿದೆ. ಇದರ ಜತೆಗೆ, ಚೀಸೀ ಗಾರ್ಲಿಕ್ ಬಟರ್ ಸ್ಟಫ್ ಕ್ರಸ್ಟ್ ಮತ್ತು ಪೆಪ್ಪೆರೋನಿ ಹಾಗೂ ಚೀಸ್ ಸ್ಟಫ್ ಕ್ರಸ್ಟ್ ಎಂಬ ಹೊಸ ರುಚಿಯನ್ನೂ ಪರಿಚಯಿಸುತ್ತಿದ್ದು, ಇವುಗಳ ಗುಣಮಟ್ಟ,ಟೇಸ್ಟ್ ಇತ್ಯಾದಿಗಳನ್ನು ಸರಿಯಾಗಿ ಪರಿಶೀಲಿಸಿ ಹೇಳುವವರಿಗಾಗಿ ಕಂಪೆನಿ ಕಾದಿದೆ.

ಹೀಗೆ ಬಂದ ಅರ್ಜಿಗಳಲ್ಲಿ ಕೆಲವರನ್ನು ಆಯ್ಕೆ ಮಾಡಿ ಪಿಜ್ಜಾ
ತಿನ್ನಲು ನೀಡಲಾಗುತ್ತದೆ. ಸರಿಯಾಗಿ ಇದರ ಬಗ್ಗೆ ವಿವರಣೆ ನೀಡಿ, ಅಗತ್ಯ ಬೇಕಾದ ಬದಲಾವಣೆ ಇತ್ಯಾದಿಗಳನ್ನು ಸೂಚಿಸಿದರೆ ಅಂಥವರಿಗೆ ಸೂಪರ್ ಟೇಸ್ಟರ್ ಬಿರುದು, ಜತೆಗೆ ಐದು ಲಕ್ಷ ರೂಪಾಯಿ ನಗದು ಕೂಡ ಪಿಜ್ಜಾದ ಜತೆ ಪ್ಯಾಕ್ ಮಾಡಿ ಕಳಿಸಲಿದೆ ಈ ಪಿಜ್ಜಾ ಕಂಪನಿ. ನಿಮ್ಮಲ್ಲಿ ಪಿಜ್ಜಾದೆಡೆಗೆ ಒಂದು ಆಸೆ, ತಿನ್ನುವ ಬಾಯಿಚಪಲ ಮತ್ತು ಹೊಸ ರುಚಿಯನ್ನು ಸೂಚಿಸಬಲ್ಲಂತಹ ರಸ ನಾಲಿಗೆ ಇದ್ದಲ್ಲಿ ಅರ್ಜಿ ಗುಜರಾಯಿಸಬಹುದು.
ಅಂದಹಾಗೆ ಇಂಥದ್ದೊಂದು ಆಫರ್ ಇರುವುದು
ಇಂಗ್ಲೆಂಡ್‌ನಲ್ಲಿ. ಆದರೆ ಪಿಜ್ಜಾಹಟ್ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ನೀಡಲಾಗಿದೆ.
https://pizzahutprizes.co.uk/

Leave A Reply