Home News ಕೊಳ್ತಿಗೆ : ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದು ಯುವತಿ,ಒಂದು ಗಂಟೆ ಕಾದರೂ ಸಿಗದ ಯುವತಿ ಗೋಡ್ರೆಜ್‌ನಲ್ಲಿದ್ದಳು

ಕೊಳ್ತಿಗೆ : ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದು ಯುವತಿ,ಒಂದು ಗಂಟೆ ಕಾದರೂ ಸಿಗದ ಯುವತಿ ಗೋಡ್ರೆಜ್‌ನಲ್ಲಿದ್ದಳು

Hindu neighbor gifts plot of land

Hindu neighbour gifts land to Muslim journalist

ಪುತ್ತೂರು : ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿ ಇದ್ದಾಳೆ ಎಂಬ ಗುಮಾನಿ ಹಿನ್ನೆಲೆಯಲ್ಲಿ ಯುವಕನ ಮನೆ ಮುಂದೆ ಸಾರ್ವಜನಿಕರು ಜಮಾಯಿಸಿದ ಘಟನೆ ಕೊಳ್ತಿಗೆ ಗ್ರಾಮದ ಕುಂಟಿಕಾನ ಎಂಬಲ್ಲಿ ಸೆ.29 ರಂದು ನಡೆದಿದೆ.

ಸೆ.29 ರಂದು ಅನ್ಯಕೋಮಿನ ಯುವಕನೋರ್ವನ ಮನೆಯಲ್ಲಿ ಹಿಂದೂ ಯುವತಿಯೊಬ್ಬಳು ತಂಗಿದ್ದಾಳೆ ಎನ್ನುವ ಬಗ್ಗೆ ಮಾಹಿತಿ ದೊರೆತ ಸ್ಥಳೀಯರು ಮನೆ ಬಳಿ ತೆರಳಿ ನೋಡಿದಾಗ ಯುವತಿಯೊಬ್ಬಳಿದ್ದಳೆಂದು ಸಾರ್ವಜನಿಕರು ತಿಳಿಸಿದ್ದಾರೆ.

ಈ ಬಗ್ಗೆ ತಿಳಿಯುತ್ತಿದಂತೆ ಅನ್ಯಕೋಮಿನ ಯುವಕನೋರ್ವನ ಮನೆ ಬಳಿ ಸಾರ್ವಜನಿಕರು ದೌಡಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.

ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಮನೆಗೆ ಆಗಮಿಸಿದಾಗ ಒಂದು ಗಂಟೆಗಳ ಕಾಲ ಬಾಗಿಲು ತೆಗೆಯದೆ, ನಂತರ ಬಾಗಿಲು ತೆಗೆದಿದ್ದು ಮನೆಯೊಳಗೆ ಹುಡುಕಾಡಿದಾಗ ಯುವತಿ ಮನೆಯಲ್ಲಿ ಇಲ್ಲದೆ ಕಾರಣ ಯುವತಿಯನ್ನು ಬೇರೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದರು.ಆದರೆ ಪೊಲೀಸರು ಮನೆಯೊಳಗೆ ಹುಡುಕಾಡಿದಾಗ ಸಿಗದ ಯುವತಿ ಗೋಡ್ರೆಜ್‌ನಲ್ಲಿ ಅಡಗಿ ಕೂತಿದ್ದಳು ಎನ್ನಲಾಗಿದೆ.

ಬಳಿಕ ಜನರೆಲ್ಲ ತೆರಳಿದ ಬಳಿಕ ಯುವತಿ ಯನ್ನು ಜಾಲ್ಸೂರಿನಲ್ಲಿ ಬಿಟ್ಟು ಬಂದಿದ್ದು,ಯುವತಿಯನ್ನು ಕೆಲವರು ಪ್ರಶ್ನಿಸಿದಾಗ ನಡೆದ ಘಟನೆ ವಿವರಿಸಿ ಗೋಡ್ರೆಜ್‌ನಲ್ಲಿ ಅಡಗಿ ಕೂತ ಬಗ್ಗೆ ತಿಳಿಸಿದ್ದಾಳೆ ಎನ್ನಲಾಗಿದೆ.

ಯುವಕ ದೇಲಂಪಾಡಿ ಕಡೆ ಕೆಲಸಕ್ಕೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಯುವತಿಯ ಪರಿಚಯವಾಗಿ ಅವಳನ್ನು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆಗೆ ಕರೆ ತಂದಿದ್ದಾನೆ ಎನ್ನಲಾಗಿದೆ. ಇದೀಗ ಯುವಕ ಮತ್ತು ಯುವತಿ ಪೊಲೀಸರ ವಶದಲ್ಲಿ ಇದ್ದಾರೆ ಎನ್ನಲಾಗಿದೆ.