Home News ಸುಬ್ರಹ್ಮಣ್ಯ : ಮಾಸ್ಟರ್ ಪ್ಲ್ಯಾನ್ ಕಾಮಗಾರಿ, ರಸ್ತೆ ಅಗೆತ ಸಾರ್ವಜನಿಕರಿಗೆ ಕಿರಿ ಕಿರಿ

ಸುಬ್ರಹ್ಮಣ್ಯ : ಮಾಸ್ಟರ್ ಪ್ಲ್ಯಾನ್ ಕಾಮಗಾರಿ, ರಸ್ತೆ ಅಗೆತ ಸಾರ್ವಜನಿಕರಿಗೆ ಕಿರಿ ಕಿರಿ

Hindu neighbor gifts plot of land

Hindu neighbour gifts land to Muslim journalist

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್‌ ಪ್ಲ್ಯಾನ್ ನ ಕಾಮಗಾರಿಯಲ್ಲಿ ಕಳಪೆ ಯಾಗಿದೆ ಅದಕ್ಕಾಗಿ ರಸ್ತೆ ಅಗೆಯಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯ ದಲ್ಲಿ ವ್ಯಕ್ತವಾಗಿ ಅಸಮಾಧಾನ ಹೊರ ಹೊಮ್ಮಿದೆ.

ಬಹು ಕೋಟಿ ರೂ. ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಮಾಸ್ಟರ್‌ ಪ್ಲ್ಯಾನ್ ಕಾಮಗಾರಿ ಹಲವು ವರ್ಷಗಳಿಂದ ನಡೆಯು ತ್ತಿದೆ. ಇದರಲ್ಲಿ ಮೂಲ ಸೌಕ ರ್ಯದ ಜತೆ ರಸ್ತೆ ಸಂಪರ್ಕವೂ ಒಳ ಗೊಂಡಿದೆ.

ಸುಬ್ರಹ್ಮಣ್ಯದ ಕುಮಾರಧಾರಾ ಬಳಿಯಿಂದ ಕುಕ್ಕೆ ದೇಗುಲದವರೆಗೂ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಿರ್ಮಿಸ ಲಾಗಿದೆ.

ಕುಮಾರಧಾರಾ ಬಳಿಯಿಂದ ಕಾಶಿಕಟ್ಟೆ ವರೆಗೆ ದ್ವಿಪಥದ ರಸ್ತೆ ನಿರ್ಮಾಣಗೊಂಡಿದೆ. ಇದೀಗ ಎಸ್‌ಎಸ್‌ಪಿಯು ಕಾಲೇಜು ಬಳಿ ಸಂಪರ್ಕ ರಸ್ತೆಯನ್ನು ಬಂದ್‌ ಮಾಡಿ ಕಾಂಕ್ರೀಟ್‌ ರಸ್ತೆಯನ್ನು ಯಂತ್ರದ ಸಹಾಯದಿಂದ ಅಗೆಯಲಾಗಿದೆ.

ಗುಣಮಟ್ಟದಲ್ಲಿ ಅವೈಜ್ಞಾನಿಕತೆ ಅಥವಾ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಇದಕ್ಕಾಗಿ ರಸ್ತೆಯನ್ನು ನೆಲಮಟ್ಟದವರೆಗೆ ಅಗೆದು ಹಾಕಲಾಗಿದೆ ಎಂಬ ದೂರು ಕೇಳಿ ಬಂದಿದೆ. ಅಗೆದು ಹಾಕಲಾದಲ್ಲಿ ಮತ್ತೆ ಕಬ್ಬಿಣದ ಸರಳು ಬಳಸಿ ತೇಪೆ ರೀತಿ ಕಾಮಗಾರಿ ನಡೆಸಲಾಗುತ್ತಿದೆ.