ಅಂತರ್ಜಾತಿ ಮದುವೆಗೆ ಒಪ್ಪದ ಪ್ರಿಯಕರನ ಮನೆಯವರು |
ಪ್ರೇಯಸಿಗೆ ನ್ಯಾಯ ಒದಗಿಸಿದ ಪೊಲೀಸರು , ಠಾಣೆಯಲ್ಲೇ ಮದುವೆ
ಅಂತರ್ಜಾತಿ ಕಾರಣದಿಂದ ಪ್ರೀತಿಸಿದ ಹುಡುಗ ಮದುವೆ ಆಗಲು ಹಿಂದೇಟು ಹಾಕುತ್ತಿರುವ ಬಗ್ಗೆ ದೂರು ನೀಡಲು ಬಂದ ಪ್ರೇಯಸಿಯೊಂದಿಗೆ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಆಕೆಯ ಪ್ರಿಯಕರನ ಜೊತೆಗೆ ಮದುವೆ ಮಾಡಿದ ಪ್ರಸಂಗ ಶುಕ್ರವಾರ ನಡೆಯಿತು.
ಸೊಲ್ಲಾಪುರದ ಅಕ್ಕಲಕೋಟ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ವಿದ್ಯಮಾನ ನಡೆದಿದೆ.
ಅಕ್ಕಲಕೋಟ ತಾಲೂಕಿನ ಮೈಂದರ್ಗಿಯ ಸಚಿನ್ ಮತ್ತು ಯಲ್ಲವ್ವ ಎನ್ನುವರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರೂ ಮದುವೆಯಾಗಲು ಮುಂದಾಗಿದ್ದರು. ಆದರೆ ಅಂತರ್ಜಾತಿ ಕಾರಣದಿಂದ ಸಚಿನ್ ಕುಟುಂಬದವರು ಮದುವೆ ವಿರೋಧಿ ಸಿದ್ದರು. ಹೀಗಾಗಿ ಯಲ್ಲವ್ವ ನ್ಯಾಯಕ್ಕಾಗಿ ಅಕ್ಕಲಕೋಟ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಳು.
ಈಕೆಯ ತಂದೆ-ತಾಯಿ ಕಳೆದ ಆರು ತಿಂಗಳ ಹಿಂದೆ ಮೃತಪಟಿದ್ದು, ಅಜ್ಜಿಯ ಬಳಿ ವಾಸಿಸುತ್ತಿದ್ದಾಳೆ. ಪೊಲೀಸ್ ನಿರೀಕ್ಷಕ ಪ್ರದೀಪ ಕಾಳೆ ಯುವತಿಯ ಸಂಪೂರ್ಣ ಮಾಹಿತಿ ಆಧರಿಸಿ, ಸಚಿನ್ ಮತ್ತು ಆತನ ಸಂಬಂಧಿ ಕರನ್ನು ಠಾಣೆಗೆ ಕರೆಸಿಕೊಂಡು ತಿಳಿವಳಿಕೆ ಮೂಡಿಸಿದರು.
ನಂತರ ಮದುವೆಗೆ ಎಲ್ಲರನ್ನು ಒಪ್ಪಿಸಲಾಯಿತು. ನಂತರ ಪ್ರದೀಪ ಕಾಳೆ ಅವರು ಶುಕ್ರವಾರ ರಾತ್ರಿ 11 ಗಂಟೆಗೆ ಯುವತಿಯ ತಂದೆ ಸ್ಥಾನದಲ್ಲಿ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ಮದುವೆ ಮಾಡಿಕೊಟ್ಟರು. ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪ್ರವೀಣ ಲೋಕರೆ, ಸುನೀಲ ಮಾನೆ, ಏಜಾಜ್ ಮುಲ್ಲಾ, ಜಿ.ಪಂ ಸದಸ್ಯ ಮಲ್ಲಿಕಾರ್ಜುನ ಪಾಟೀಲ, ನಗರಸೇವಕ ಸದ್ದಾಂ ಶೇರಿಕರ್ ಇದ್ದರು