ನಾಳೆ ಭಾರತ ಬಂದ್!!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ರೈತಪರ ಸಂಘಟನೆಗಳಿಂದ ಬಂದ್ ಗೆ ಕರೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿದ ಕೆಲ ರೈತಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲು ನಾಳೆ 27 ಸೋಮವಾರದಂದು ಭಾರತ ಬಂದ್ ಗೆ ಕರೆ ನೀಡಿದ್ದು,ಕೆಲ ಸಂಘಟನೆಗಳ ಹೆಚ್ಚಿನ ಬೆಂಬಲವೂ ವ್ಯಕ್ತವಾಗಿದ್ದು,ಹೀಗಾಗಿ ನಾಳೆ ಕೆಲ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯವಾಗುವ ಸಂಭವವಿದೆ ಎಂದು ತಿಳಿದುಬಂದಿದೆ.
ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಸಂಚಾರವಿದ್ದು, ಆಟೋ ಉಬರ್ ಓಲಾ ಸಂಘಟನೆಗಳು ಕೂಡಾ ಬಂದ್ ಗೆ ಬೆಂಬಲ ನೀಡಲಿವೆ. ಇನ್ನು ಲಾರಿ ಮಾಲಕರ ಸಂಘ, ವರ್ತಕರ ಸಂಘ ಕೂಡಾ ಬಂದ್ ಗೆ ಬೆಂಬಲ ಸೂಚಿಸಿದೆ. ಈ ನಡುವೆ ನಾಳೆ ಕರ್ನಾಟಕದಲ್ಲಿ ಏನಿರುತ್ತೆ ಏನಿರಲ್ಲ ಎಂಬುವುದರ ಬಗ್ಗೆ ತಿಳಿಯುವುದಾದರೆ,
ಸರ್ಕಾರಿ ಸಾರಿಗೆ ಬಸ್ ಗಳು, ಆಟೋ ಉಬರ್, ಓಲಾ ಟ್ಯಾಕ್ಸಿ ಗಳು ಎಂದಿನಂತೆಯೇ ಸೇವೆ ನೀಡಲಿದ್ದು, ಹೋಟೆಲ್, ಬೀದಿ ಬದಿ ವ್ಯಾಪಾರ, ಶಾಲಾ ಕಾಲೇಜು ಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಲಿದೆ.
ಈ ನಡುವೆ ಆಟೋ ಕ್ಯಾಬ್ ಚಾಲಕರ ಸಂಘ, ರೈತ ಕಾರ್ಮಿಕ ಸಂಘ, ಅಖಿಲ ಭಾರತ ಕಿಸಾನ್ ಸಂಘ, ರಾಜ್ಯ ಹಸಿರು ಸೇನೆ, ರಾಜ್ಯ ರೈತ ಸಂಘ, ಸಂಯುಕ್ತ ಕಿಸಾನ್ ಮೋರ್ಚಾ ಸಹಿತ ಹಲವು ಸಂಘಟನೆಗಳು ಬಂದ್ ಗೆ ನೈತಿಕ ಬೆಂಬಲ ಸೂಚಿಸಿದ್ದು, ನಾಳೆ ನಗರಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ.