Home News ಅದೊಂದು ವಿಶೇಷವಾದ ಕಪ್ಪು ಕೋಳಿ!!ತನ್ನ ಮಾಂಸ,ಮೂಳೆ, ಗರಿ ಸಹಿತ ದೇಹದ ಎಲ್ಲಾ ಭಾಗದಲ್ಲೂ ಕಪ್ಪು ಬಣ್ಣ...

ಅದೊಂದು ವಿಶೇಷವಾದ ಕಪ್ಪು ಕೋಳಿ!!ತನ್ನ ಮಾಂಸ,ಮೂಳೆ, ಗರಿ ಸಹಿತ ದೇಹದ ಎಲ್ಲಾ ಭಾಗದಲ್ಲೂ ಕಪ್ಪು ಬಣ್ಣ ಹೊಂದಿದೆ ಭೋಜನಕ್ಕೆ ಯೋಗ್ಯವಲ್ಲದ ಆ ಕೋಳಿಯ ಬಗ್ಗೆ ನಿಮಗೆಷ್ಟು ಗೊತ್ತು!!?

Hindu neighbor gifts plot of land

Hindu neighbour gifts land to Muslim journalist

ಪ್ರಪಂಚದಲ್ಲಿ ಹಲವಾರು ವಿಭಿನ್ನವಾದ ಆಶ್ಚರ್ಯಗಳು, ಕುತೂಹಲ ಕೆರಳಿಸುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.ಮನುಷ್ಯರಲ್ಲಿ, ಮರಗಿಡಗಳಲ್ಲಿ ಕುತೂಹಲ ಕಂಡ ನೆಟ್ಟಿಗರು,ಸದ್ಯ ಪ್ರಾಣಿ ಪಕ್ಷಿಗಳಲ್ಲೂ ಅಂತಹ ಅಚ್ಚರಿಯ ಸಂಗತಿ ಇರುವುದನ್ನು ತಿಳಿದು ದಿಗ್ಭ್ರಮೆಗೊಂಡಿದ್ದಾರೆ.

ಹೌದು. ಅಂತಹ ಅಚ್ಚರಿಯೇನೆಂದರೆ, ಕೋಳಿಯೊಂದು ಕಪ್ಪು ಬಣ್ಣ ಹೊಂದಿದ್ದು. ಇದರಲ್ಲಿ ವಿಶೇಷವೇನಿದೆ, ಸಾಮಾನ್ಯ ಅಲ್ಲವೇ ಎಂದು ಆಲೋಚಿಸುವ ನಿಮ್ಮ ಮಂಕು ಬುದ್ಧಿಗೆ ಇಲ್ಲೊಂದು ಉದಾಹರಣೆಯ ಜೊತೆಗೆ ಕುತೂಹಲದ ವಿಷಯವನ್ನು ವಿವರಿಸುತ್ತೇವೆ.

ಅದೊಂದು ತಿಳಿಯ ಕೋಳಿ. ಅದರಲ್ಲಿನ ವಿಶೇಷತೆ ಏನೆಂದರೆ, ಅವುಗಳು ತೀರಾ ಕಪ್ಪು ಬಣ್ಣ ಹೊಂದಿದ್ದು, ಒಂದುವೇಳೆ ಖರೀದಿಸಿದರೂ ಭೋಜನಕ್ಕೆ ಯೋಗ್ಯವಲ್ಲವಾಗಿದೆ. ಮಾಂಸಗಳಿಂದ ಹಿಡಿದು ಅದರ ದೇಹದಲ್ಲಿನ ಪ್ರತೀ ಭಾಗವೂ ಕಪ್ಪು ಬಣ್ಣದಿಂದ ಕೂಡಿದೆ. ಇಂತಹ ಕೋಳಿಗಳು ಇಂಡೋನೇಷ್ಯಾದಲ್ಲಿ ಕಾಣಸಿಗುತ್ತವೆ. ಇವುಗಳನ್ನು ಅಯಮ್ ಸೆಮಾನಿ ಎಂಬ ಹೆಸರಿನಿಂದ ಅಲ್ಲಿ ಕರೆಯಲಾಗುತ್ತದೆ.

ಇವುಗಳು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಕೂಡಿರುವುದರಿಂದ ಹಲವಾರು ಸಂಶೋಧನೆಗಳನ್ನು ಮಾಡಿದ ಬಳಿಕ ಇವುಗಳು ಪುರಾತನ ಕೋಳಿ ಎಂದು ಗುರುತಿಸಲಾಗಿದ್ದು, ಹಲವಾರು ಅಡ್ಡ ಹೆಸರುಗಳಿಂದ ಕರೆಯಲಾಗುತ್ತಿದೆ.