ಕಡಬ:ಸ್ವಿಫ್ಟ್ ಡಿಸೈರ್,ಎರ್ಟಿಗಾ ಹಾಗೂ ವಾಯುವ್ಯ ಸಾರಿಗೆ ನಡುವೆ ಸರಣಿ ಅಪಘಾತ!!ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರು

Share the Article

ಎರಡು ಕಾರು ಹಾಗೂ ವಾಯುವ್ಯ ಸಾರಿಗೆ ಬಸ್ ನಡುವೆ ಸರಣಿ ಅಪಘಾತ ಸಂಭವಿಸಿ, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಇಂದು ಮುಂಜಾನೆ ಕಡಬದಲ್ಲಿ ನಡೆದಿದೆ.

ಘಟನೆ ವಿವರ:ಕಡಬದಿಂದ ಮರ್ದಾಳ ಕಡೆಗೆ ತೆರಳುತ್ತಿದ್ದ ಕಡಬದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಡೀಸೆಲ್ ತುಂಬಿಸಲೆಂದು ಪೆಟ್ರೋಲ್ ಬಂಕ್ ಗೆ ತಿರುಗುವ ವೇಳೆ ಕಡಬ ಕಡೆಗೆ ತೆರಳುತ್ತಿದ್ದ ಎರ್ಟಿಗಾ ನಡುವೆ ಢಿಕ್ಕಿ ಸಂಭವಿಸಿದೆ. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಕುಕ್ಕೆಯಿಂದ ಗೋಕರ್ಣಕ್ಕೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಎರ್ಟಿಗಾ ಕಾರಿಗೆ ಹಿಂಬದಿಯಿಂದ ಢಿಕ್ಕಿಯಾಗಿದೆ. ಘಟನೆಯಲ್ಲಿ ವಾಹನ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave A Reply