ಉಪ್ಪಿನಂಗಡಿ : ಇಬ್ಬರು ವ್ಯಕ್ತಿಗಳ ಆತ್ಮಹತ್ಯೆ

Share the Article

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಾರ್ಯ ಗ್ರಾಮದ ಅಜೀರ ನಿವಾಸಿ ಡೀಕಯ್ಯ ಗೌಡ
ಮೃತಪಟ್ಟವರು. ಇವರು ಸೆ.19 ರಂದು ತನ್ನ ಮನೆಯ ಬಾತ್‌ರೂಂನಲ್ಲಿ ಹುಲ್ಲು ಸಾಯಲೆಂದು ತಂದಿಟ್ಟ ವಿಷ ಪದಾರ್ಥವನ್ನು ಸೇವಿಸಿದ್ದರೆನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡ
ಅವರನ್ನು ಬಳಿಕ ಉಪ್ಪಿನಂಗಡಿ, ಪುತ್ತೂರು ಆಸ್ಪತ್ರೆಗೆ
ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಹೆಚ್ಚಿನ
ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಸೆ.20ರಂದು ಅವರು ಚಿಕಿತ್ಸೆ ಫಲಕಾರಿಯಾಗದೇ
ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆ ಬಿಳಿಯೂರು ಗ್ರಾಮದಲ್ಲಿ ಸೆ.20ರಂದು ಬೆಳಕಿಗೆ ಬಂದಿದೆ.

ಪುರಿಯಾ ನಿವಾಸಿ ಗಿರೀಶ್ (29) ಮೃತ ವ್ಯಕ್ತಿ. ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಇವರು ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಪೆಗೊಂಡು ಸೆ.19ರಂದು ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಬಾವಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗ್ಗೆ ಬಾವಿಯಲ್ಲಿ ಗಿರೀಶ್ ಅವರ ಮೃತದೇಹ ಕಂಡು ಬಂದರೂ, ಮೃತದೇಹ ಮೇಲೆತ್ತಲು ಯಾರೂ ಮುಂದಾಗಲಿಲ್ಲ. ಬಳಿಕ ಹಿರೇಬಂಡಾಡಿಯ ಅಬ್ದುರಹ್ಮಾನ್ ಅಡೆಕ್ಕಲ್ ಹಾಗೂ ಕೊಯಿಲದ ಆಸೀಫ್ ಅವರು ತೆರಳಿ ಮೃತದೇಹವನ್ನು ಮೇಲೆತ್ತಿದರು.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply