Home News ಬೆಂಗಳೂರು ಸೆಕ್ಸ್ ವಿಡಿಯೋ ಜಾಲದಲ್ಲಿ ಸಿಲುಕಿದರೆ ಸದಾನಂದ ಗೌಡರು? ವೈರಲ್ ಆದ ವೀಡಿಯೋ ಸತ್ಯಾಸತ್ಯತೆ ಏನು?

ಸೆಕ್ಸ್ ವಿಡಿಯೋ ಜಾಲದಲ್ಲಿ ಸಿಲುಕಿದರೆ ಸದಾನಂದ ಗೌಡರು? ವೈರಲ್ ಆದ ವೀಡಿಯೋ ಸತ್ಯಾಸತ್ಯತೆ ಏನು?

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಮಾಜಿ ಸಚಿವ,ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರನ್ನು ಹೋಲುವ ವ್ಯಕ್ತಿಯ ನಗ್ನ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗಿದೆ.

ಈ ಹಿಂದೆ ಸದಾನಂದ ಗೌಡರ ವಿಡಿಯೋ ಇದೆ ಎಂದು ಸುದ್ದಿ ಹಬ್ಬುತ್ತಿದ್ದು, ಇದೀಗ ಆ ವಿಡಿಯೋ ಎಂದು ಹೇಳಲಾದ ತುಣುಕೊಂದು ವೈರಲ್ ಆಗಿದೆ..

ವಿಡಿಯೋದಲ್ಲಿ ಅದು ತೋರಿಸಿ ಇದು ತೋರಿಸಿ ಎಂದು ಒತ್ತಾಯಿಸುತ್ತಿರುವುದು ಕಂಡುಬಂದಿದೆ‌.

ಈ ವಿಡಿಯೋ ಸುಳ್ಳು ಎಂದು ಸ್ವತಃ ಸದಾನಂದ ಗೌಡರೇ ಸ್ಪಷ್ಟನೆ ನೀಡಿದ್ದರು.ಇದರ ಸತ್ಯಾತ್ಯತೆ ಏನೆಂದು ಇನ್ನಷ್ಟೇ ಬಯಲಾಗಬೇಕಿದೆ. ಇದು ತೋರಿಕೆಗೆ ಹನಿಟ್ರ್ಯಾಪ್‌ನಂತೆ ಕಾಣುತ್ತಿದೆ.

ವಿಡಿಯೋ ವೈರಲ್ ಆಗುತ್ತಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸದಾನಂದಗೌಡ ಅವರು ದೂರು ನೀಡಿದ್ದು, ನನ್ನ ವಿರುದ್ಧ ಫ್ಯಾಬ್ರಿಕೇಟೆಡ್, ಫೇಕ್ ವಾಯ್ಸ್ ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ, ನನ್ನ ಇಮೇಜ್ ಹಾಳು ಮಾಡಲೆಂದು ಈ ವಿಡಿಯೋ ಹರಿಬಿಡಲಾಗಿದೆ’ ಎಂದು ಆರೋಪಿಸಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ, ಇಂಪರ್ಸೊನೇಷನ್ ಮೂಲಕ ಈ ವಿಡಿಯೋ ಸಿದ್ಧಪಡಿಸಲಾಗಿದೆ. ಈ ವಿಡಿಯೋ ಒಬ್ಬರಿಂದ ಒಬ್ಬರಿಗೆ ಹೋಗುವ ಮುನ್ನ ಕ್ರಮತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.