ಮಕ್ಕಿಮನೆ ಕಲಾವೃಂದ ಮಂಗಳೂರು: ಆನ್ ಲೈನ್ ಮೂಲಕ ಮೂರುದಿನ ಶ್ರೀ ಗಣೇಶೋತ್ಸವ-2021 ಯಶಸ್ವಿಯಾಗಿ ಸಮಾಪನ
ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಕೊರೊನಾದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಆನ್ ಲೈನ್ ಮೂಲಕ ಮೂರು ದಿನಗಳ ಕಾಲ ವಿಶೇಷವಾಗಿ ಶ್ರೀ ಗಣೇಶೋತ್ಸವ -2021 ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಗುರುವಾರ : ಯುವ ವಾಗ್ಮಿ ಭಾವನ ಆರ್ ಗೌಡ ಶಿವಮೊಗ್ಗ ರವರು ಗೌರಿ ಗಣೇಶ ಹಬ್ಬದ ಹಿನ್ನೆಲೆ ಹಾಗೂ ಸಂಪ್ರದಾಯದ ಬಗ್ಗೆ ಉಪನ್ಯಾಸ ನೀಡಿದರು.
ಶುಕ್ರವಾರ :ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೋತ್ಸವ ಕಾರ್ಯಕ್ರಮ ನೆರವೇರಿತು.
ಸಂಜೆ ಶೃಂಗ ತರಂಗ ಮ್ಯೂಸಿಕಲ್ ಟೀಮ್ ಕೊಪ್ಪ, ಮಲೆನಾಡಿನ ಪ್ರಸಿದ್ಧ ಗಾಯಕರಿಂದ ಗಾನೋತ್ಸವ ಕಾರ್ಯಕ್ರಮ ಜರಗಿತು.
ಶನಿವಾರ :ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ) ಪುತ್ತೂರು, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡ ಮಂಗಳೂರು, ಶ್ರೀ ಯಕ್ಷನಿಧಿ ಮೂಡುಬಿದಿರೆ (ರಿ)ಯಕ್ಷಗಾನ ಶಿಕ್ಷಣ ಸಂಸ್ಥೆ, ವೈಷ್ಣವಿ ನಾಟ್ಯಲಯ ಪುತ್ತೂರು, ತಾಂಡವ ನೃತ್ಯಲಯ ಬಜತ್ತೂರು ಉಪ್ಪಿನಂಗಡಿ,ಈಶ ಲಾಸ್ಯ ನೃತ್ಯ ತಂಡ ಚಿತ್ರಪಾಡಿ ಸಾಲಿಗ್ರಾಮ, ವಿ ರಾಕ್ಸ್ ಡ್ಯಾನ್ಸ್ ಕಂಪೆನಿ ಬ್ರಹ್ಮಗಿರಿ ಉಡುಪಿ, ಡ್ಯಾಜ್ಲಿಂಗ್ ಇಲೈಟ್ ಡ್ಯಾನ್ಸ್ ಕ್ರಿವ್ ಅತ್ತಾವರ ಮಂಗಳೂರು,ಆರ್.ಜೆ ಗರ್ಲ್ ಡ್ಯಾನ್ಸ್ ಟೀಮ್ ಮಾರ್ನಾಮಿ ಕಟ್ಟೆ ಮಂಗಳೂರು, ಹಂಸಧ್ವನಿ ಕಲಾ ನಾಟ್ಯಾಂಜಲಿ ಮೆಲ್ಕರ್, ವಿಶ್ವಾಸ್ ಕಿಡ್ಸ್ ಡ್ಯಾನ್ಸ್ ಟೀಮ್ ಉಡುಪಿ, ಶ್ರೀ ಗುರು ನೃತ್ಯ ತಂಡ ಪೆರ್ಮಂಕಿ ಉಳಾಯಿಬೆಟ್ಟು, ದೇವರ ಮನೆ ಮಕ್ಕಳ ಬಳಗ ಹೊರನಾಡು, ಶ್ರೇಯಾ ಭಟ್ ನೃತ್ಯ ತಂಡ ಬೋಳುರ್ ಮಂಗಳೂರು . ಭಾಗವಹಿಸಿದ್ದರು.
ಶ್ರೇಯಾ ಎಂ.ಜಿ ಸುಳ್ಯ ನಿರೂಪಿಸಿದರು, ಧೀರಜ್ ಡಿ ಜೈನ್ ಹೊರನಾಡು ಹಾಗೂ ಧಾತ್ರಿ ಮಂಗಳೂರು ಸಹಕರಿಸಿದರು.
ರಾತ್ರಿ : ಧಾತ್ರಿ ಮಂಗಳೂರು ಅವರ ಮನೆಯಲ್ಲಿ ಸರಳವಾಗಿ ಗಣಪತಿ ದೇವರಿಗೆ ಮಹಾ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಧವ ಎಂ . ಎಸ್ ಶಿವಮೊಗ್ಗ , ಸುದೇಶ್ ಜೈನ್ ಮಕ್ಕಿಮನೆ, ವಿಜೇಶ್ ದೇವಾಡಿಗ ಮಂಗಳಾದೇವಿ, ಪ್ರೀತ ಮಾಧವ, ಪ್ರಿಯದರ್ಶಿನಿ ಸುದೇಶ್ ಕುಮಾರ್ ಮಂಗಳೂರು , ರೀಮಾ ಜಗನ್ನಾಥ್ ಮಾರ್ನಮಿಕಟ್ಟೆ , ಮೊದಲಾದವರು ಉಪಸ್ಥಿತರಿದ್ದರು.
ಭಾನುವಾರ : ಸಂಜೆ ಧನ್ವಿಶ್ರೀ ಮೆಲೋಡೀಸ್ ಮಂಗಳೂರು ಕರಾವಳಿಯ ಪ್ರಸಿದ್ಧ ಗಾಯಕರಿಂದ ಗಾನೋತ್ಸವ ಕಾರ್ಯಕ್ರಮ ಜರಗಿತು.