‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಪೂ. ರಮಾನಂದ ಗೌಡ ಇವರ ಶುಭಹಸ್ತದಿಂದ ಉದ್ಘಾಟನೆ !

ಸರ್ವಾಂಗಸ್ಪರ್ಶಿ ಸನಾತನ ನಿರ್ಮಿತ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಕಲ್ಯಾಣ ಮಾಡಿ – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮಂಗಳೂರು: ಭಗವದ್ಗೀತೆ, ಮಹಾಭಾರತ ಇವುಗಳು ಈಶ್ವರ ವಾಣಿಯಿಂದ ಸಾಕಾರಗೊಂಡಿವೆ. ಆದ್ದರಿಂದ ಅವು ತುಂಬಾ ಚೈತನ್ಯದಿಂದ ಕೂಡಿವೆ. ಅದೇ ರೀತಿ ಸನಾತನದ ಗ್ರಂಥಗಳು ಸಹ ಈಶ್ವರೀ ಸಂಕಲ್ಪದಿಂದ ಸಾಕಾರಗೊಂಡಿವೆ. ಇವು ಸ್ವಯಂಭೂ ಚೈತನ್ಯದ ಆಗರವಾಗಿದ್ದು ಅದರ ಅಧ್ಯಯನ ಮಾಡುವ ಜೀವಗಳು ಅದನ್ನು ಕೃತಿಯಲ್ಲಿ ತಂದರೆ ಅವರು ಮುಂದೆ ಸಾಧಕರು, ಶಿಷ್ಯರು ಹಾಗೂ ಸಂತರೂ ಆಗಬಹುದು. ಈ ಗ್ರಂಥಗಳಿಂದಾಗಿ ಮನೆಯಲ್ಲಿ ಸಾತ್ತ್ವಿಕ ಸ್ಪಂದನಗಳು ನಿರ್ಮಾಣವಾಗಿ ವಾಸ್ತುಶುದ್ಧಿಯನ್ನೂ ಮಾಡುತ್ತದೆ.  ಈ ಗ್ರಂಥಗಳ ಅಧ್ಯಯನದಿಂದ ಅಂತರ್ಮನಸ್ಸಿನಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ. ಇದರ ಅಧ್ಯಯನ ಮಾಡಿ ಕೃತಿಯಲ್ಲಿ ತರುವುದೆಂದರೆ ಸಾಧನೆ ಮಾಡುವುದೇ ಆಗಿದೆ. ಇದರಿಂದ ಅವರ ಉದ್ಧಾರವೇ ಆಗುತ್ತದೆ. ಆದ್ದರಿಂದ 5 ನೇ ವೇದಕ್ಕೆ ಸಮಾನವಾಗಿರುವ ಈ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಉದ್ಧಾರ ಮಾಡೋಣ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು.

ಪೂ. ರಮಾನಂದ ಗೌಡ ಇವರು ಆನ್‌ಲೈನ್‌ನಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸುಮಾರು 600 ಕ್ಕೂ ಹೆಚ್ಚು ಜನರು ಕಾರ್ಯಕ್ರಮವನ್ನು ವೀಕ್ಷಿಸಿ ಅದರ ಲಾಭ ಪಡೆದರು. ಶಂಖನಾದ ಮಾಡುವುದರ ಮೂಲಕ ಆರಂಭವಾದ ಈ ಕಾರ್ಯಕ್ರಮದಲ್ಲಿ ಪೂ. ರಮಾನಂದ ಗೌಡ ಇವರ ಶುಭ ಹಸ್ತದಿಂದ ಶ್ರೀಫಲವನ್ನು ಒಡೆದು ದೀಪ ಪ್ರಜ್ವಲಿಸುವ ಮೂಲಕ  ಈ ಅಭಿಯಾನವನ್ನು ಉದ್ಘಾಟಿಸಲಾಯಿತು. ಮತ್ತು ಅವರ ಶುಭಹಸ್ತದಿಂದಲೇ  ಈ ಸಮಯದಲ್ಲಿ  ಅಭಿಯಾನಕ್ಕೆ ಸಂಬಂಧಿತ ಡಿಪಿ, ಸಂಗಣಕೀಯ ಧರ್ಮಫಲಕಗಳನ್ನು ಸಂಚಾರಿಗಣಕಯಂತ್ರದ ಮೂಲಕ ಪ್ರಕಾಶನ ಮಾಡಲಾಯಿತು.

ಸೆಪ್ಟೆಂಬರ್ 1 ರಿಂದ 31 ರವರೆಗೆ ಸನಾತನದ ಅದ್ವಿತೀಯ ಮತ್ತು ಸರ್ವಾಂಗಸ್ಪರ್ಶಿ ಸನಾತನದ ಗ್ರಂಥಗಳನ್ನು ಮನೆಮನೆಗೆ ತಲುಪಿಸುವ ದೃಷ್ಟಿಯಿಂದ ಈ ಮಹಾನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 2021 ರ ತನಕ ಕನ್ನಡ, ಮರಾಠಿ, ತಮಿಳು ತೆಲುಗು ಸೇರಿದಂತೆ 17 ಭಾಷೆಗಳಲ್ಲಿ 345 ಸನಾತನದ ಗ್ರಂಥಗಳ ಪ್ರಕಾಶನವಾಗಿವೆ. ಈ ಗ್ರಂಥಗಳ ಒಟ್ಟು 86 ಲಕ್ಷದ 46 ಸಾವಿರ ಪ್ರತಿಗಳು ಇಲ್ಲಿಯತನಕ ಮುದ್ರಣವಾಗಿವೆ. ಎಲ್ಲಾ ಸಾಧಕರು, ಧರ್ಮಪ್ರೇಮಿಗಳು ಮತ್ತು ಹಿತಚಿಂತಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಈ ಅಭಿಯಾನದ  ಪ್ರಸಾರವನ್ನು ವ್ಯಾಪಕವಾಗಿ ಮಾಡಲಿದ್ದಾರೆ. ಈ ಜ್ಞಾನಶಕ್ತಿಯ ಪ್ರಸಾರ ಸೇವೆ ಎಂದರೆ ಕಾಲಾನುಸಾರ ದೊಡ್ಡ ಸಮಷ್ಟಿ ಸಾಧನೆಯಾಗಿದೆ. ಹಾಗಾಗಿ ಎಲ್ಲಾ ವಾಚಕ ಬಂಧುಗಳೂ ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಧರ್ಮಕರ್ತವ್ಯ ನಿಭಾಯಿಸೋಣ, ಈ ಅಭಿಯಾನದಲ್ಲಿ ಪಾಲ್ಗೊಂಡು ಗ್ರಂಥಗಳ ಬೇಡಿಕೆ ನೀಡಲು 9379771771 ಈ ಕ್ರಮಾಂಕಕ್ಕೆ ಸಂಪರ್ಕಿಸಿ ಅಥವಾ www.SanatanShop.com ಜಾಲತಾಣಕ್ಕೆ ಭೇಟಿ ನೀಡಿ !

?ಶ್ರೀ. ವಿನೋದ ಕಾಮತ್

Leave A Reply

Your email address will not be published.