ಆಲಂಕಾರು ಇಂಗು ಗುಂಡಿಗೆ ಬಿದ್ದು ಮೃತಪಟ್ಟ ಗಬ್ಬದ ದನ

Share the Article

ಕಡಬ: ಆಲಂಕಾರು ಗ್ರಾಮ ಪಂಚಾಯಿತಿ ಸಂತೆ ಮಾರ್ಕೆಟ್ ಬಳಿ ಸಾರ್ವಜನಿಕ ಕುಡಿಯುವ ನೀರಿನ ಕೊಳವೆ ಬಾವಿಗೆ ನಿರ್ಮಿಸಿದ 12 ಅಡಿ ಆಳದ ಇಂಗು ಗುಂಡಿಗೆ ದನವೊಂದು ಬಿದ್ದು ಸಾವನ್ನಪ್ಪಿದೆ.

ಆಲಂಕಾರು ಗ್ರಾಮದ ಬುಡೇರಿಯಾ ನಿವಾಸಿಯ 2ತಿಂಗಳ ಗಬ್ಬದ ದನವೊಂದು ಮೇಯಲು ಬಿಟ್ಟ ದಿನ ಪೇಟೆಗೆ ಬಂದಿದ್ದು ಇಂಗು ಗುಂಡಿಗೆ ಅಳವಡಿಸಿದ್ದ ರಿಂಗ್‍ನ ಮೇಲೆ ನಡೆದಾಡಿನ ಸಂಧರ್ಭ ರಿಂಗ್‍ನ ಮುಚ್ಚಳ ಕುಸಿದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ರಸ್ತೆ ಬದಿಯಲ್ಲಿದ್ದರೂ ಘಟನೆ ಯಾರ ಗಮನಕ್ಕೆ ಬಂದಿರಲಿಲ್ಲ. ಬುಧವಾರ ಕೆಟ್ಟ ವಾಸನೆ ಬರುತ್ತಿರುವುದನ್ನು ಸ್ಥಳೀಯರು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಗ್ರಾಮ ಪಂಚಾಯತಿ ಪಿಡಿಒ ಜಗನ್ನಾಥ ಶೆಟ್ಟಿ ಸ್ಥಳಾಕ್ಕಾಗಮಿಸಿ ಪರಿಶೀಲಿಸಿ ಕೊಳೆತು ಹೋದ ದನದ ಕಳೆಬರವನ್ನು ಹೊರ ತೆಗೆಯಲು ಅಸಾಧ್ಯ ಎಂದು ದನದ ಮಾಲಿಕರಿಗೆ ಮನವರಿಕೆ ಮಾಡಿದರು. ನಂತರ ಲಾರಿಯಲ್ಲಿ ಮಣ್ಣು ತರಿಸಿ ಗುಂಡಿಯನ್ನು ಮುಚ್ಚಿದರು.

Leave A Reply