Home News ಉಪ್ಪಿನಂಗಡಿ: ಬಾಲಕನ ಅಪಹರಣಕ್ಕೆ ಯತ್ನ | ಅಪಹರಣಕಾರರ ಕೈಗೆ ಕಚ್ಚಿ ತಪ್ಪಿಸಿ ಕೊಂಡ ಬಾಲಕ

ಉಪ್ಪಿನಂಗಡಿ: ಬಾಲಕನ ಅಪಹರಣಕ್ಕೆ ಯತ್ನ | ಅಪಹರಣಕಾರರ ಕೈಗೆ ಕಚ್ಚಿ ತಪ್ಪಿಸಿ ಕೊಂಡ ಬಾಲಕ

Hindu neighbor gifts plot of land

Hindu neighbour gifts land to Muslim journalist

ಉಪ್ಪಿನಂಗಡಿ: ಆನ್ ಲೈನ್ ಪರೀಕ್ಷಾ ಪೇಪರ್ ಗಳನ್ನು ಮದರಸಾಕ್ಕೆ ನೀಡಿ ಹಿಂತಿರುಗುತ್ತಿದ್ದ ಬಾಲಕನೊಬ್ಬನನ್ನು ಅಪಹರಿಸಲು ಮಾರುತಿ ಓಮ್ಮಿ ಕಾರಿನಲ್ಲಿ ಬಂದ ಅಪರಿಚಿತರು ವಿಫಲ ಯತ್ನ ನಡೆಸಿದ ಬಗ್ಗೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉಪ್ಪಿನಂಗಡಿಯ ಲಕ್ಷ್ಮೀ ನಗರ ನಿವಾಸಿ ಅಬ್ದುಲ್ಲಾರ ಮಗನಾದ ಹನ್ನೆರಡರ ಹರೆಯದ ಬಾಲಕ ಮದರಸದಿಂದ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ಕಾರಿನ ಬಾಗಿಲು ತೆಗೆದು ವ್ಯಕ್ತಿಯೋರ್ವ ಬಾಲಕನ ಕೈ ಹಿಡಿದು ಎಳೆದನೆಂದೂ, ತಾನು ಆತನ ಕೈಯನ್ನು ಕಚ್ಚಿ ಆತನ ಹಿಡಿತದಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದೇನೆ ಎಂದೂ ಬಾಲಕ ಮನೆ ಮಂದಿಗೆ ತಿಳಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಾಗು ನಾಗರಿಕರು ತಕ್ಷಣವೇ ಪತ್ತೆ ಕಾರ್ಯಾಚರಣೆ ನಡೆಸಿದರಾದರೂ ಅಪಹರಣಕ್ಕೆ ಯತ್ನಿಸಲಾದ ಕಾರು ಎಲ್ಲಿಯೂ ಪತ್ತೆಯಾಗಲಿಲ್ಲ. ಸಮೀಪದ ಸಿಸಿ ಕ್ಯಾಮಾರಾ ಗಳನ್ನು ಪರಿಶೀಲಿಸಿದಾಗ ಬಾಲಕ ಹೇಳಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಮಾರುತಿ ಓಮ್ಮಿ ಕಾರೊಂದು ರಸ್ತೆ ಬದಿ ನಿಂತಿರುವುದು ದೃಢಪಟ್ಟಿದೆ.