ರಾಜ್ಯ ಹೈಕೋರ್ಟ್‌ನಲ್ಲಿ 142 ದ್ವಿ ದರ್ಜೆ ಸಹಾಯಕರ ಹುದ್ದೆಗೆ ನೇರ ನೇಮಕಾತಿ ಅರ್ಜಿ ಆಹ್ವಾನ

ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ 142 ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ಹುದ್ದೆಗಳು ಬೆಂಗಳೂರು ಪ್ರಧಾನ ಪೀಠದಲ್ಲಿ ಖಾಲಿಯಿದ್ದು, ಆನ್‌ಲೈನ್‌ನಲ್ಲಿ ಅರ್ಜಿಆಹ್ವಾನಿಸಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18

ವರ್ಷವಾಗಿದ್ದು, ಗರಿಷ್ಠ ವಯೋಮಿತಿ ಎಸ್‌ಸಿ-ಎಸ್‌ಟಿ ಅಭ್ಯಥಿರ್ಗಳಿಗೆ 40 ವರ್ಷ, ಹಿಂದುಳಿದ ವರ್ಗ- 38 ಹಾಗೂ ಸಾಮಾನ್ಯ ವರ್ಗದವರಿಗೆ 35 ವರ್ಷವಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ, ವಾಣಿಜ್ಯ, ವಿಜ್ಞಾನ, ವ್ಯವಹಾರ ನಿರ್ವಹಣೆ ಅಥವಾ ಕಂಪ್ಯೂಟರ್ ಅಪ್ಲಿಕೇಷನ್‌ನಲ್ಲಿ ಪದವಿ ಹೊಂದಿರಬೇಕು.

ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯಥಿರ್ಗಳು ಶೇ.55 ಹಾಗೂ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ಅಭ್ಯಥಿರ್ಗಳು ಶೇ.50 ಅಂಕ ಗಳಿಸಿರಬೇಕು. ಸಾಮಾನ್ಯ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ ಹೊಂದಿರಬೇಕು.

ಕೊನೆಯ ದಿನ: ಸೆಪ್ಟೆಂಬರ್ 24

https://karnatakajudiciary.kar.nic.in/recruitment.php

Leave A Reply

Your email address will not be published.