ಪುತ್ತೂರು : ದರ್ಬೆಯಲ್ಲಿ ಇನ್ನೋವಾ ಚಾಲಕನ ಕೊಲೆಯತ್ನ, ಆರು ಮಂದಿಯ ಬಂಧನ | ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಪರ ಸಾಕ್ಷಿ ನುಡಿಯುವಂತೆ ಒತ್ತಡ

Share the Article

ಪುತ್ತೂರು:ಡೀಸೆಲ್ ತುಂಬಿಸಿ, ಗಾಳಿ ಹಾಕಿಸಲೆಂದು ನಿಂತುಕೊಂಡಿದ್ದ ವೇಳೆ ಏಕಾಏಕಿ ಬಂದ ತಂಡವೊಂದು ಇನ್ನೋವಾ ಕಾರು ಚಾಲಕನಿಗೆ ತೀವ್ರ ತರದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಿಶೋರ್ ಗೋಳ್ತಮಜಲು, ರಾಕೇಶ್‌ ಪಂಚೋಡಿ,ರೆಹಮಂತ್‌‌, ಇಬ್ರಾಹಿಂ ಕಬಕ,ದೇವಿಪ್ರಸಾದ್,ಅಶ್ರಫ್‌‌ ಪೆರಾಜೆ ಎಂದು ಗುರುತಿಸಲಾಗಿದೆ.

ಈ ಆರೋಪಿಗಳು ತಾರಿಗುಡ್ಡೆ ನಿವಾಸಿ ರಾಧಾಕೃಷ್ಣ ಎಂಬವರನ್ನು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ರಾಧಾಕೃಷ್ಣ ಅವರು ಇನ್ನೋವಾ ಕಾರಿನಲ್ಲಿ ಕೆಲಸದ ನಿಮಿತ್ತ ಪುತ್ತೂರು ಪೇಟೆಗೆ ಬಂದವರು ಕೆಲಸ ಮುಗಿಸಿ ಅಲ್ಲಿಂದ ವಾಹನಕ್ಕೆ ಡೀಸೆಲ್‌‌‌ ಹಾಕಿಸಲು ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಜಂಕ್ಷನ್‌‌ ಬಳಿ ಇರುವ ಜಗನ್ನಾಥ ರೈ ಪಟ್ರೋಲ್ ಬಂಕ್‌‌‌ ಗೆ ರಾತ್ರಿ 08:30 ಗಂಟೆಗೆ ತಲುಪಿ ತನ್ನ ವಾಹನಕ್ಕೆ ಡೀಸೆಲ್ ಹಾಕಿಸಿ ಬಳಿಕ ಅಲ್ಲಿ ಇರುವ ಏರ್‌ ಪಂಪ್‌‌ಗೆ ಹೋಗಿ ವಾಹನದಿಂದ ಇಳಿದು ಟಯರ್‌ಗಳಿಗೆ ಗಾಳಿ ತುಂಬಿಸುವ ಸಮಯ 6 ಜನ ಆರೋಪಿಗಳಾದ ಕಿಶೊರ್‌‌‌‌‌, ರಾಕೇಶ್‌‌ ಪಂಚೋಡಿ‌, ರೆಹಮಂತ್, ಇಬ್ರಾಹಿಂ, ದೇವಿಪ್ರಸಾದ್‌ ಮತ್ತು ಅಶ್ರಫ್‌‌ ಎಂಬವರು ಒಂದು ಕಾರು ಮತ್ತು ಎರಡು ಬೈಕ್‌‌ನಲ್ಲಿ ಬಂದು ರಾಧಾಕೃಷ್ಣ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಸ್ಥಳದಲ್ಲಿ ಇದ್ದ ಮಾರಕಾಯುಧವಾದ ಫೈಬರ್‌‌‌‌‌ ಪಾರ್ಕಿಂಗ್‌ ಕೋನ್‌‌‌, ನೋಪಾರ್ಕಿಂಗ್‌‌‌ ಬೋರ್ಡಿನ ಕಬ್ಬಿಣದ ಸ್ಟಾಂಡ್‌‌‌‌, ಹೆಲ್ಮೆಟ್‌‌‌ ಹಾಗೂ ಕಲ್ಲಿನಿಂದ ಬೆನ್ನಿಗೆ ಎಡಗೈ ಮಣಿಗಂಟಿಗೆ, ಹಣೆಯ ಎಡಬದಿಗೆ ಬಲವಾಗಿ ಹಲ್ಲೆ ಮಾಡಿದ್ದಾರೆ.

ಅಲ್ಲದೆ ಇನ್ನೋವಾ ಕಾರನ್ನು ಜಖಂಗೊಳಿಸಿ ನಷ್ಟ ಉಂಟುಮಾಡಿರುತ್ತಾರೆ. ಹಲ್ಲೆಯ ಪರಿಣಾಮ ಗಾಯಗೊಂಡ ಅವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ.

ಸುಮಾರು 2 ವರ್ಷಗಳ ಹಿಂದೆ ನಡೆದ ಕಾರ್ತಿಕ್‌‌ ಕೊಲೆ ಕೇಸಿನ ಆರೋಪಿ ಪ್ರೀತೇಶ್‌‌ ಎಂಬವನು ಈಗಲೂ ಜೈಲಿನಲ್ಲಿದ್ದು ಈ ಬಗ್ಗೆ ಪ್ರಮುಖ ಸಾಕ್ಷಿದಾರರಾದ ಆರೋಪಿ ಕಿಶೋರನ ಸಂಬಂಧಿಗಳಾದ ಕೇಶವ ಸುವರ್ಣ ಮತ್ತು ಪ್ರಮೋದರವರು ಪ್ರೀತೇಶನ ಪರ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಂತೆ ಒಪ್ಪಿಸಲು ರಾಧಾಕೃಷ್ಣ ಎಂಬವರು ತನ್ನ ಸ್ನೇಹಿತ ಪ್ರಜ್ವಲ್ ಜೊತೆ ಸೇರಿ 3 ದಿಗಳ ಹಿಂದೆ ಬೀರಮಲೆ ಗುಡ್ಡೆಯಲ್ಲಿ ಆರೋಪಿ ಕೀಶೊರನ ಜತೆ ಮಾತುಕತೆಯಾಡಿದ ಸಂದರ್ಭ ಅವರೊಳಗೆ ಮಾತಿಗೆ ಮಾತಾಗಿ ಗಲಾಟೆಯಾಗಿದ್ದು,ಇದೇ ಸಿಟ್ಟಿನಿಂದ ಆರೋಪಿ ಕಿಶೋರನು ತನ್ನ ಸ್ನೇಹತರೊಂದಿಗೆ ಸೇರಿಕೊಂಡು ಈ ಕೃತ್ಯ ನಡೆಸಲಾಗಿದೆ.

Leave A Reply