ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ | ಇದಕ್ಕೆ ಕಾರಣನಾದವನೂ ಅಪ್ರಾಪ್ತನೇ !

12ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ರಾಜಸ್ಥಾನದ ಶೇರಗಢದಲ್ಲಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಈ ಕುರಿತು ರಾಜಸ್ಥಾನದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತ ಬೆನಿವಾಲ್ ಪ್ರತಿಕ್ರಿಯೆ ನೀಡಿದ್ದು, ಪ್ರಾಥಮಿಕ ತನಿಖೆಯಿಂದ ಈ ಘಟನೆಗೆ ಅಪ್ರಾಪ್ತ ಬಾಲಕನೇ ಕಾರಣ ಎಂದು ಹೇಳಿದ್ದಾರೆ.

ಆಸ್ಪತ್ರೆಯ ಅಧೀಕ್ಷಕಿ ಡಾ.ರಂಜನಾ ದೇಸಾಯಿಗೆ ಮಗುವಿಗೆ ಚಿಕಿತ್ಸೆ ನೀಡುವಂತೆ ಹೇಳಿದ್ದೇವೆ. ಹಾಗೆಯೇ ಈ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

Leave A Reply

Your email address will not be published.