ಕನ್ಯಾಡಿ | ನೂತನ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ನಾಳಿನ ಮೂವತ್ತನೇ ದಿನದ ಚಾತುರ್ಮಾಸ್ಯದಲ್ಲಿ ಭಾಗಿ

Share the Article

ನೂತನ ಸಚಿವರಾದ ಬಳಿಕ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ನಾಳೆ ಕನ್ಯಾಡಿಯ ಚಾತುರ್ಮಾಸ್ಯದಲ್ಲಿ ಭಾಗಿಯಾಗಲಿದ್ದಾರೆ. ಸಚಿವರಾದ ಬಳಿಕ ಮೊದಲ ಬಾರಿಗೆ ಸುನಿಲ್ ಕುಮಾರ್ ಅವರು ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯವು ನಾಳೆ 30 ನೇ ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಸಚಿವರು ಭೇಟಿ ನೀಡುತ್ತಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲಿದೆ.

Leave A Reply