ಆಸ್ತಿ ಆಸೆಗಾಗಿ ಮಗನನ್ನೇ ಕೊಲೆ ಮಾಡಿದ್ದ ತಂದೆಗೆ ಜೈಲಿನಲ್ಲಿ ಕಾದುಕುಳಿತಿದ್ದ ಜವರಾಯ

Share the Article

ಆಸ್ತಿಗಾಗಿ ಮಗನನ್ನು ಕೊಲೆ ಮಾಡಿದ್ದ ತಂದೆ ಜೈಲಿನಲ್ಲಿ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಹನುಮಂತ (70) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈತ ಜುಲೈ 28 ರಂದು ತುರ್ವೀಹಾಳದ ಮಲ್ಲದಗುಡ್ಡ ಗ್ರಾಮದಲ್ಲಿ ತನ್ನ ಸ್ವಂತ ಮಗನನ್ನೇ ಕಾಲುವೆಗೆ ನೂಕಿ ಕೊಲೆ ಮಾಡಿದ್ದ. ಈ ಕೃತ್ಯಕ್ಕೆ 18 ವರ್ಷ ಮಗ ಭೀಮಣ್ಣ ಕೊಲೆಯಾಗಿದ್ದ. ಹಾಗಾಗಿ ಈತನಿಗೆ ಜೈಲು ಶಿಕ್ಷೆಯಾಗಿತ್ತು.

ಜುಲೈ 29ರಂದು ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದರು. ಲಿಂಗಸಗೂರು ಜೈಲಿನಲ್ಲಿ ಬಂಧಿಯಾಗಿ ಇಟ್ಟಿದ್ದರು. ಆದರೆ ಜೈಲಿನಲ್ಲಿದ್ದ ಈತ ಏಕಾಏಕಿ ಮೃತಪಟ್ಟಿದ್ದಾನೆ. ಈ ಸಾವು ಹೇಗಾಯಿತು ಎಂದು ಇದುವರೆಗೆ ತಿಳಿದಿಲ್ಲ.

ಸದ್ಯ ರಾಯಚೂರಿನ ರಿಮ್ಸ್ ಶವಾಗಾರದಲ್ಲಿ ಆರೋಪಿ ಮೃತ ದೇಹ ಇಡಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆಯೇ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಂತರ ಸಾವಿನ ಕಾರಣ ತಿಳಿಯಲಿದೆ.

Leave A Reply