ವೆಬ್‌ಸೈಟ್ ಜಾಹಿರಾತು ನೋಡಿ ಮದುವೆಯಾಗಿ ಮೋಸ ಹೋದ ಮಂಗಳೂರಿನ ಮಹಿಳೆ | ಕುವೈಟ್ ನಲ್ಲಿ ಕದ್ದು ಮುಚ್ಚಿ ಸಂಸಾರ ಮಾಡುತ್ತಿದ್ದ ಮೂವರು ಹೆಂಡಿರ ಗಂಡನ ಮುಖವಾಡ ಬಯಲು

ಮಂಗಳೂರು ಮೂಲದ ಮಹಿಳೆಯನ್ನು ವಿವಾಹಿತನೋರ್ವ ಮೋಸದಿಂದ ಮದುವೆಯಾಗಿ ಕುವೈಟ್‌ನಲ್ಲಿ 6 ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

 

ಸಂತ್ರಸ್ತ ಮಹಿಳೆ ಈಗ ನ್ಯಾಯಕ್ಕಾಗಿ ತಾಯ್ನಾಡಿನ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಎರಡು ವಿವಾಹವಾಗಿ ವಿಚ್ಛೇದನ ಪಡೆದಿದ್ದೇನೆ ಎಂದು ಹೇಳಿ ಮೂರನೇ ವಿವಾಹವಾಗಿ, ಇಬ್ಬರು ಪತ್ನಿಯರ ಜತೆ ಕುವೈಟ್‌ನಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಆತ ಮೊದಲ ಪತ್ನಿ ಮತ್ತು ಪುತ್ರನ ಜತೆ ಕುವೈಟ್‌ಗೆ ಮತ್ತೆ ತೆರಳಲು ಸಿದ್ಧತೆ ನಡೆಸಿರುವಂತೆಯೇ ಮಂಗಳೂರು ಮೂಲದ ಸಂತ್ರಸ್ತೆ ಪೊಲೀಸ್‌ಇಲಾಖೆಯ ಮೊರೆ ಹೋಗಲು ನಿರ್ಧರಿಸಿದ್ದಾರೆ. ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕಿದ್ದನ್ನು ನಂಬಿ ಮಂಗಳೂರಿನ ಯುವತಿ ಮದುವೆಯಾಗಿದ್ದಳು.

Leave A Reply

Your email address will not be published.