ಬಲವಂತವಾಗಿ ಪತ್ನಿಯೊಂದಿಗೆ ನಡೆಸಿದ ಸಂಭೋಗ, ಸೊಂಟದ ಕೆಳಗೆ ಬಲ ಕಳೆದುಕೊಂಡ ಪತ್ನಿಯಿಂದ ಪತಿ ವಿರುದ್ಧ ದೂರು | ಕೋರ್ಟ್ ಮೆಟ್ಟಿಲೇರಿದ ಪ್ರಕರಣ ಮುಂದೇನಾಯಿತು?!!
ತನ್ನ ಪತಿ ತನ್ನೊಂದಿಗೆ ಬಲವಂತದಿಂದ ಸಂಭೋಗ ನಡೆಸಿದ್ದು, ಇದರಿಂದ ನನ್ನ ಸೊಂಟದ ಕೆಳಭಾಗ ಸಂಪೂರ್ಣ ಪಾರ್ಶ್ಶ್ವ ಪೀಡಿತವಾಗಿದ್ದು, ಬಲವಂತದ ಸೆಕ್ಸ್ ನಡೆಸಿದ ಪತಿಯನ್ನು ಬಂಧಿಸಿ, ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ ಮಹಿಳೆಯ ವಾದವು ಕೋರ್ಟ್ ನಲ್ಲಿ ವಜಾ ಆಗಿದ್ದು,ಇತ್ತ ಬಂಧನದ ಭೀತಿಯಲ್ಲಿದ್ದ ಗಂಡ ನಿರ್ದೋಷಿ ಎಂದು ಪರಿಗಣಿಸಲಾಗಿದ್ದು , ಆ ಮೂಲಕ ಗಂಡ ನಡೆಸುವ ಸಂಭೋಗ ಅಪರಾಧವಲ್ಲ ಎಂದು ಸಾಬೀತಾಗಿದೆ.
ಘಟನೆ ವಿವರ :2020ರ ನವೆಂಬರ್ ತಿಂಗಳಲ್ಲಿ ಮುಂಬೈ ನ ಮಹಿಳೆಯೊಬ್ಬರು ಮದುವೆಯಾಗಿದ್ದು, ಮದುವೆಯ ಬಳಿಕ ಗಂಡನ ಮನೆಯವರು ಕಿರುಕುಳ ನೀಡಿದ್ದು, ಹಣಕ್ಕೆ ಪೀಡಿಸಿದ್ದು ಇದಕ್ಕೆ ಒಪ್ಪದಿದ್ದಾಗ ತನ್ನ ಗಂಡ ಇಚ್ಛೆಗೆ ವಿರುದ್ಧವಾಗಿ ಸಂಭೋಗ ನಡೆಸಿದ್ದಾರೆ ಎಂದು ಪತಿಯ ವಿರುದ್ಧವೇ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ತನ್ನ ಮೇಲೆ ಪದೇ ಪದೇ ಬಲವಂತದಿಂದ ಸಂಭೋಗ ನಡೆಸುತ್ತಿದ್ದೂ, ಅದರಿಂದ ನನ್ನ ಸೊಂಟದ ಕೆಳಭಾಗ ಪಾರ್ಶ್ಶ್ವ ಪೀಡಿತವಾಗಿದ್ದು, ಗಂಡನ ಹಿಂಸೆ ವಿಪರೀತವಾಗಿದೆ ಎಂದು ಇಲ್ಲಿ ಆರೋಪಿಸಲಾಗಿತ್ತು.ಇದರಿಂದ ಭಯಭೀತನಾದ ಪತಿ, ಬಂಧನದ ಭೀತಿಯಿಂದ ನೀರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆಹೋಗಿದ್ದ.
ಆದರೆ ಈ ಪ್ರಕರಣವನ್ನು ಗಮನಿಸಿದ ನ್ಯಾಯಾಧೀಶೆ ಸಂಜಾಶ್ರೀ ಜೆ ಘರಾತ್ ‘ಸ್ವಂತ ಪತಿ ಇಚ್ಛೆಗೆ ವಿರುದ್ಧವಾಗಿ ಸಂಭೋಗ ನಡೆಸಿದ್ದಾರೆ ಎನ್ನುವ ಆರೋಪ ಸರಿಯಲ್ಲ, ಇದೊಂದು ಕಾನೂನು ಬಾಹಿರ ಕೆಲಸವಲ್ಲ, ಸಂಗಾತಿಯೊಂದಿಗೆ ಮಿಲನವಾಗುವುದು ನಿಯಮ ಆದುದರಿಂದ ಇದು ಅಪರಾಧವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪತಿ ಪತ್ನಿಯೊಂದಿಗೆ ನಡೆಯುವ ಆ ಕ್ಷಣವನ್ನು ಬಲವಂತದ ಸೇರುವಿಕೆ ಎನ್ನುವುದು ತಪ್ಪು. ಒಬ್ಬರಿಗೊಬ್ಬರು ಮೈಮರೆತಾಗ ಕೆಲವೊಂದು ಬಾರಿ ಸುಸ್ತಾಗುವುದು, ಅರೋಗ್ಯ ಏರುಪೇರಾಗುವುದು ಸಾಮಾನ್ಯ ಎಂದು ಹೇಳಿದ ನ್ಯಾಯಾಧೀಶೆ ಪತಿಗೆ ಜಾಮೀನು ನೀಡಿದ್ದು, ಆ ಮೂಲಕ ಪತಿ ನಡೆಸುವ ಸಂಭೋಗ ಕಾನೂನು ಬಾಹಿರ ಕೃತ್ಯವಲ್ಲ ಎಂದಿದ್ದಾರೆ.