Home News ಮನಸ್ತಾಪದಿಂದ ದೂರವಾದ ಜೋಡಿ,ಯುವಕನಿಂದ ಯುವತಿಯ ಸಂಪರ್ಕಕ್ಕೆ ಪ್ರಯತ್ನ | ಯುವತಿಯಿಂದ ಯುವಕನ ಮೇಲೆ ಮಾನಭಂಗ ಯತ್ನ...

ಮನಸ್ತಾಪದಿಂದ ದೂರವಾದ ಜೋಡಿ,ಯುವಕನಿಂದ ಯುವತಿಯ ಸಂಪರ್ಕಕ್ಕೆ ಪ್ರಯತ್ನ | ಯುವತಿಯಿಂದ ಯುವಕನ ಮೇಲೆ ಮಾನಭಂಗ ಯತ್ನ ದೂರು

Hindu neighbor gifts plot of land

Hindu neighbour gifts land to Muslim journalist

ಸುಳ್ಯ: ಮಾನಭಂಗ ಆರೋಪದಡಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಮಡಪ್ಪಾಡಿ ಸೇವಾಜೆ ಕರಂಗಿಲಡ್ಕ ಕಿರಣ್ ಬಂಧನಕ್ಕೊಳಗಾದ ಯುವಕ ಎಂದು ತಿಳಿದುಬಂದಿದೆ.

ಚೆಂಬು ಗ್ರಾಮದ ಯುವತಿ ಹಾಗೂ ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಆ ನಂತರ ಯಾವುದೋ ಕಾರಣಕ್ಕೆ ಮನಸ್ತಾಪವಾಗಿ ಅವರಿಬ್ಬರು ದೂರವಾಗಿದ್ದರು ಎನ್ನಲಾಗಿದೆ. ಆದರೆ ಯುವಕ ಮತ್ತೆ ಆಕೆಯನ್ನು ಸಂಪರ್ಕಿಸಿ ಮಾತನಾಡಲು ಯತ್ನಿಸಿದ್ದಾನೆ.

ಯುವತಿ ಆತನಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ಸುಮ್ಮನಾಗಲಿಲ್ಲ. ಇದರಿಂದ ಬೇಸತ್ತು ಯುವತಿ ಈತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಗೆ ಮಾನಭಂಗ ಯತ್ನದ ದೂರು ನೀಡಿದ್ದಾಳೆ.

ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.