Home News ಅನುಮತಿ ಪಡೆದು ಮಸೀದಿಗಳಲ್ಲಿ ಮೈಕ್ ಬಳಸುವಂತೆ ಮಸೀದಿಗಳಿಗೆ ಹೈ ಕೋರ್ಟ್ ತಾಕೀತು

ಅನುಮತಿ ಪಡೆದು ಮಸೀದಿಗಳಲ್ಲಿ ಮೈಕ್ ಬಳಸುವಂತೆ ಮಸೀದಿಗಳಿಗೆ ಹೈ ಕೋರ್ಟ್ ತಾಕೀತು

Hindu neighbor gifts plot of land

Hindu neighbour gifts land to Muslim journalist

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅನ್ವಯ ಪರವಾನಿಗೆ ಪಡೆಯದ ಹೊರತು ಧ್ವನಿವರ್ಧಕಗಳನ್ನು ಉಪಯೋಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಬೆಂಗಳೂರಿನ ಥಣಿಸಂದ್ರ ಹಾಗು ಸುತ್ತಲಿನ 16 ಮಸೀದಿಗಳಿಗೆ ಹೈ ಕೋರ್ಟ್ ಸೂಚಿಸಿದೆ.

ಮಸೀದಿಗಳು ಅನಧಿಕೃತವಾಗಿ ಧ್ವನಿವರ್ಧಕಗಳನ್ನು ಬಳಸುತ್ತಿರುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಪಿಸಿ ರಾಕೇಶ್ ಮತ್ತು ಅಯ್ಯಪ್ಪ ದಾಸ್, ಬಾಲ ಗೋಪಾಲ್ ಸೇರಿದಂತೆ ಥಣಿಸಂದ್ರ ಮುಖ್ಯರಸ್ತೆಯ ಐಕಾನ್ ಅಪಾರ್ಟ್‌ಮೆಂಟ್‌ನ 32 ಮಂದಿ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು 2000ರ ಪ್ರಕಾರ ಸಂಬಂಧಪಟ್ಟ ಪ್ರಾಧಿಕಾರದಿಂದ ಲಿಖಿತ ಪರವಾನಿಗೆ ಪಡೆಯದ ಹೊರತು ಸಾರ್ವಜನಿಕರನ್ನು ಉದ್ದೇಶಿಸಿ ವ್ಯವಸ್ಥೆಗೆ ಧ್ವನಿವರ್ಧಕಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಪ್ರತಿವಾದಿಗಳಾಗಿರುವ ಥಣಿಸಂದ್ರ ಹಾಗು ಸುತ್ತಲಿನ 16 ಮಸೀದಿಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿತು.

ಮಸೀದಿಗಳಲ್ಲಿ ದ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ವಕ್ಸ್ ಮಂಡಳಿ ಸುತ್ತೋಲೆ ಹೊರಡಿಸಿರುವ ವಿಚಾರವನ್ನು ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಸಮಾಧಾನಗೊಂಡ ನ್ಯಾಯಪೀಠ, ಧ್ವನಿವರ್ಧಕಗಳ ಬಳಕೆ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ಅಡಿ ನಿರ್ವಹಿಸಲ್ಪಡಬೇಕಾದ ವಿಚಾರ. ಇದರಲ್ಲಿ ವಕ್ಸ್ ಮಂಡಳಿಗೆ ಯಾವ ಕೆಲಸವೂ ಇಲ್ಲ. ಮಂಡಳಿ ಹೊರಡಿಸಿದ ಸುತ್ತೋಲೆಯನ್ನು ಪರಿಗಣಿಸಲಾಗುವುದಿಲ್ಲ ಎಂದಿತು.