Home Breaking Entertainment News Kannada ಎರಡನೇ ಬಾರಿ ಗರ್ಭಿಣಿಯಾದಾಗ ಆದ ಅನುಭವವನ್ನು, ತಮ್ಮ ಲೈಂಗಿಕ ಆಸಕ್ತಿಯನ್ನು ಪುಸ್ತಕ ಬರಹದ ಮೂಲಕ ಹಂಚಿಕೊಂಡ...

ಎರಡನೇ ಬಾರಿ ಗರ್ಭಿಣಿಯಾದಾಗ ಆದ ಅನುಭವವನ್ನು, ತಮ್ಮ ಲೈಂಗಿಕ ಆಸಕ್ತಿಯನ್ನು ಪುಸ್ತಕ ಬರಹದ ಮೂಲಕ ಹಂಚಿಕೊಂಡ ಕರೀನಾ ಕಪೂರ್| ಆ ಪುಸ್ತಕವಾದರೂ ಯಾವುದು ?!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ಮೋಹಕ ತಾರೆ ಕರೀನಾ ಕಪೂರ್ ಎರಡನೇ ಬಾರಿ ಗರ್ಭಿಣಿಯಾದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ. ಗರ್ಭಿಣಿ ಫೋಟೋಶೂಟ್​, ರೆಡಿಯೋ ಕಾರ್ಯಕ್ರಮ, ತಮ್ಮ ಪ್ರೆಗ್ನೆನ್ಸಿ ಬುಕ್​, ಎರಡನೇ ಮಗನಿಗೆ ನಾಮಕರಣ ಮಾಡಿದ ಕಾರ್ಯಕ್ರಮ ಹೀಗೆ ಒಂದಲ್ಲಾ ಒಂದು ವಿಷಯಗಳಿಂದಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಅಭಿಮಾನಿಗಳೊಂದಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕರೀನಾ ತಮ್ಮ ಎರಡನೇ ಸಲದ ಗರ್ಭಿಣಿಯ ಅನುಭವವನ್ನು ಕರೀನಾ ಕಪೂರ್ ಖಾನ್​ ಪ್ರೆಗ್ನೆನ್ಸಿ ಬೈಬಲ್​ ಎಂಬ ಪುಸ್ತಕದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೇ ತಿಂಗಳ 9ರಂದು ಈ ಪುಸ್ತಕವನ್ನು ಬಿಡುಗಡೆ ಕೂಡಾ ಮಾಡಲಾಗಿತ್ತು.ಕರೀನಾ ತಮ್ಮ ಎರಡನೇ ಮಗನ ಫೋಟೋವನ್ನು ಇದೇ ಪುಸ್ತಕದ ಮೂಲಕ ರಿವೀಲ್ ಮಾಡಿದ್ದರು.ಅದಲ್ಲದೇ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಹಲವು ರೀತಿಯಲ್ಲಿ ಕರೀನಾ ಕಪೂರ್ ಬರೆದುಕೊಂಡಿದ್ದಾರೆ.

ತಮ್ಮ ಎರಡನೇ ಪ್ರಸವದಲ್ಲಿ ಆದ ಅನುಭವ, ನೋವು ಮುಂತಾದವುಗಳನ್ನು ಇನ್​ಸ್ಟಾಗ್ರಾಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಕರೀನಾ ಮುಕ್ತವಾಗಿ ಮಾತನಾಡಿದ್ದಾರೆ. “ಮಗುವಿನ ಪ್ರಸವದ ಸಮಯದಲ್ಲಿ ಈ ಸಲ ತುಂಬಾ ಕಷ್ಟವಾಗಿತ್ತು. ತೈಮೂರ್ ಹುಟ್ಟಿದಾಗ ಅಷ್ಟು ಕಷ್ಟವಾಗಿರಲಿಲ್ಲ. ಆಗ ಸಖತ್ ಎಂಜಾಯ್ ಮಾಡಿದ್ದೆ. ಆ ಧೈರ್ಯದಲ್ಲೇ ಎರಡನೇ ಮಗು ಮಾಡಿಕೊಳ್ಳಲು ಸಿದ್ಧಳಾದೆ. ಆದರೆ ಈ ಸಲ ತುಂಬಾ ಕಷ್ಟಗಳನ್ನು ಎದುರಿಸಿದೆ. ತನ್ನಿಂದ ಇದು ಈ ಸಲ ಸಾಧ್ಯವಾಗುವುದಿಲ್ಲ ಎಂದೆನಿಸಿತ್ತು. ಕೆಲವೊಮ್ಮೆ ಖುಷಿಯಾಗಿದ್ದರೆ, ಮತ್ತೆ ಕೆಲವು ಸಲ ತುಂಬಾ ಸೆಕ್ಸಿಯಾಗಿದ್ದೀನಿ ಎಂದು ಅನಿಸುತ್ತಿತ್ತು. ಮತ್ತೆ ಕೆಲವು ಸಲ ನನ್ನ ಮೇಲೆ 100 ಕೆಜಿ ತೂ ಇಟ್ಟಂತೆ ಫೀಲ್​ ಆಗುತ್ತಿದ್ದೆ “ಎಂದೆಲ್ಲಾ ಕರೀನಾ ಆ ಕಾರ್ಯಕ್ರಮದ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ.

ಇದೇ ವೇಳೆ ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ತಮ್ಮ ಲೈಂಗಿಕ ಜೀವನ ಹೇಗಿತ್ತು ಎಂಬುವುದನ್ನು ಕೂಡಾ ಹೇಳಿಕೊಂಡಿದ್ದು,ಇಂತಹ ಸಮಯದಲ್ಲಿ ಗಂಡನ ಪಾತ್ರ ಬಹಳ ಮುಖ್ಯವಾಗುತ್ತದೆ. ಗಂಡನ ಸಹಕಾರ ಹಾಗೂ ಗಂಡ ಜೊತೆಗೆ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಬೇಕೆಂದು ಒತ್ತಡ ಹೇರಬಾರದು. ಅಲ್ಲದೆ ಚೆನ್ನಾಗಿ ಕಾಣುತ್ತಿಲ್ಲ ಎಂದು ಮನಸ್ಸು ನೋಯಿಸ ಬಾರದು ಎಂದು ಹೇಳಿದ್ದಾರೆ.

ಇನ್ನು ಆ ಸಮಯದಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ನಮ್ಮ ಭಾವನೆಗಳು ಯಾವ ರೀತಿಯ ಇರುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ಆಗ ಗಂಡನ ಸಹಕಾರ ಹಾಗೂ ಅವರು ನಮ್ಮನ್ನು ಯಾವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಸೈಫ್ ನನಗೆ ತುಂಬಾ ಸಹಕಾರಿಯಾಗಿದ್ದರು. ನನ್ನ ಭಾವನೆ ಹಾಗೂ ಮೂಡ್​ ಅನ್ನು ಅರ್ಥ ಮಾಡಿಕೊಂಡು ನನ್ನ ಜೊತೆ ಹೇಗಿರಬೇಕೆಂದು ತಾಳ್ಮೆಯಿಂದ ವರ್ತಿಸುತ್ತಿದ್ದರು. ಈ ಸಮಯದಲ್ಲಿ ನಮ್ಮ ಲೈಂಗಿಕ ಜೀವನಸ್ಮೂತ್ & ಆ್ಯಕ್ಟೀವ್ ಆಗಿ ಇರಬೇಕು ಎಂದಿದ್ದಾರೆ ಕರೀನಾ.

ಅದರಲ್ಲೂ ವಿಶೇಷವೆಂದರೆ ಇತ್ತೀಚಿಗೆ ಬಿಡುಗಡೆಯಾದ ಕರೀನಾ ಕಪೂರ್ ಅವರ ಪ್ರೆಗ್ನೆನ್ಸಿ ಬೈಬಲ್‌ ಎಂಬ ಪುಸ್ತಕದ ಮೂಲಕವೇ ಎರಡನೇ ಪುತ್ರನ ನಿಜವಾದ ಹೆಸರು ಬಹಿರಂಗವಾಗಿದೆ. ಮಗುವಿಗೆ ಜಹಾಂಗೀರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದಾರೆ.