ಕೆರೆಯಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

Share the Article

ವ್ಯಕ್ತಿಯೋರ್ವರು ಕೆರೆಯ ನೀರಿನಲ್ಲಿ ಈಜಲು ತೆರಳಿದ್ದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ನಾರ್ಲಪಡೀಲಿನಲ್ಲಿ ಇಂದು ಸಂಜೆ ಸಂಭವಿಸಿದೆ.

ನಾರ್ಲಪಡೀಲು ನಿವಾಸಿ ರಾಜೇಶ್ ಶೆಟ್ಟಿ (55) ಎಂಬವರೇ ಮೃತಪಟ್ಟ ವ್ಯಕ್ತಿ. ತಲಪಾಡಿ ಟೋಲ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆರೆಯಲ್ಲಿ ಸ್ಥಳೀಯರು ಈಜಲು ಹೋಗುತ್ತಿದ್ದು ರಾಜೇಶ್ ಕೂಡಾ ಈಜಲು ತೆರಳಿದ್ದರು.

ರಾಜೇಶ್ ಇಂದು ಸಂಜೆ ಈಜುವಾಗ ಏಕಾಏಕಿ ಮುಳುಗಿ ಅಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಿಸಲು ಮುಂದಾದರೂ ಅದಾಗಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Leave A Reply