Home Breaking Entertainment News Kannada ಹಾಕಿದ ಬುರ್ಕಾ ಮತ್ತೆ ಕೊಡ್ತಾ ಕೈ ?! | ಅಜೀಜ್ ಪಾಷಾ ನ ನಂಬಿ ಕೆಟ್ಲಾ...

ಹಾಕಿದ ಬುರ್ಕಾ ಮತ್ತೆ ಕೊಡ್ತಾ ಕೈ ?! | ಅಜೀಜ್ ಪಾಷಾ ನ ನಂಬಿ ಕೆಟ್ಲಾ ‘ ಗಂಡ ಹೆಂಡತಿ ‘ ಸಂಜನಾ ?!

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ನಟಿ ಜೈಲು ಸೇರಿದ್ದ ಸಮಯದಲ್ಲಿ, ಅವರ ಮದುವೆ ವಿಷಯವೂ ಬಹಿರಂಗವಾಗಿತ್ತು. ಜಾಮೀನಿನ ಮೇಲೆ ಹೊರಬಂದಿದ್ದ ಸಂಜನಾ, ಪತಿ ಅಜೀಜ್ ಪಾಷ ಅವರ ಜೊತೆಗೆ ವಿವಾಹವಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಆದರೆ ಪ್ರೀತಿಸಿ ಅಂತರ್ ಧರ್ಮೀಯ ವಿವಾಹವಾಗಿದ್ದ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹಾಗಾಗಿ ಇದೀಗ ವಿವಾಹ ವಿಚ್ಛೇದನ ಪಡೆಯುವುದಕ್ಕೆ ನಿರ್ಧಾರ ಮಾಡಿದ್ದಾರೆ ಅನ್ನೋ ಸುದ್ದಿ ಹರಡಿದೆ.

ನಟನೆಯ ಮೂಲಕ ಅನೇಕರ ಮನ ಗೆದ್ದು ಪ್ರಸಿದ್ಧಿ ಪಡೆದಿದ್ದ ನಟಿ ಸಂಜನಾ, ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರು. ಇದೇ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ಅಜೀಜ್ ಪಾಷಾ ಜೊತೆ ಸಂಜನಾ ಗೌಪ್ಯವಾಗಿ ಮದುವೆಯಾದ ಸಂಗತಿ ಬೆಳಕಿಗೆ ಬಂದಿತ್ತು.

ಜೈಲಿನಿಂದ ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆದು ಹೊರಬಂದ ಸಂಜನಾ ಬಳಿಕ ಮಾಧ್ಯಮಗಳ ಎದುರು ತಮ್ಮ ಮದುವೆ ವಿಚಾರವನ್ನು ಒಪ್ಪಿಕೊಂಡಿದ್ದರು. ಸಂಜನಾ ಅಂತರ ಧರ್ಮೀಯ ವಿವಾಹವಾಗಿದ್ದು, ತಮ್ಮದು ಪ್ರೇಮ ವಿವಾಹವೆಂದು ಹೇಳಿದ್ದರು.

ವೈದ್ಯ ಅಜೀಜ್ ಪಾಷ ಅವರೊಂದಿಗೆ ವಿವಾಹವಾಗಿರುವ ಸಂಜನಾ ತಮ್ಮ ಹೆಸರನ್ನೂ ಬದಲಿಸಿಕೊಂಡಿದ್ದಾರೆ ಎಂದು ಈ ಹಿಂದೆ ಅವರ ಮದುವೆಯ ಪ್ರಮಾಣಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಹಾಗೆಯೇ ನಟಿ ಪತಿಗಾಗಿ ಪ್ರೀತಿಯಿಂದ ಟ್ಯಾಟೂ ಹಾಕಿಸಿಕೊಂಡಿದ್ದನ್ನು ಹೇಳಿಕೊಂಡು, ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯನ್ನು ತೋರ್ಪಡಿಸಿದ್ದರು.

ನಟಿ ಸಂಜನಾ ಮುಸ್ಲಿಂ ಧರ್ಮದ ವ್ಯಕ್ತಿಯನ್ನು ವಿವಾಹವಾಗಿದ್ದರಿಂದ, ನ್ಯಾಯಾಲಯಕ್ಕೂ ಕೂಡ ಮುಸ್ಲಿಂ ಸಾಂಪ್ರದಾಯಿಕ ಉಡುಗೆ ಬುರ್ಖಾ ಧರಿಸಿ ಹಾಜರಾಗಿ, ತಾನು ಪತಿಯ ಧರ್ಮವನ್ನೇ ಪಾಲಿಸುತ್ತೇನೆ ಎಂದು ಹೇಳಿಕೊಂಡಿದ್ದರು.

ಮೂಲಗಳ ಪ್ರಕಾರ ಖಾಸಗಿ ಆಸ್ಪತ್ರೆಯಲ್ಲಿರುವ ವೈದ್ಯ ಡಾ.ಅಜೀಜ್ ಪಾಷಾಗೆ ಸಂಜನಾ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದು ಸಾಕಷ್ಟು ಮುಜುಗರಕ್ಕೆ ಕಾರಣವಾಗಿದೆಯಂತೆ. ಅಲ್ಲದೇ ಸಂಜನಾ ಜೈಲು ಸೇರಿದ ವೇಳೆ ಸಂಜನಾ ಪಾರ್ಟಿ ಸೇರಿದಂತೆ ಹಲವು ಸಂಗತಿ ಹೊರಬಿದ್ದ ಕಾರಣಕ್ಕೆ ಸಂಜನಾ ಸಂಸಾರ ಡಿವೋರ್ಸ್ ಹಂತ ತಲುಪಿದೆ ಎನ್ನಲಾಗಿದೆ.

ಈಗ ಈ ನಟಿಯ ವೈಯಕ್ತಿಕ ಜೀವನದ ಕುರಿತಾದ ಈ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ವೈರಲ್ ಆಗಿದೆ. ಆದರೆ ಈ ಬಗೆಗೆ ಸಂಜನಾ ಮಾತ್ರ ಯಾವ ಮಾಹಿತಿಯನ್ನೂ ಈವರೆಗೆ ಖಚಿತಪಡಿಸಿಲ್ಲ.

ಗಂಡ-ಹೆಂಡತಿ ಚಿತ್ರದಲ್ಲಿ ನಟಿಸಿದ್ದ ಸಂಜನಾ ಗೆ ಒಳ್ಳೆಯ ಹೆಂಡತಿಯಾಗಲು ಸಾಧ್ಯವಾಗಲಿಲ್ಲವೇ? ಅಥವಾ ಅಜೀಜ್ ಪಾಷಾ ಗೆ ಒಳ್ಳೆಯ ಗಂಡನಾಗಲು ಸಾಧ್ಯವಾಗಲಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳು ಇದೀಗ ಚರ್ಚೆಯಾಗುತ್ತಿದೆ.