ಗಂಡನಿಂದ ವರದಕ್ಷಿಣೆ ಕಿರುಕುಳ, ಮಾವನಿಂದ ಮಂಚಕ್ಕೆ ಆಹ್ವಾನ!!ನೊಂದ ಮಹಿಳೆಯಿಂದ ಪೊಲೀಸರಿಗೆ ದೂರು

Share the Article

ಮಾವ ತನ್ನ ದೇಹಕ್ಕಾಗಿ ಆಸೆ ಪಡುತ್ತಿದ್ದಾನೆ, ಗಂಡ ವರದಕ್ಷಿಣೆಗೆ ಪೀಡಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.ಕೋರಮಂಗಲ ನಿವಾಸಿಯಾದ ಹರೀಶ್(31) ಮತ್ತು ಆತನ ತಂದೆ ರಾಮಕೃಷ್ಣ(61) ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ :2016 ರಲ್ಲಿ ಮದುವೆಯಾಗಿದ್ದ ಆ ದಂಪತಿಗಳ ಸಂಬಂಧ ಮೊದಮೊದಲಿಗೆ ಸರಿಯಾಗಿಯೇ ಇತ್ತು. ನಂತರದಲ್ಲಿ ಕಟ್ಟಿಕೊಂಡ ಗಂಡ ತವರು ಮನೆಯಿಂದ 10 ಲಕ್ಷ ರೂ. ವರದಕ್ಷಿಣೆ ತಂದುಕೊಡುವಂತೆ ಜಗಳವಾಡಲು ಶುರುಮಾಡಿದ್ದಾನೆ.ಆ ಬಳಿಕ ಗಂಡನಿಲ್ಲದ ಸಮಯದಲ್ಲಿ ಮಹಿಳೆಯ ಮಾವ ಆಕೆಯ ಬಳಿ ಬಂದು ನಿನಗೆ ಏನು ಸಹಾಯ ಬೇಕಾದರೂ ನಾನು ಮಾಡಿಕೊಡುತ್ತೇನೆ, ನನ್ನ ಆಸೆ ತೀರಿಸಲು ನನ್ನೊಂದಿಗೆ ಮಂಚಕ್ಕೆ ಬರಬೇಕು ಎಂದು ಒತ್ತಾಯ ಮಾಡಿದ್ದಾನೆ.

ಇಷ್ಟಕ್ಕೂ ಸುಮ್ಮನಾಗದ ಕಾಮುಕ ಮಾವ ಮಹಿಳೆ ಸ್ನಾನ ಮಾಡುವ ಸಂದರ್ಭದಲ್ಲಿ ಬಲವಂತವಾಗಿ ಬಾಗಿಲು ತೆಗೆಸುತ್ತಿದ್ದ, ಕಿಟಕಿಯಲ್ಲಿ ಇಣುಕಿ ನೋಡಿ ಕಿರುಕುಳ ಕೊಡುತ್ತಿದ್ದ. ಬಟ್ಟೆ ಬದಲಿಸುವಾಗ ರೂಮ್ ನೊಳಗೆ ನುಗ್ಗಲು ಯತ್ನಿಸುತ್ತಿದ್ದ ಎಂದು ನೊಂದ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Leave A Reply